ಕೋಲಾರದಲ್ಲಿ ಟ್ರಯಂಪ್ ಮೋಟರ್ಸ್ ಬೈಕ್ ಘಟಕ

ಇಂಗ್ಲೆಂಡ್ ಮೂಲದ ಪ್ರೀಮಿಯಂ ಬೈಕ್ ತಯಾರಿಕಾ ಕಂಪನಿ ಟ್ರಯಂಪ್ ಮೋಟರ್ ಸೈಕಲ್ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆ. ಕಂಪನಿಯು ದಕ್ಷಿಣ ಭಾರತದ ಸ್ಥಳೀಯ ಬೈಕ್ ಜೋಡನೆ ಘಟಕವನ್ನು ರಾಜ್ಯದ ಕೋಲಾರದಲ್ಲಿ ಒಂದು ವರ್ಷದೊಳಗೆ ನಿರ್ಮಿಸಲಿದೆ. ಇದಕ್ಕೂ ಮೊದಲು ತಮಿಳುನಾಡು ಮತ್ತು ಮಹಾರಾಷ್ಟ್ರ ಸರಕಾರದೊಂದಿಗೆಯೂ ಕಂಪನಿ ಮಾತುಕತೆ ನಡೆಸಿತ್ತು.

ಕೋಲಾರದಲ್ಲಿ ನಿರ್ಮಿಸಲಿರುವ ಘಟಕವು ಇಂಗ್ಲೆಂಡ್ ಮತ್ತು ಥೈಲಾಂಡ್ ನಂತರದ ಮೂರನೇ ಅಸೆಂಬ್ಲಿ ಘಟಕವಾಗಿದೆ. ದೇಶದಲ್ಲಿ ನಿರ್ಮಿಸಲಿರುವ ನೂತನ ಘಟಕದಿಂದ ಟ್ರಯಂಪ್ ದರ ಕಡಿಮೆಯಾಗಲಿದೆ. ಇದರ ಪ್ರತಿಸ್ಪರ್ಧಿ ಕಂಪನಿ ಹರ್ಲಿ ಡೇವಿಡ್ ಸನ್ ಕಳೆದ ವರ್ಷ ಹರ್ಯಾಣದಲ್ಲಿ ಇಂತಹದ್ದೇ ಘಟಕವನ್ನು ನಿರ್ಮಿಸಿತ್ತು.

ಒಂದು ತಿಂಗಳ ಹಿಂದೆ ಟ್ರಯಂಪ್ ಮೋಟರ್ಸ್ ಕರ್ನಾಟಕ ಸರಕಾರದೊಂದಿಗೆ ಎಂಒಯು ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಸಿಕೆಡಿ ಘಟಕಕ್ಕಾಗಿ ಕಂಪನಿಯು ರಾಜ್ಯದ ಕೆಲವು ಪ್ರದೇಶಗಳನ್ನು ಪರಿಶೀಲಿಸಿತ್ತು.

"ಕಂಪನಿಯು ಬೆಂಗಳೂರು-ಚೆನ್ನೈ ಹೆದ್ದಾರಿ ಸಮೀಪದ ಕೊಲಾರ ಜಿಲ್ಲೆಯ ನರ್ಸಪುರದಲ್ಲಿ 40 ಎಕರೆ ಭೂಮಿಯನ್ನು ಗುರುತಿಸಿದೆ. ಬಹುಃಶ ಕಂಪನಿ ಇದನ್ನೇ ಆಯ್ಕೆಮಾಡಿಕೊಳ್ಳುವ ನಿರೀಕ್ಷೆಯಿದೆ" ಎಂದು ವರದಿಗಳು ಹೇಳಿವೆ.

ಜನವರಿ ತಿಂಗಳಲ್ಲಿ ದೆಹಲಿ ವಾಹನ ಪ್ರದರ್ಶನದಲ್ಲಿ ಕಂಪನಿಯು ಹಲವು ಟ್ರಯಂಪ್ ಆವೃತ್ತಿಗಳನ್ನು ಪರಿಚಯಿಸಿತ್ತು.

More from DriveSpark

Article Published On: Thursday, March 15, 2012, 14:50 [IST]
English summary
Triumph Motorcycles, the iconic British company is planning to set up a manufacturing facility in the Indian state of Karnataka. According to reports the new plant will be set up near Kolar, close the location where Honda is building its motorcycle plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+