ಬಜಾಜ್ ಆಟೋ ಮಾರಾಟ ಶೇ, 25ರಷ್ಟು ಹೆಚ್ಚಳ

Posted By:
Bajaj Auto
ದೇಶದ ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಕಂಪನಿ ಬಜಾಜ್ ಆಟೋ ಕಳೆದ ತಿಂಗಳ ಮಾರಾಟ 3,74,477 ಯುನಿಟ್ ತಲುಪಿದ್ದು ಶೇಕಡ 25ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 2,99,231 ಯೂನಿಟ್ ವಾಹನ ಮಾರಾಟ ಮಾಡಿತ್ತು.

ಇದೇ ಸಮಯದಲ್ಲಿ ಕಂಪನಿಯು 1,29,256 ಯೂನಿಟ್ ವಾಹನ ರಫ್ತು ಮಾಡಿದ್ದು, ಕಳೆದ ವರ್ಷ ನವೆಂಬರ್ ತಿಂಗಳ 90,869 ಯೂನಿಟ್ ರಫ್ತಿಗೆ ಹೋಲಿಸಿದರೆ ಶೇಕಡ 42ರಷ್ಟು ರಫ್ತು ಹೆಚ್ಚಾಗಿದೆ.

ಕಂಪನಿಯು ಕಳೆದ ತಿಂಗಳು 3,31,967 ಯೂನಿಟ್ ದ್ವಿಚಕ್ರ ವಾಹನ ಮಾರಾಟ ಮಾಡಿದ್ದು, ಶೇಕಡ 25ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಕಂಪನಿಯು 2,65,036 ಯೂನಿಟ್ ದ್ವಿಚಕ್ರವಾಹನ ಮಾರಾಟ ಮಾಡಿದೆ.

ಇದೇ ಸಮಯದಲ್ಲಿ ಕಂಪನಿಯು 42,510 ಯೂನಿಟ್ ವಾಣಿಜ್ಯ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ನವೆಂಬರ್ ಮಾರಾಟಕ್ಕಿಮತ ಶೇಕಡ 24ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಕಂಪನಿಯು 34,195 ಯೂನಿಟ್ ವಾಣಿಜ್ಯ ವಾಹನ ಮಾರಾಟ ಮಾಡಿತ್ತು.

English summary
Bajaj Auto reported 25 percent increase in Two- and three-wheeler sale at 3,74,477 units sold in November 2011. Last year November company sold 2,99,231 units .
Story first published: Friday, December 2, 2011, 17:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark