ಭಾರತದಲ್ಲಿ ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲ್ವೆ ಬ್ರಿಡ್ಜ್

ಜಮ್ಮು-ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ವಿಶ್ವದ ಅತಿ ಎತ್ತರ ರೈಲ್ವೆ ಸೇತುವೆಯ ನಿರ್ಮಾಣ ಕಾರ್ಯವು ಕೊನೆಯ ಹಂತಕ್ಕೆ ತಲುಪಿದ್ದು, ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಹೆಚ್ಚು ಎತ್ತರ ಎಂಬ ಹೆಗ್ಗಳಿಕೆಗೆ ಈ ರೈಲ್ವೆ ಸೇತುವೆಯ ಪಾಲಾಗಲಿದೆ.

ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲು ಸೇತುವೆ

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತಿ ಎತ್ತರ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾರ್ಯವು ಸದ್ಯ ಭರದಿಂದ ಸಾಗಿದ್ದು, 2020 ವೇಳೆಗೆ ಅಧಿಕೃತವಾಗಿ ಸೇವೆಗೆ ಲಭ್ಯವಾಗಬೇಕಿದ್ದ ಬ್ರಿಡ್ಜ್ ನಿರ್ಮಾಣ ಕಾರ್ಯವು ತಾಂತ್ರಿಕ ಕಾರಣಗಳಿಂದ 2022ರ ವೇಳೆ ಪೂರ್ಣಗೊಳಿಸುವ ಗುರಿಹೊಂದಲಾಗಿದೆ. ಹೊಸ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾರ್ಯಕ್ಕೆ 2002ರಲ್ಲೇ ಅನುಮೊದನೆ ಸಿಕ್ಕಿದ್ದರೂ ಕೂಡಾ ನಾನಾ ಕಾರಣಗಳಿಂದ ನಿರ್ಮಾಣ ಕಾರ್ಯವು ಮುಂದೂಡತ್ತಲೇ ಬಂದಿದ್ದು, ಇದೀಗ ಬ್ರಿಡ್ಜ್ ನಿರ್ಮಾಣ ಕಾರ್ಯವು ಕೊನೆಯ ಹಂತದಲ್ಲಿದೆ.

ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲು ಸೇತುವೆ

2002ರಲ್ಲೇ ದೇಶದ ಅತಿ ದೊಡ್ಡ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿದ್ದ ಉತ್ತರ ರೈಲ್ವೆ ವಿಭಾಗವು 2009ಕ್ಕೆ ಸೇವೆಗೆ ಮುಕ್ತಗೊಳಿಸುವ ಗುರಿಯೋಜನೆ ಹೊಂದಿತ್ತು. ಆದರೆ ಭೌಗೋಳಿಕ ಅಸ್ಥಿರತೆ ಮತ್ತು ಸುರಕ್ಷತೆಯ ದೃಷ್ಠಿಯಿಂದ ದೇಶದ ದೊಡ್ಡ ಯೋಜನೆಯನ್ನು ಮುಂದೂಡಿಕೆ ಮಾಡುತ್ತಲೇ ಬಂದಿತ್ತು.

ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲು ಸೇತುವೆ

2008ರಲ್ಲಿ ಹೊಸ ಯೋಜನೆಗೆ ಮರುಜೀವ ನೀಡುವ ಮೂಲಕ ಬ್ರಿಡ್ಜ್ ನಿರ್ಮಾಣ ಕಾರ್ಯವನ್ನು ಮತ್ತೆ ಪುನಾರಂಭಿಸಿದ ರೈಲ್ವೆ ಇಲಾಖೆಯು 2015ರ ವೇಳೆಗೆ ಪೂರ್ಣಗೊಳಿಸುವ ಯೋಜನೆ ಹೊಂದಿತ್ತು. ಆದರೆ ನಿಗದಿತ ಸಮಯದಲ್ಲಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾರ್ಯವು ತಾಂತ್ರಿಕ ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಬಂದಿದೆ.

ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲು ಸೇತುವೆ

ಭೌಗೋಳಿಕವಾಗಿ ಇಕ್ಕಟ್ಟಿನ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಬ್ರಿಡ್ಜ್ ನಿರ್ಮಾಣವು ರೈಲ್ವೆ ಇಲಾಖೆಗೆ ಮಾತ್ರವಲ್ಲದೆ ವಿವಿಧೋದ್ದೇಶಗಳಿಗೆ ಸಾಕಷ್ಟು ಸಹಕಾರಿಯಾಗಿರುವುದರಿಂದ ಬ್ರಿಡ್ಜ್ ನಿರ್ಮಾಣ ಕಾರ್ಯವನ್ನು ಸಂಕಷ್ಟು ನಡುವೆಯೂ ಮುಂದುವರಿಸಲಾಗಿದ್ದು, ಈಗಾಗಲೇ ಶೇ.80 ರಷ್ಟು ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ.

ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲು ಸೇತುವೆ

ಬ್ರಿಡ್ಜ್ ನಿರ್ಮಾಣದ ಪ್ರಮುಖ ತಾಂತ್ರಿಕ ಅಂಶವಾಗಿರುವ ತಳಪಾಯದ ನಿರ್ಮಾಣವು ಕಠಿಣ ಪರಿಸ್ಥಿತಿಯಲ್ಲೂ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಚೇನಾಬ್ ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿದೆ.

ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲು ಸೇತುವೆ

ಉತ್ತರ ರೈಲ್ವೆ ಇಲಾಖೆಯು ಉದ್ದಮ್‌ಪುರ್, ಜಮ್ಮು ಮತ್ತು ಬಾರಾಮುಲ್ಲಾ ನಡುವಿನ ಸಂಪರ್ಕವನ್ನು ಸರಳಗೊಳಿಸುವುದಕ್ಕಾಗಿ ಈ ಬ್ರಿಡ್ಜ್ ನಿರ್ಮಾಣ ಮಾಡುತ್ತಿದ್ದು, ಒಟ್ಟು 63 ಕಿ.ಮೀ ಉದ್ದದ ಹೊಸ ರೈಲ್ವೆ ಮಾರ್ಗದಲ್ಲಿ 7.5 ಕಿ.ಮೀ ಬ್ರಿಡ್ಜ್ ವ್ಯಾಪ್ತಿ ಹೊಂದಿದೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲು ಸೇತುವೆ

ಅದರಲ್ಲೂ 1.3 ಕಿ.ಮೀ ನಷ್ಟು ನಿರ್ಮಾಣವಾಗಿರುವ ಬ್ರಿಡ್ಜ್ ವಿಭಾಗದ ನಿರ್ಮಾಣ ಕಾರ್ಯವು ಸಾಕಷ್ಟು ಹರಸಾಹಸದಿಂದ ಕೂಡಿದ್ದು, ತಳಪಾಯ ನಿರ್ಮಾಣವು ಕೂಡಾ ಇದೀಗ ಪೂರ್ಣಗೊಂಡಿದೆ. ಕೇವಲ ಕಮಾನು ನಿರ್ಮಾಣ ಮತ್ತು ಹಳಿ ಜೋಡಣೆ ಮಾತ್ರವೇ ಬಾಕಿಯಿದೆ.

ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲು ಸೇತುವೆ

ಆಧುನಿಕ ತಂತ್ರಜ್ಞಾನ ಬಳಕೆ

ಅತಿ ಎತ್ತರದ ಪ್ರದೇಶದಲ್ಲಿ ಬ್ರಿಡ್ಜ್ ನಿರ್ಮಾಣ ಹಿನ್ನೆಲೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದ್ದು, ಚೀನಾದ ಸುಯಿಬಾಯ್ ರೈಲ್ವೆ ಬ್ರಿಡ್ಜ್ (275 ಮೀಟರ್) ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲು ಸೇತುವೆ

ಸುರಕ್ಷತೆಗೆ ಹೆಚ್ಚಿನ ಒತ್ತು

ಬ್ರಿಡ್ ನಿರ್ಮಾಣದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಲವಾರು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬ್ರಿಡ್ಜ್ ನಿರ್ಮಾಣಕ್ಕಾಗಿ ಬರೋಬ್ಬರಿ 24 ಸಾವಿರ ಟನ್ ಸ್ಟೀಲ್ ಬಳಕೆ ಮಾಡಲಾಗುತ್ತಿದೆ. ಜೊತೆಗೆ ವಿಶೇಷ ತಂತ್ರಜ್ಞಾನ ಬಳಕೆ ಹಿನ್ನೆಲೆಯಲ್ಲಿ ಈ ಬ್ರಿಡ್ಜ್ ಮೇಲೆ ಉಗ್ರರು ದಾಳಿ ಮಾಡಿದರೂ ಯಾವುದೇ ಹಾನಿಯಾಗುವುದಿಲ್ಲ.

ಜೊತೆಗೆ ಸೇತುವೆಯ ಪ್ರತಿ ಕಂಬಗಳನ್ನು ಬಾಂಬ್ ಫ್ರೂಫ್ ವ್ಯವಸ್ಥೆಯೊಂದಿಗೆ ನಿರ್ಮಾಣ ಮಾಡಲಾಗಿದ್ದು, 120 ವರ್ಷ ಬಾಳ್ವಿಕೆ ಬರಲಿದೆ. ಮತ್ತೊಂದು ವಿಶೇಷ ಅಂದ್ರೆ ಈ ಸೇತುವೆಗೆ ನೀಡಲಾಗಿರುವ ಬಣ್ಣವೇ 15 ವರ್ಷಗಳ ಕಾಲಮಿತಿ ಹೊಂದಿದ್ದು, 266 ಕಿ.ಮೀ ವೇಗದ ಬಿರುಗಾಳಿಯನ್ನು ಸಹ ತಡೆಯಬಲ್ಲದು.

ಸೇವೆಗೆ ಸಿದ್ದವಾಗುತ್ತಿದೆ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲು ಸೇತುವೆ

ಇನ್ನು ಈ ಬೃಹತ್ ಯೋಜನೆ ಪೂರ್ಣಗೊಳ್ಳುವ ವೇಳೆಗೆ ಸುಮಾರು ನಾಲ್ಕು ಸಾವಿರ ಕೋಟಿ ಖರ್ಚಾಗುವ ಸಾಧ್ಯತೆಗಳಿದ್ದು, ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಇದೇ ಮಾದರಿಯ ಸುಮಾರು 9 ಯೋಜನೆಗಳು ಪ್ರಗತಿಯಲ್ಲಿವೆ. ಎಲ್ಲಾ ಯೋಜನೆಗಳಿಗೆ ಸೇರಿ ರೂ. 21 ಸಾವಿರ ಕೋಟಿ ಎಂದು ಅಂದಾಜಿಲಾಗಿದ್ದು, ಕಳೆದ 2018ರಲ್ಲಿ ಪ್ರಧಾನಿಮಂತ್ರಿ ಅಭಿವೃದ್ದಿ ಯೋಜನೆ ಅಡಿ ಯೋಜನಾ ವೆಚ್ಚವನ್ನು ಶೇ. 27ಕ್ಕೆ ಏರಿಕೆ ಮಾಡಿ ತ್ವರಿತಗತಿ ಅಭಿವೃದ್ದಿಗೆ ಸಹಕಾರ ನೀಡಲಾಗಿದೆ.

Most Read Articles

Kannada
Read more on ಸೇತುವೆ bridge
English summary
World's Tallest Railway Bridge In J&K. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X