Zomato: ಜೊಮ್ಯಾಟೊ ಮಾಲೀಕ ಹೊಸ ಕಾರು ಖರೀದಿ: ಬೆಲೆ ಕೇಳಿದ್ರೆ ಸುಸ್ತಾಗ್ತೀರ!

Zomato: ಕೆಲವು ಅಂತರಾಷ್ಟ್ರೀಯ ಸೂಪರ್ ಕಾರುಗಳು ಮೊದಲು ವಿದೇಶಗಳಲ್ಲಿ ಬಿಡುಗಡೆಯಾಗಿ ಆ ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತವೆ. ಅಂತಹ ಕಾರುಗಳಲ್ಲಿ ಒಂದಾದ ಬ್ರಿಟಿಷ್ ಸೂಪರ್ ಕಾರ್ ತಯಾರಕರ ಆಸ್ಟನ್ ಮಾರ್ಟಿನ್‌ನ ಹೊಸ ಜಿಟಿ ಡಿಬಿ 12 ಕೂಡ ಒಂದು. ಇದನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಕಾರನ್ನು ಭಾರತದಲ್ಲಿ ಮೊದಲು ಖರೀದಿಸಿದವರು ಜೊಮ್ಯಾಟೊ (Zomato) ಸಿಇಒ ದೀಪಿಂದರ್ ಗೋಯಲ್. ಇತ್ತೀಚೆಗಷ್ಟೆ ಡಿಬಿ 12 ಅನ್ನು ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಅವರಿಗೆ ಡೆಲಿವರಿ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು 'ಆಟೋಮೊಬಿಲಿ ಅಡೆಂಟ್' ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಈಗಾಗಲೇ ಜೊಮ್ಯಾಟೋ ಸಿಇಒ, ಪೋರ್ಷೆ 911 ಟರ್ಬೊ ಎಸ್, ಫೆರಾರಿ ರೋಮಾ, ಲ್ಯಾಂಬೊರ್ಗಿನಿ ಉರುಸ್‌ನಂತಹ ದುಬಾರಿ ಕಾರುಗಳನ್ನು ತಮ್ಮ ಗ್ಯಾರೇಜ್‌ನಲ್ಲಿ ಸಾಲಾಗಿ ನಿಲ್ಲಿಸಿದ್ದಾರೆ.

zomato-ceo-buys-aston-martin-db12-sportscar-details

ಇಂತಹ ಐಷಾರಾಮಿ ಕಾರು ಸಂಗ್ರಹಕ್ಕೆ ಇದೀಗ ಆಸ್ಟನ್ ಮಾರ್ಟಿನ್ ಡಿಬಿ 12 ಸೇರ್ಪಡೆಯಾಗಿದೆ. ಇನ್‌ಸ್ಟಾ ಪೋಸ್ಟ್‌ನಲ್ಲಿ ಹೇಳಿದಂತೆ, Zomato CEO ಸ್ಯಾಟಿನ್ ಆಸ್ಟನ್ ಮಾರ್ಟಿನ್ ರೇಸಿಂಗ್ ಗ್ರೀನ್‌ನ ಅತ್ಯಂತ ಕ್ಲಾಸಿ ಬಣ್ಣದಲ್ಲಿ ಖರೀದಿಸಿದ್ದಾರೆ. ಡೈಮಂಡ್-ಕಟ್ ಫಿನಿಶ್ ಪಡೆದ ಬೃಹತ್ 21-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಕಾರನ್ನು ಆರಿಸಿಕೊಂಡಿದ್ದಾರೆ. ಉಳಿದಂತೆ ಕಾರಿನ ನಿಖರವಾದ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಆಸ್ಟನ್ ಮಾರ್ಟಿನ್ ಕಂಪನಿಯ ಪ್ರಕಾರ, ಹೊಸದಾಗಿ ಬಿಡುಗಡೆಯಾದ ಡಿಬಿ 12, ಈಗಾಗಲೇ ಜನಪ್ರಿಯವಾಗಿರುವ ಆಸ್ಟನ್ ಮಾರ್ಟಿನ್ ಡಿಬಿ 11 ಜಿಟಿ ಸೂಪರ್ ಕಾರ್‌ನ ಅಪ್‌ಡೇಟೆಡ್ ಆವೃತ್ತಿಯಾಗಿದೆ. ಹೊಸ ಡಿಬಿ 12 ತನ್ನ ಹಳೆಯ ಆವೃತ್ತಿಗೆ ಹೋಲಿಸಿದರೆ ಶೇ80 ರಷ್ಟು ಹೊಚ್ಚ ಹೊಸ ವೈಶಿಷ್ಟ್ಯಗಳನ್ನು ಪಡೆದಿರುವುದಾಗಿ ಕಂಪನಿ ಹೇಳಿದೆ. ಹೆಚ್ಚು ತೀಕ್ಷ್ಣವಾಗಿ ಕಾಣುವ ಹೊರಭಾಗವು ಬೃಹತ್ ಮುಂಭಾಗದ ಗ್ರಿಲ್ ಪಡೆದು ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ.

zomato-ceo-buys-aston-martin-db12-sportscar-details

ಹೊಸ ಡಿಬಿ 12ನ ಮುಖ್ಯ ಹೈಲೈಟ್ ಏನೆಂದರೆ, ಅದರ ಒಳಾಂಗಣವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವುದು. ಇದು ಡ್ಯುಯಲ್ - ಟೋನ್ ಲೆದರ್ ಇಂಟೀರಿಯರ್, 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಹೊಸದಾಗಿ ವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಹಲವಾರು ಭೌತಿಕ ಬಟನ್ (physical button) ಗಳನ್ನು ಪಡೆದುಕೊಂಡಿದೆ. ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಗೇಜ್ ಕ್ಲಸ್ಟರ್ ಅನ್ನು ಸಹ ಪಡೆದಿದೆ.

ಸೂಪರ್ ಫಾಸ್ಟ್: ಆಸ್ಟನ್ ಮಾರ್ಟಿನ್ ಡಿಬಿ12 ಕಾರು, ಕೇವಲ 3.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯ ಪ್ರಕಾರ, ಇದು ಎಲೆಕ್ಟ್ರಾನಿಕ್ ರಿಯರ್ ಡಿಫರೆನ್ಷಿಯಲ್ ಮತ್ತು ಅಡಾಪ್ಟಿವ್ ಡ್ಯಾಂಪರ್‌ಗಳನ್ನು ಸಹ ಹೊಂದಿದೆ. ಒಟ್ಟಾರೆ ಭಾರತೀಯ ಮಾರುಕಟ್ಟೆಗೆ ಡಿಬಿ12 ಎಂಟ್ರಿಯು ಕಾರು ಉತ್ಸಾಹಿಗಳಿಗೆ ಹೊಸ ಅನುಭವ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಎಂಜಿನ್ ವಿಶೇಷತೆಗಳು: ಹೊಸ ಆಸ್ಟನ್ ಮಾರ್ಟಿನ್ ಡಿಬಿ 12 ಮರ್ಸಿಡಿಸ್ ಬೆಂಝ್ ಮೂಲದ ಎಂಜಿನ್ ಅನ್ನು ಹೊಂದಿದೆ. ಇದು 4.0-ಲೀಟರ್ ಟ್ವಿನ್ - ಟರ್ಬೋಚಾರ್ಜ್ಡ್ ವಿ 8 ಎಂಜಿನ್ ಒಳಗೊಂಡಿದ್ದು, ಸುಮಾರು 680 ಪಿಎಸ್ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ಗೆ 8 - ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಆಸ್ಟನ್ ಮಾರ್ಟಿನ್ ಕಂಪನಿಯು ಈ ಹಿಂದೆಯೂ ತನ್ನ ಹಲವು ಮಾದರಿಗಳನ್ನು ಭಾರತದಲ್ಲಿ ಪರಿಚಯಿಸಿದೆ. ಆದ್ರೆ ಡಿಬಿ12 ಕಾರು ಅವೆಲ್ಲವುಗಳಿಗಿಂತ ದುಬಾರಿ ಬೆಲೆಯನ್ನು ಹೊಂದಿದೆ. ಭಾರತದ ಎಕ್ಸ್ ಶೋರೂಂ ಪ್ರಕಾರ ಇದು ರೂ.4.59 ಕೋಟಿ ಬೆಲೆಯಿದೆ. ಆನ್‌ರೋಡ್‌ ಬೆಲೆ 5 ಕೋಟಿ ಮೀರಿಸಬಹುದು. ಈ ಮಾದರಿಯನ್ನು ಆಸ್ಟನ್ ಮಾರ್ಟಿನ್ ನವದೆಹಲಿ - ಸೆಲೆಕ್ಟ್ ಕಾರ್ಸ್ ಡೀಲರ್ ಶಿಪ್‌ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡುತ್ತದೆ.

More from DriveSpark

Article Published On: Friday, March 8, 2024, 14:38 [IST]
English summary
Zomato ceo buys aston martin db12 sportscar details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+