ಬಂದಿದೆ ಬೈಕ್‌ಗಿಂತಲೂ ವೇಗವಾಗಿ ಚಲಿಸುವ ಸೈಕಲ್

ಸಾಮಾನ್ಯ ಪರಿಸ್ಥಿತಿಯಲ್ಲಿ ಸೈಕಲ್‌ವೊಂದಕ್ಕೆ ಬೈಕನ್ನು ಹಿಂದಿಕ್ಕುವುದು ಅಸಾಧ್ಯದ ಮಾತು. ಆದರೆ ನಾವಿಂದು ಪರಿಚಯಿಸಲಿರುವ ನೂತನ ಎಲೆಕ್ಟ್ರಿಕ್ ಸೈಕಲ್, ಬೈಕ್‌ಗಳನ್ನು ಓವರ್‌ಟೇಕ್ ಮಾಡುವ ಸಾಮರ್ಥ್ಯ ಹೊಂದಿರಲಿದೆ.

ಹೌದು, ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆಗೆ ಆಗಮಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಗ್ರೇಪ್ (Greyp) ಅನ್ನುವ ಕಂಪನಿಯೊಂದು ಈ 'ಜಿ-12' ಸೈಕಲನ್ನು ತಯಾರಿಸಿದೆ. ವಿಶೇಷವಾಗಿಯೂ ಸಾಹಸಿ ಪ್ರಿಯರನ್ನು ಗುರಿಯಾಗಿರಿಸಿಕೊಂಡು ಇದನ್ನು ತಯಾರಿಸಲಾಗಿದೆ. ಬೆಟ್ಟ ಗುಡ್ಡಗಾಡು ಪ್ರದೇಶದಲ್ಲಿ ಚಾರಣಕ್ಕಾಗಿ ತೆರಳುವವರಿಗೆ ಇದು ಹೆಚ್ಚು ನೆರವಾಗಲಿದೆ. ಹಾಗೆಯೇ ನಗರ ಪ್ರದೇಶಗಳಲ್ಲೂ ಆರಾಮದಾಯಕವಾಗಿ ಚಲಿಸಬಹುದಾಗಿದೆ.

ಒಟ್ಟಿನಲ್ಲಿ ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ರಿಚಾರ್ಜ್ ಮಾಡಿಸಬಹುದಾದ ಈ ವಿದ್ಯುತ್ ಚಾಲಿತ ಸೈಕಲನ್ನು ಬಳಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಸ್ಲೈಡರ್ ಮೂಖಾಂತರ ಗ್ರೇಪ್ ಜಿ-12 ವಿಶೇಷತೆಗಳ ಬಗ್ಗೆ ಅರಿಯೋಣವೇ...

ಗ್ರೇಪ್ ಜಿ-12 ವಿದ್ಯುತ್ ಚಾಲಿತ ಸೈಕಲ್

ನಿಮ್ಮ ಮಾಹಿತಿಗಾಗಿ, ಇದೇ ಗ್ರೇಪ್ ಕಂಪನಿಯು ಗರಿಷ್ಠ ನಿರ್ವಹಣೆಯ ರೈಮಾಕ್ ಆಟೊಮೊಬೈಲಿ ಕಾನ್ಸೆಪ್ಟ್ ಒನ್ ವಿದ್ಯುತ್ ಚಾಲಿತ ಕಾರನ್ನು ಸಹ ತಯಾರಿಸಿತ್ತು.

ಗ್ರೇಪ್ ಜಿ-12 ವಿದ್ಯುತ್ ಚಾಲಿತ ಸೈಕಲ್

ಗ್ರೇಪ್ ಜಿ-12 ಸೈಕಲಲ್ಲಿ ಹಲವು ಮೋಡ್ ಡ್ರೈವಿಂಗ್ ವ್ಯವಸ್ಥೆಯಿದ್ದು, ಚಾಲಕನ ಅಗತ್ಯಕ್ಕಾನುಸಾರವಾಗಿ ಪವರ್ ಮೋಡ್ ಬದಲಾಯಿಸಿಕೊಳ್ಳಬಹುದಾಗಿದೆ. ಅಲ್ಲದೆ ಇದು ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಂಡಿದೆ.

ಗ್ರೇಪ್ ಜಿ-12 ವಿದ್ಯುತ್ ಚಾಲಿತ ಸೈಕಲ್

ಜಿ-12 ಸೈಕಲಿನಲ್ಲಿ ಅತ್ಯಂತ ಮುಂದುವರಿದ ಆಧುನಿಕ ಗರಿಷ್ಠ ನಿರ್ವಹಣೆಯ ಬ್ಯಾಟರಿ ಆಳವಡಿಸಲಾಗಿದ್ದು. 12 kW (16 ಅಶ್ವಶಕ್ತಿ) ವೀಲ್ ಹಬ್ ಮೌಂಟೆಡ್ ಮೋಟಾರ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಹಾಗೆಯೇ 1.3 kWh ಲಿಥಿಯಂ ನ್ಯಾನೋಫೋಸ್ಪೇಟ್ ಬ್ಯಾಟರಿ ಸೆಲ್‌ಗಳಿಂದ ಪವರ್ ರವಾನಿಸಲಿದೆ.

ಗ್ರೇಪ್ ಜಿ-12 ವಿದ್ಯುತ್ ಚಾಲಿತ ಸೈಕಲ್

220 ವೋಲ್ಟ್ ಹೊರಹೋಗುವ ವಿದ್ಯುತ್ ಸಂಪರ್ಕ ಬಿಂದುವಿನಲ್ಲಿ 80 ನಿಮಿಷಗಳಷ್ಟು ಚಾರ್ಜ್ ಮಾಡಿಸಿದ್ದಲ್ಲಿ ಶೇಕಡಾ 100ರಷ್ಟು ಚಾರ್ಜ್ ಮಾಡಲು ನೆರವಾಗಲಿದೆ.

ಗ್ರೇಪ್ ಜಿ-12 ವಿದ್ಯುತ್ ಚಾಲಿತ ಸೈಕಲ್

ಇದರಂತೆ ನಿಮ್ಮ ಅಗತ್ಯಕ್ಕಾನುಸಾರವಾಗಿ ಪೆಡಲ್ ಹಾಗೂ ಎಲೆಕ್ಟ್ರಿಕ್ ಪವರ್ ಮೋಡ್‌ ಆಯ್ಕೆಮಾಡಿಕೊಳ್ಳಬಹುದಾಗಿದೆ.

ಗ್ರೇಪ್ ಜಿ-12 ವಿದ್ಯುತ್ ಚಾಲಿತ ಸೈಕಲ್

ಇನ್ನು ಬ್ರೇಕ್ ಬಗ್ಗೆ ಮಾತನಾಡುವುದಾದರೆ ಮುಂದುಗಡೆ ಡ್ಯುಯಲ್ ಹೈಡ್ರಾಲಿಕ್ ಡಿಸ್ಕ್ ಹಾಗೂ ಹಿಂದುಗಡೆ ಸಿಂಗಲ್ ಬ್ರೇಕ್ ಇರಲಿದೆ. ಹಾಗಿದ್ದರೂ ಕಂಪನಿಯ ಪ್ರಕಾರ, ಇದನ್ನು ಬಳಸುವ ಅಗತ್ಯವಿರುವುದಿಲ್ಲ. ಬದಲಾಗಿ ರಿಜನರೇಟಿವ್ ಸಿಸ್ಟಂ ಸೈಕಲ್ ವೇಗತೆಯನ್ನು ಕಡಿತಗೊಳಿಸುತ್ತದೆ.

ಗ್ರೇಪ್ ಜಿ-12 ವಿದ್ಯುತ್ ಚಾಲಿತ ಸೈಕಲ್

ಪ್ರಸ್ತುತ ವಿದ್ಯುತ್ ಚಾಲಿತ ಸೈಕಲ್ ಪ್ರತಿ ಗಂಟೆಗೆ 65 ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 120 ಕೀ.ಮೀ. ತನಕ ಆರಾಮದಾಯಕವಾಗಿ ಚಲಿಸಬಹುದಾಗಿದೆ.

ಗ್ರೇಪ್ ಜಿ-12 ವಿದ್ಯುತ್ ಚಾಲಿತ ಸೈಕಲ್

ಒಟ್ಟು ಮೂರು ರೈಡಿಂಗ್ ಮೋಡ್‌ಗಳಲ್ಲಿ ಜಿ-12 ಸೈಕಲ್ ಆಗಮನವಾಗಿದೆ.

ಸ್ಟ್ರೀಟ್: ಸ್ಟ್ರೀಟ್ ನಗರ ಪ್ರದೇಶದ ಚಾಲನೆಗೆ ಯೋಗ್ಯವಾಗಿದ್ದು, ಗಂಟೆಗೆ ಗರಿಷ್ಠ 25 ವೇಗದಲ್ಲಿ ಚಲಿಸಲಿದೆ.

ಪವರ್: ಸ್ಪೇಡ್ ಮೋಡ್ ಎಂಬ ಹೆಸರಿನಿಂದಲೂ ಅರಿಯಲ್ಪಡುವ ಪವರ್ ಮೋಡ್, ವಿದ್ಯುತ್‌ ವಾಹಕವಾಗಿದ್ದು ಗರಿಷ್ಠ 65 ಕೀ.ಮೀ. ವೇಗದಲ್ಲಿ ಸಾಗಲಿದೆ.

ಇಕೊ: ಹಾಗಯೇ ಇಕೊ ಮೋಡ್ ನಿರ್ವಹಣೆ ಹಾಗೂ ರಿಜನರೇಷನ್ ಮಾಡಲು ನೆರವಾಗಲಿದೆ.

ಗ್ರೇಪ್ ಜಿ-12 ವಿದ್ಯುತ್ ಚಾಲಿತ ಸೈಕಲ್

ಫಿಂಗರ್‌ಪ್ರಿಂಟ್ ರೀಡರ್‌ನಲ್ಲಿ ಲಭ್ಯವಾಗಿರುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ. ಇದು ಸೈಕಲನ್ನು ಅನ್ ಲಾಕ್ ಮಾಡುವುದರ ಜತೆಗೆ ವಿವಿಧ ಮೋಡ್‌ಗೆ ಬದಲಾಯಿಸಲು ಸಹಕಾರಿಯಾಗಲಿದೆ.

ಗ್ರೇಪ್ ಜಿ-12 ವಿದ್ಯುತ್ ಚಾಲಿತ ಸೈಕಲ್

ಒರ್ವ ಬಳಕೆದಾರರಿಗೆ ತನ್ನ ಐದು ಬೆರಳನ್ನು ಸೇವ್ ಮಾಡುವ ಆಯ್ಕೆಯಿದ್ದು, ಹೀಗೆ 50 ಜನರ ಬೆರಳನ್ನು ಸೇವ್ ಮಾಡಿ ಇಡಬಹುದಾಗಿದೆ. ಹಾಗೆಯೇ ಇತರ ಬಳಕೆದಾರರ ವೇಗ ಮಿತಿ ಅಥವಾ ಚಾಲನಾ ಸಮಯವನ್ನು ನಿಗದಿಪಡಿಸುವ ಹಕ್ಕು ಮಾಲಕನಿಗಿರುತ್ತದೆ.

ವೀಡಿಯೊ ಗ್ಯಾಲರಿ

Most Read Articles

Kannada
English summary
Electric bicycles are not new, but every once in awhile there comes out a product that manages to catch our attention. The G-12, from a company called Greyp, is one such electric bike. Interestingly, the same company has also built a high performance electric car called Rimac Automobili Concept_One.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X