ಸಿಬಿಝಡ್ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಲಾಂಚ್ ಮಾಡಲಿರುವ ಹೀರೊ

Written By:

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಸದ್ಯದಲ್ಲೇ ಸಿಬಿಝಡ್ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಬೈಕ್ ಲಾಂಚ್ ಮಾಡಲಿದೆ. ಇದು ಪ್ರಸಕ್ತ ಸಾಲಿನಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

ಜಪಾನ್ ಮೂಲದ ಹೋಂಡಾ ಟು ವೀಲರ್ಸ್ ಜೊತೆಗಿನ ಪಾಲುದಾರಿಕೆ ಕಡಿದುಕೊಂಡ ಬಳಿಕ ತನ್ನದೇ ಆದ ಬೈಕ್ ಹಾಗೂ ಸ್ಕೂಟರುಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತಲ್ಲೀನವಾಗಿರುವ ಹೀರೊ, ನಿರಂತರ ಅಂತರಾಳದಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುತ್ತಿದೆ.

2014 ಆಟೋ ಎಕ್ಸ್ ಪೋದಲ್ಲಂತೂ ಹೊಸ ಹೊಸ ಮಾದರಿಗಳನ್ನು ಪರಿಚಯಿಸಿದ್ದ ಹೀರೊ, ವಾಹನ ಪ್ರೇಮಿಗಳ ಪ್ರೀತಿಗೆ ಪಾತ್ರವಾಗಿತ್ತು. ಅಂದ ಹಾಗೆ ಕಳೆದ ಎಪ್ರಿಲ್ ತಿಂಗಳಲ್ಲಿ ಎಕ್ಸ್‌ಟ್ರೀಮ್ ಲಾಂಚ್ ಮಾಡಿದ್ದ ಹೀರೊ ಇದೀಗ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ವರ್ಷನ್ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಹೆಸರಲ್ಲೇ ಸೂಚಿಸಿರುವಂತೆಯೇ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ವರ್ಷನ್ ಹೆಚ್ಚು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಹಾಗಿದ್ದರೂ 149.2 ಸಿಸಿ ಏರ್ ಕೂಲ್ಡ್, ಎಟಿಎಫ್‌ಟಿ ಎಂಜಿನ್‌ ಕಾಯ್ದುಕೊಳ್ಳಲಾಗಿದೆ. ಇದು 15.2 ಅಶ್ವಶಕ್ತಿ (12.8 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

Hero MotoCorp

ಸಿಬಿಝಡ್ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ವರ್ಷನ್‌ನಲ್ಲಿ ಕಂಡುಬರಲಿರುವ ಗಮನಾರ್ಹ ಬದಲಾವಣೆಯೆಂದರೆ ಮುಂದೆ ಹಾಗೂ ಹಿಂದುಗಡೆ ಡಿಸ್ಕ್ ಬ್ರೇಕ್‌ಗಳ ಸೌಲಭ್ಯವಿರಲಿದೆ. ಹಾಗೆಯೇ ಗರಿಷ್ಠ ವೇಗತೆಯಲ್ಲಿ ಹೆಚ್ಚು ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಹಿಂದಿನ ಚಕ್ರದ ಗಾತ್ರವನ್ನು ಹೆಚ್ಚಿಸಲಾಗಿದೆ. ಅದೇ ರೀತಿ ಸೈಡ್ ಸ್ಟಾಂಡ್ ಅಲರ್ಟ್ ಜೊತೆಗೆ ಇಂಜಿನ್ ಇಂಮೊಬಿಲೈಜರ್ ಪಡೆದುಕೊಳ್ಳುವ ನಿರೀಕ್ಷೆಯಿದೆ.

ಇನ್ನುಳಿದಂತೆ ಸೀಟಿನ ಕೆಳಗಡೆ ಮೊಬೈಲ್ ಚಾರ್ಜಿಂಗ್ ಢಕ್ಕೆ ಇರಲಿದೆ. ಹಾಗೆಯೇ ಟ್ಯಾಂಕ್ ಮೇಲ್ಗಡೆಯಾಗಿ ವಿಶೇಷ ಸ್ಪೋರ್ಟ್ಸ್ ಬ್ಯಾಡ್ಜ್ ಕಂಡುಬರಲಿದೆ. ಅಂತೆಯೇ ರಿಯರ್ ವ್ಯೂ ಮಿರರ್ ಹೆಚ್ಚುವರಿ ಎಫೆಕ್ಟ್ ಗಿಟ್ಟಿಸಿಕೊಳ್ಳಲಿದೆ.

ಅಷ್ಟೇ ಅಲ್ಲದೆ ಸಿಬಿಝಡ್ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಆವೃತ್ತಿಯು ಎಲ್‌ಇಡಿ ಹೆಡ್‌ಲೈಟ್, ಸ್ಥಾನ ಬದಲಾಯಿಸಲಾದ ಟರ್ನ್ ಇಂಡಿಕೇಟರ್ ಪಡೆಯಲಿದೆ. ಏತನ್ಮಧ್ಯೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಲಿ ಬಣ್ಣದ ಎಫೆಕ್ಟ್ ಪಡೆಯಲಿದ್ದು, ಹೆಚ್ಚು ಗೋಚರತೆ ಪ್ರದಾನ ಮಾಡಲಿದೆ. ಆದರೆ ಬೆಲೆಯ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಹಾಗಿದ್ದರೂ ಯಮಹಾ ಎಫ್‌ಝಡ್ ಮತ್ತು ಬಜಾಜ್ ಪಲ್ಸರ್ 150 ಆವೃತ್ತಿಗಳಿಗೆ ಸ್ಪರ್ಧೆ ಒಡ್ಡುವ ರೀತಿಯಲ್ಲಿ ದರ ಕಾಯ್ದುಕೊಳ್ಳುವ ನಿರೀಕ್ಷೆಯಿದೆ.

English summary
Hero has recently launched its latest avatar of the CBZ Xtreme in April, 2014. Now the Indian manufacturer will be launching a CBZ Xtreme Sports version, which by it names suggests it will pack more power than the standard model.
Story first published: Monday, June 16, 2014, 11:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark