ಇಸ್ರೇಲ್‌ನಲ್ಲೊಂದು 'ಡಕೋಟಾ ಎಕ್ಸ್‌ಪ್ರೆಸ್' ಸ್ಟೋರಿ

ಕೆಲವು ವರ್ಷಗಳ ಹಿಂದೆ ರಾಕ್‌ಲೈನ್‌ ವೆಂಕಟೇಶ್‌ ಹಾಗೂ ಓಂಪ್ರಕಾಶ್‌ ಕಾಂಬಿನೇಶನ್‌ನಲ್ಲಿ ಬಂದ ಸೂಪರ್ ಹಿಟ್ ಚಲನಚಿತ್ರ 'ಡಕೋಟಾ ಎಕ್ಸ್‌ಪ್ರೆಸ್' ಚಿತ್ರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯೋವೃದ್ಧರತನಕ ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದ ಈ ಚಿತ್ರದಲ್ಲಿ ಗುಜುರಿ ಬಸ್ ಹಿಂದೆ ಇಬ್ಬರ ಕಥೆ ಸುತ್ತಾಡುತ್ತಿತ್ತು.

ಅಂದ ಹಾಗೆ ನಾವಿಂದು ಮಾತನಾಡುತ್ತಿರುವ ವಿಷಯ ಗುಜರಿ ಬಸ್ಸಿಗೆ ಸಂಬಂಧಪಟ್ಟಿದ್ದೆ. ಯಾರಿಗೂ ಬೇಡವಾದ ಗುಜರಿ ಬಸ್ಸೊಂದಕ್ಕೆ ಆಧುನಿಕ ಟಚ್ ನೀಡಿದರೆ ಹೇಗಿರಬಹುದು? ಹೌದು, ಇಂತಹದೊಂದು ಪ್ರಯಾಣಿಕ ಪ್ರಯತ್ನದ ಮೂಲಕ ಯಶಸ್ಸನ್ನು ಸಾಧಿಸಿದ ಮಹಿಳೆಯರಿಬ್ಬರ ಕಥೆಯನ್ನು ನಾವಿಂದು ಹೇಳಲಿದ್ದೇವೆ.

ಲಗ್ಷುರಿ ಮೋಟಾರ್ ಬಸ್ಸು, ಮೋಟಾರು ಹೋಮ್ ಹೀಗೆ ಐಷಾರಾಮಿ ಸೌಲಭ್ಯಗಳನ್ನು ಒದಗಿಸುತ್ತಿರುವ ಹಲವು ವಿಧಧ ವಾಹನಗಳ ಬಗ್ಗೆ ನಾವು ಕೇಳಿರುತ್ತೇವೆ. ಜಗತ್ತಿನ ಕೆಲವೇ ಕೆಲವು ಶ್ರೀಮಂತರು ಮಾತ್ರ ಇಂತಹ ದುಬಾರಿ ವಾಹನಗಳನ್ನು ಹೊಂದಿರುತ್ತಾರೆ. ಆದರೆ ಇಂತಹದೊಂದು ಐಷಾರಾಮಿ ಮನೆಯನ್ನು ನೀವು ಕೂಡಾ ತಯಾರಿಸಬಹುದು. ಇದಕ್ಕೆ ಬೇಕಾಗಿರುವ ಪರಿಕರಗಳು ಇಷ್ಟೇ- ಕೆಟ್ಟು ಹೋಗಿರುವ ಬಸ್ಸು ಹಾಗೂ ಅಗತ್ಯ ಪೀಠೋಪಕರಣಗಳು.

ಆಧುನಿಕ ಟಚ್

ಆಧುನಿಕ ಟಚ್

ಇಸ್ರೇಲ್‌ನ ಇಬ್ಬರು ಮಹಿಳೆಯರ ಮನದಲ್ಲಿ ಇಂತಹದೊಂದು ಯೋಚನೆ ಹೊಳೆದಿದೆ. ಅವರೇ Tally Saul ಮತ್ತು Hagit Morevski

ವಿನ್ಯಾಸ

ವಿನ್ಯಾಸ

ವೃತ್ತಿನಿರತ ವಿನ್ಯಾಸ ಸಂಸ್ಥೆ ವಾರ್ಡ್ ಡಿಸೈನ್ ಈ ಗುಜರಿ ಬಸ್ಸನ್ನು ವಿನ್ಯಾಸಗೊಳಿಸಿದೆ. ಅಂದ ಹಾಗೆ ನೀವೇ ವಿನ್ಯಾಸ ಪ್ರವೀಣರಾಗಿದ್ದರೆ ವೆಚ್ಚ ಕಡಿಮೆ ಮಾಡಬಹುದಾಗಿದೆ.

ಗುಜರಿ ಬಸ್ಸಿಗೆ ಐಷಾರಾಮಿ ಟಚ್

ಅಂತಿಮದಲ್ಲಿ ಬಸ್ಸಿಗೆ ಐಷಾರಾಮಿ ಟಚ್ ನೀಡುವ ಪ್ರಯತ್ನ ಮಾಡಲಾಗಿದೆ. ಬಸ್ಸು ಒಳಗಡೆಯ ಸೀಮಿತ ಜಾಗವನ್ನು ಅಚ್ಚುಕಟ್ಟಾಗಿ ಬಳಸಲಾಗಿದೆ.

ಗುಜರಿ ಬಸ್ಸಿಗೆ ಐಷಾರಾಮಿ ಟಚ್

12 ಫೀಟ್ ಉದ್ದವಿರುವ ಈ ಬಸ್ಸು 2.5 ಫೀಟ್ ಅಗಲ ಹೊಂದಿದೆ. ಹಾಗೆಯೇ ಎಸಿಗಳಂತಹ ಆಧುನಿಕ ಫೀಚರ್‌ಗಳನ್ನು ಹೊಂದಿದೆ.

ಗುಜರಿ ಬಸ್ಸಿಗೆ ಐಷಾರಾಮಿ ಟಚ್

ಬಸ್ಸಿನ ಒಂದು ಬದಿಯಲ್ಲಿ ಅಡುಗೆ ಕೋಣೆ ಹಾಗೂ ಕಾಫಿ ಟೇಬಲ್ ಲಗ್ಗತ್ತಿಸಲಾಗಿದೆ. ಹಾಗೆಯೇ ಇನ್ನೊಂದೆಡೆ ಬೆಡ್‌ರೂಂ ವ್ಯವಸ್ಥೆಯಿದೆ.

ಗುಜರಿ ಬಸ್ಸಿಗೆ ಐಷಾರಾಮಿ ಟಚ್

ಇವೆರಡ ಮಧ್ಯದಲ್ಲಿ ಶೌಚಾಲಯಗೆ ಸ್ಥಾನ ಕಲ್ಪಿಸಿಕೊಡಲಾಗಿದೆ. ಇದರ ಪಕ್ಕದಲ್ಲೇ ಬ್ರಿಟಿಷ್ ನಟಿ ಆಂಡ್ರಿ ಹೆಪ್‌ಬರ್ನ್ ಚಿತ್ರ ಕೂಡಾ ಇದೆ.

ಗುಜರಿ ಬಸ್ಸಿಗೆ ಐಷಾರಾಮಿ ಟಚ್

ಆದರೆ ಇವೆಲ್ಲಕ್ಕೂ ವಿದ್ಯುತ್ ಎಲ್ಲಿಂದ ಸಪ್ಲೇ ಆಗುತ್ತಿದೆ ಎಂಬುದಕ್ಕೆ ಮಾಹಿತಿ ಲಭ್ಯವಾಗಿಲ್ಲ. ಹಾಗಿದ್ದರೂ ಸೂರ್ಯಶಾಖದಿಂದ ವಿದ್ಯುತ್ ಪಸರಿಸಲಾಗುತ್ತಿದೆಯೆಂಬ ಮಾಹಿತಿಯಿದೆ. ಅಷ್ಟಕ್ಕೂ ಮಾರಾಟಕ್ಕೆ ಲಭ್ಯವಿರುವ ಈ ಬಸ್ಸು 2 ಕೋಟಿಗಳಷ್ಟು ದುಬಾರಿಯಾಗಿದೆ.

ಫೋಟೊ ಕೃಪೆ: Decoist.com

More from DriveSpark

Article Published On: Saturday, August 31, 2013, 15:49 [IST]
English summary
Let us start by showing you how the bus looked before the transformation. We do not know how much Tally Saul and Hagit Morevski paid for the discarded bus, but we can be sure for a broken down bus it would not be a fortune.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+