17 ವರ್ಷಗಳ ಬಳಿಕ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಲೋಕಾರ್ಪಣೆ

Written By:

17 ವರ್ಷಗಳ ಸುದೀರ್ಘ ಅವಧಿಯ ನಿರ್ಮಾಣ ಕಾಮಗಾರಿಯ ಬಳಿಕ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಸ್ವಿಜರ್ಲೆಂಡ್ ನಲ್ಲಿ ಲೋಕಾರ್ಪಣೆಯಾಗಲು ಸಜ್ಜಾಗಿದೆ. ಪರ್ವತ ಶಿಖರದ ಅಡಿಯಲ್ಲಿ ನಿರ್ಮಿಸಲಾಗಿರುವ ಗಾತ್ಥರ್ಡ್ ಬೇಸ್ ಟನಲ್ (ಜಿಬಿಟಿ) ಸುರಂಗ ಮಾರ್ಗ 57 ಕೀ.ಮೀ. ದೂರವನ್ನು ಕ್ರಮಿಸಲಿದೆ.

1947ನೇ ಇಸವಿಯಲ್ಲೇ ಈ ಮಹತ್ತರ ಯೋಜನೆಗೆ ರೇಖಾಚಿತ್ರ ತಯಾರಿಸಿತ್ತಾದರೂ 17 ವರ್ಷಗಳ ಹಿಂದೆಯಷ್ಟೇ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಲ್ಲಿ ನಿರ್ಮಿಸಲಾಗಿರುವ ಎರಡು ಸಿಂಗಲ್ ಟ್ರ್ಯಾಕ್ ಸುರಂಗ ಮಾರ್ಗಳು ಎರ್ಸ್ಟ್ ಫೆಲ್ಡ್, ಬೊಡಿಯೊ ಮತ್ತು ಸೆಡ್ರೂನ್ ಪ್ರದೇಶವನ್ನು ಸಂಪರ್ಕಿಸಲಿದೆ.

17 ವರ್ಷಗಳ ಬಳಿಕ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಲೋಕಾರ್ಪಣೆ

ಪರಿಸರ ಜೊತೆಗೆ ಆರ್ಥಿಕ ಲಾಭಕ್ಕಾಗಿ ಗಾತ್ಥರ್ಡ್ ಶೃಂಗಶ್ರೇಣಿಯ 7545 ಅಡಿ ಆಳದಲ್ಲಿ ಸುರಂಗ ಮಾರ್ಗ ಕೊರೆಯಲಾಗಿದೆ ಎಂದು ಅಧಿಕೃತರು ಅಭಿಪ್ರಾಯಪಟ್ಟಿದ್ದಾರೆ.

17 ವರ್ಷಗಳ ಬಳಿಕ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಲೋಕಾರ್ಪಣೆ

ಜೂನ್ ತಿಂಗಳಲ್ಲಿ ಪರೀಕ್ಷಾರ್ಥ ಸಂಚಾರ ಪ್ರಯೋಗ ಆರಂಭಗೊಳ್ಳಲಿದ್ದು, ಪ್ರಸಕ್ತ ಸಾಲಿನ ಡಿಸೆಂಬರ್ ನಲ್ಲಿ ಪ್ರಯಾಣಿಕರು ಹೊತ್ತುಕೊಂಡು ಸವಾರಿ ಆರಂಭಿಸಲಿದೆ.

17 ವರ್ಷಗಳ ಬಳಿಕ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಲೋಕಾರ್ಪಣೆ

17 ವರ್ಷಗಳ ಹಿಂದೆ ಆರಂಭಿಸಲಾದ ಕಾಮಗಾರಿಯಲ್ಲಿ ಇದುರೆಗೆಗೆ 28.2 ಮಿಲಿಯನ್ ಟನ್ ಗಳಷ್ಟು ಪರ್ವತ ಬಂಡೆಕಲ್ಲನ್ನು ಕೊರೆಯಲಾಗಿದೆ.

17 ವರ್ಷಗಳ ಬಳಿಕ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಲೋಕಾರ್ಪಣೆ

ಈ ಮಹತ್ತರ ಸುರಂಗ ಮಾರ್ಗ ಯೋಜನೆ ನಿರ್ಮಾಣಕ್ಕಾಗಿ ಬರೋಬ್ಬರಿ 12 ಬಿಲಿಯನ್ ಅಮೆರಿಕನ್ ಡಾಲರ್ ವ್ಯಯ ಮಾಡಲಾಗಿದೆ.

17 ವರ್ಷಗಳ ಬಳಿಕ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಲೋಕಾರ್ಪಣೆ

ಯುರೋಪ್ ಹೃದಯ ಭಾಗದಲ್ಲಿ ಗಂಟೆಗೆ 250 ಕೀ.ಮೀ. ವೇಗದಲ್ಲಿ ಸಂಚರಿಸಲಿರುವ ರೈಲು ಝೂರಿಕ್ ಮತ್ತು ಮಿಲನ್ ನಡುವಣ ಅಂತರದ ಅವಧಿಯನ್ನು ಒಂದು ತಾಸಿನಷ್ಟು ತಗ್ಗಿಸಲಿದ್ದು, ಎರಡು ಗಂಟೆ 40 ನಿಮಿಷಗಳಲ್ಲಿ ಗಮ್ಯಸ್ಥಾನ ತಲುಪಬಹುದಾಗಿದೆ.

17 ವರ್ಷಗಳ ಬಳಿಕ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಲೋಕಾರ್ಪಣೆ

ಇದುವರೆಗೆ ವಿಶ್ವದ ಅತಿ ಉದ್ದದ ಸುರಂಗ ಎಂಬ ಹೆಗ್ಗಳಿಕೆಗೆ 33.46 ಮೈಲು ದೂರದ ಜಪಾನ್ ನ ಶೀಕೆನ್ ಪಾತ್ರವಾಗಿತ್ತು. ಇದನ್ನೀಗ ಸ್ವಿಜರ್ಲೆಂಡ್ ಹಿಂದಕ್ಕಲಿದೆ. ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವಣ ಸುರಂಗ ಮಾರ್ಗವು 31.4 ಮೈಲು ದೂರವಿದೆ.

17 ವರ್ಷಗಳ ಬಳಿಕ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಲೋಕಾರ್ಪಣೆ

ಈ ಬಹುನಿರೀಕ್ಷಿತ ಸುರಂಗ ಮಾರ್ಗವನ್ನು 'ಯುರೋಪ್ ‌ಗೆ ದೈವದತ್ತ' ಎಂದು ವಿಶ್ಲೇಷಿಸಲಾಗುತ್ತಿದೆ.

17 ವರ್ಷಗಳ ಬಳಿಕ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಲೋಕಾರ್ಪಣೆ

ಒಟ್ಟಿನಲ್ಲಿ ಸುರಂಗ ಮಾರ್ಗ ತೆರೆಯುವುದರೊಂದಿಗೆ ಪ್ರಯಾಣಿಕರು ಸ್ವಿಸ್ ಆಲ್ಪ್ ಕಣಿವೆಯ ಭವ್ಯ ಮನೋಹರ ದೃಶ್ಯಗಳನ್ನು ಆಸ್ವಾದಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ.

English summary
World's longest railway tunnel in Switzerland
Story first published: Wednesday, May 25, 2016, 12:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark