ಚೀನಾದಲ್ಲಿ ನಿರ್ಮಾಣವಾಗುತ್ತಿದೆ ಅತ್ಯಾಧುನಿಕ ಸೌಲಭ್ಯವುಳ್ಳ ಅತಿ ಉದ್ದದ ಸೇತುವೆ..!

Written By:

ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಹೊಸ ಹೊಸ ಯೋಜನೆಗಳನ್ನು ಸಿದ್ಧಗೊಳಿಸುವ ಚೀನಾ ಸರ್ಕಾರವು ಸದ್ಯ ವಿಶ್ವದ ಅತಿ ಉದ್ದದ ಸೇತುವೆಯೊಂದನ್ನು ನಿರ್ಮಾಣ ಮಾಡುತ್ತಿದ್ದು, ಆಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧಗೊಳ್ಳುತ್ತಿರುವ ಸೇತುವೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿರ್ಮಾಣವಾಗುತ್ತಿದೆ ಅತ್ಯಾಧುನಿಕ ಸೌಲಭ್ಯವುಳ್ಳ ಅತಿ ಉದ್ದದ ಸೇತುವೆ

ಸದ್ಯ ಜಗತ್ತಿನಲ್ಲೇ ಅತಿ ಉದ್ದದ ಸೇತುವೆಯಾಗಿರುವ ದಯಾಂಗ್ ಮತ್ತುಕುನ್‌ಶಾನ್ ಗ್ರ್ಯಾಂಡ್‌ಗಿಂತಲೂ ಹೆಚ್ಚಿನ ಸೌಲಭ್ಯವುಳ್ಳ ಸೇತುವೆಯೊಂದನ್ನು ನಿರ್ಮಾಣ ಮಾಡಲು ಮುಂದಾಗಿರುವ ಚೀನಾ ಸರ್ಕಾರವು ಹಾಕಾಂಗ್, ಸುಹಾಯ್ ಮತ್ತು ಮಾಕಾಹಾ ನಗರಗಳ ನಡುವೆ 55 ಕಿ.ಮಿ ಉದ್ದದ ಅತ್ಯಾಧುನಿಕ ಸೌಲಭ್ಯವುಳ್ಳ ಸೇತುವೆ ನಿರ್ಮಾಣ ಮಾಡುತ್ತಿದೆ.

ನಿರ್ಮಾಣವಾಗುತ್ತಿದೆ ಅತ್ಯಾಧುನಿಕ ಸೌಲಭ್ಯವುಳ್ಳ ಅತಿ ಉದ್ದದ ಸೇತುವೆ

ಇದಕ್ಕಾಗಿ ಚೀನಾ 10 ಸಾವಿರ ಕೋಟಿ ಖರ್ಚು ಮಾಡುತ್ತಿದ್ದು, ಹಾಕಾಂಗ್, ಸುಹಾಯ್ ಮತ್ತು ಮಾಕಾಹಾ ನಡುವೆ ಸುಗಮ ಸಂಚಾರಕ್ಕಾಗಿ ಈ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ನಿರ್ಮಾಣವಾಗುತ್ತಿದೆ ಅತ್ಯಾಧುನಿಕ ಸೌಲಭ್ಯವುಳ್ಳ ಅತಿ ಉದ್ದದ ಸೇತುವೆ

ಇದೊಂದು ಕೇವಲ ಸೇತುವೆಯಾಗಿರದೇ ಅತ್ಯಾಧುನಿಕ ಸೌಲಭ್ಯವುಳ್ಳ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸ್ಟೇಷನ್ ಹಾಗೂ ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಐಷಾರಾಮಿ ಹೋಟೆಲ್‌ಗಳು ಕೂಡಾ ಸೇತುವೆಯ ಮೇಲ್ಭಾಗದಲ್ಲಿ ನಿರ್ಮಾಣವಾಗಲಿವೆ.

ನಿರ್ಮಾಣವಾಗುತ್ತಿದೆ ಅತ್ಯಾಧುನಿಕ ಸೌಲಭ್ಯವುಳ್ಳ ಅತಿ ಉದ್ದದ ಸೇತುವೆ

ಚೀನಾದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಪರಿಸರ ಮಾಲಿನ್ಯದ ಪ್ರಮಾಣ ಕೂಡಾ ಏರಿಕೆಯಾಗುತ್ತಿದ್ದು, ಇದನ್ನು ತಡೆಯಲು ಹೊಸ ಸೇತುವೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸಲು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ನಿರ್ಮಾಣವಾಗುತ್ತಿದೆ ಅತ್ಯಾಧುನಿಕ ಸೌಲಭ್ಯವುಳ್ಳ ಅತಿ ಉದ್ದದ ಸೇತುವೆ

ಹೀಗಾಗಿಯೇ ಹಾಕಾಂಗ್, ಸುಹಾಯ್ ಮತ್ತು ಮಾಕಾಹಾ ನಡುವಿನ ಒಟ್ಟು 55 ಕಿ.ಮಿ ಉದ್ದದ ಸೇತುವೆಯಲ್ಲಿ 550 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳು ನಿರ್ಮಾಣವಾಗಲಿದ್ದು, ಇದು ವಾಹನ ಸವಾರರಿಗೆ ಸಾಕಷ್ಟು ಪ್ರಯೋಜನವಾಗಲಿದೆ.

ನಿರ್ಮಾಣವಾಗುತ್ತಿದೆ ಅತ್ಯಾಧುನಿಕ ಸೌಲಭ್ಯವುಳ್ಳ ಅತಿ ಉದ್ದದ ಸೇತುವೆ

ಹೊಸ ಸೇತುವೆ ನಿರ್ಮಾಣದಿಂದಾಗಿ ಹಾಕಾಂಗ್, ಸುಹಾಯ್ ಮತ್ತು ಮಾಕಾಹಾ ನಡುವಿನ ಪ್ರಮಾಣದ ಅವಧಿ ಕೂಡಾ ತಗ್ಗಲಿದ್ದು, ಕೇವಲ 30 ನಿಮಿಷದಲ್ಲಿ ಮೂರು ನಗರಗಳನ್ನು ತಲುಪಬಹುದಾಗಿದೆ.

ನಿರ್ಮಾಣವಾಗುತ್ತಿದೆ ಅತ್ಯಾಧುನಿಕ ಸೌಲಭ್ಯವುಳ್ಳ ಅತಿ ಉದ್ದದ ಸೇತುವೆ

ಅತ್ಯಾಧುನಿಕ ಸೇತುವೆ ಮೇಲೆ ಖಾಸಗಿ ವಾಹನಗಳು, ಬಸ್ ಮತ್ತು ವಾಣಿಜ್ಯ ವಾಹನಗಳ ಓಡಾಟಕ್ಕೆ ಅವಕಾಶವಿದ್ದು, ನಿಗದಿತ ಶುಲ್ಕ ಪಾವತಿಸಿ ಸಂಚಾರ ಮಾಡಬಹುದಾಗಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ನಿರ್ಮಾಣವಾಗುತ್ತಿದೆ ಅತ್ಯಾಧುನಿಕ ಸೌಲಭ್ಯವುಳ್ಳ ಅತಿ ಉದ್ದದ ಸೇತುವೆ

ಇನ್ನು ಹೊಸ ಸೇತುವೆಯ ನಿರ್ಮಾಣ ಕಾರ್ಯ ಕೂಡಾ ಕೊನೆಯ ಹಂತದಲ್ಲಿದ್ದು, ಇದೇ ವರ್ಷದ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಮೂಲಕ ವಿಶ್ವದ ಅತಿ ಉದ್ದದ ಸೇತುವೆಗಳನ್ನು ನಿರ್ಮಾಣ ಮಾಡುವಲ್ಲಿ ಮುಂಚೂಣಿಯಲ್ಲಿರುವ ಚೀನಾ, ಸಾರಿಗೆ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ಮಾಣ ಮಾಡಲಾಗಿರುವ ಈ ಸೇತುವೆ ಅತಿದೊಡ್ಡ ಯೋಜನೆ ಎಂದು ಹೇಳಬಹುದು.

Read more on ಸೇತುವೆ bridge
English summary
Read in Kannada about China build world's longest sea bridge with world-class highlights.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark