ಹೀರೊ, ಯಮಹಾ ಮಾರಾಟ ಏರಿಕೆ; ಟಿವಿಎಸ್ ಹಿಂಬಡ್ತಿ

Written By:

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಹಾಗೂ ಯಮಹಾ ಮೋಟಾರ್ಸ್, ಜುಲೈ ತಿಂಗಳ ಮಾರಾಟದಲ್ಲಿ ಏರುಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅದೇ ಹೊತ್ತಿಗೆ ಚೆನ್ನೈ ಮೂಲದ ಟಿವಿಎಸ್ ಹಿಂಬಡ್ತಿ ಪಡೆದುಕೊಂಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಹೀರೊ ಮೊಟೊಕಾರ್ಪ್ 2013 ಜುಲೈ ತಿಂಗಳಲ್ಲಿ ಶೇಕಡಾ 0.68ರಷ್ಟು ಏರುಗತಿ ದಾಖಲಿಸಿದ್ದು, ಒಟ್ಟು 484,217 ಯುನಿಟ್ ಮಾರಾಟ ದಾಖಲಿಸಿದೆ.

ಮತ್ತೊಂದೆಡೆ ಯಮಹಾ ಇಂಡಿಯಾ ಜುಲೈ ತಿಂಗಳ ದೇಶಿಯ ಮಾರಾಟವು ಶೇಕಡಾ 35ರಷ್ಟು ಹೆಚ್ಚು ದಾಖಲಾಗಿದೆ. ಕಳೆದ ಬಾರಿ 27,858 ಯುನಿಟ್ ಮಾರಾಟ ದಾಖಲಿಸಿದರೆ ಈ ಬಾರಿ 37,494 ಯುನಿಟ್‌ಗಳ ಸೇಲ್ಸ್ ಸಾಧಿಸಿದೆ.

ಹಾಗಿದ್ದರೂ ಟಿವಿಎಸ್ ಶೇಕಡಾ 4.7ರಷ್ಟು ಕುಸಿತ ಕಂಡಿದೆ. 2012 ಜುಲೈನಲ್ಲಿ 161255 ಯುನಿಟ್ ಮಾರಾಟವಾಗಿದ್ದರೆ ಈ ಬಾರಿಯದು 153676 ಯುನಿಟ್‌ಗಳಿಗೆ ಸೀಮಿತಗೊಂಡಿದೆ.

English summary
The month of July 2013 has not been positive for Chennai based TVS Motor Company. Yamaha Motors India and Hero MotoCorp, on the other hand posted a 57% and 0.7% increase in sales during July 2013.
Story first published: Saturday, August 3, 2013, 12:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark