ಸಲ್ಮಾನ್ ಖಾನ್ ಭೇಟಿಯಾಗಬೇಕಾ? ಒಂದು ಅವಕಾಶ
ಕತ್ರಿನಾ ಕೈಫ್‌ಗೆ ಸಲ್ಮಾನ್ ಖಾನ್ ನೀಡಿದ ರಸಗುಲ್ಲಾದ ಬಗ್ಗೆ ನಿನ್ನೆ ಓದಿದ್ದೀರಿ. ಅದೇ ಸಲ್ಮಾನ್ ಖಾನ್ ರನ್ನು ಭೇಟಿಯಾಗ್ಬೆಕು, ಸಲ್ಲು ಜೊತೆ ಮಾತನಾಡಬೇಕು ಇತ್ಯಾದಿ ಅಭಿಲಾಶೆಗಳು ನಿಮಗೆ ಇರಬಹುದಲ್ವಾ? ಅದಕ್ಕೆ ಇಲ್ಲೊಂದು ಅವಕಾಶವಿದೆ. ಅದರ ಹೆಸರು "ಏಕ್ ಥಾ ಟೈಗರ್, ಏಕ್ ಹೈ ಹಯಾಟೆ"
ಹಯಾಟೆ ಬೈಕ್ ಖರೀದಿದಾರರಲ್ಲಿ ಆರು ಅದೃಷ್ಟವಂತರಿಗೆ ಸಲ್ಮಾನ್ ಖಾನ್ ಭೇಟಿಯಾಗುವ ಅವಕಾಶವನ್ನು ಸುಜುಕಿ ನೀಡಿದೆ. ಈ ಕುರಿತು ಕಂಪನಿಯು ಟಿವಿ, ರೇಡಿಯೋ ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದೆ. ಸಲ್ಮಾನ್ ನೂತನ ಚಿತ್ರ "ಏಕ್ ಥಾ ಟೈಗರ್" ಜೊತೆ ಹಯಾಟೆ ಬೈಕ್ ಪ್ರಚಾರ ನಡೆಸಲು ಕಂಪನಿ ನಿರ್ಧರಿಸಿದೆ.
"ಸಲ್ಮಾನ್ ಖಾನ್ ಜೊತೆ ನಡೆಸಲಿರುವ ಈ ಅಭಿಯಾನಕ್ಕೆ ಗ್ರಾಹಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಲ್ಲು ಅಭಿಮಾನಿಗಳಿಗೆ ಇದು ಒಂದು ಅಪೂರ್ವ ಅವಕಾಶವಾಗಿದೆ" ಎಂದು ಸುಜುಕಿ ಮೋಟರ್ ಇಂಡಿಯಾ ಮುಖ್ಯಸ್ಥ ಅನು ಅನಮಿಕ ಹೇಳಿದ್ದಾರೆ. ಅಂದಹಾಗೆ ಸಲ್ಮಾನ್ ಖಾನ್ ಸುಜುಕಿ ಹಯಾಟೆ ಬೈಕಿನ ರಾಯಭಾರಿಯಾಗಿದ್ದಾರೆ.
ಸುಜುಕಿ ಹಯಾಟೆ ಬೈಕ್ ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 60 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ದರ ಸುಮಾರು 48-50 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ. ನೂತನ ಹಯಾಟೆ ಬೈಕಿನ ಟೆಕ್ ಮಾಹಿತಿ ಮತ್ತು ವಿಶೇಷತೆಗಳನ್ನು ತಿಳಿಯಲು ಈ ಲಿಂಕ್ ಪ್ರವೇಶಿಸಿರಿ.


Click it and Unblock the Notifications
