ದಕ್ಷಿಣ ಭಾರತದಲ್ಲಿ ನೂತನ ಘಟಕ ತೆರೆಯಲಿರುವ ಹೀರೊ
ಅಮೆರಿಕ, ಬ್ರೆಜಿಲ್‌ನಲ್ಲಿ ತನ್ನ ವ್ಯಾಪಾರ ವಿಸ್ತರಿಸಿಕೊಳ್ಳುವುದಾಗಿ ಘೋಷಿಸಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಇದೀಗ ದಕ್ಷಿಣ ಭಾರತದತ್ತ ಗಮನ ಕೇಂದ್ರಿಕರಿಸಿದೆ.
ವರದಿಗಳ ಪ್ರಕಾರ ಹೀರೊ ಮೊಟೊಕಾರ್ಪ್, ದಕ್ಷಿಣ ಭಾರತದಲ್ಲಿ ನೂತನ ಘಟಕವನ್ನು ತೆರೆಯುತ್ತಿದೆ. ಈ ಮೂಲಕ ದೇಶದಲ್ಲಿ ಒಟ್ಟು ಘಟಕಗಳ ಸಂಖ್ಯೆ ಆರಕ್ಕೆ ಏರಿಕೆಯಾಗಲಿದೆ.

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್‌ನ ದಕ್ಷಿಣ ಭಾರತದ ಘಟಕದಲ್ಲಿ ಎರಡು ದಶಲಕ್ಷಗಳಷ್ಟು ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಈ ಮೂಲಕ ಸಂಸ್ಥೆಯ ವಾರ್ಷಿಕ ನಿರ್ಮಾಣ ಸಾಮರ್ಥ್ಯ 12 ದಶಲಕ್ಷಕ್ಕೆ ಏರಿಕೆಯಾಗಲಿದೆ.
ಹಾಗಿದ್ದರೂ ದಕ್ಷಿಣ ಭಾರತದ ಯಾವಾಗ ಕೇಂದ್ರದಲ್ಲಿ ನೂತನ ಘಟಕ ತೆರೆಯಲಾಗುವುದು ಎಂಬುದಕ್ಕೆ ಸ್ಪಷ್ಟ ಮಾಹಿತಿಗಳು ಬಂದಿಲ್ಲ. ಪ್ರಸ್ತುತ ಹೀರೊ ಸಂಸ್ಥೆಯು ಹರಿಯಾದ ಗುರ್ಗಾಂವ್, ದಾರುಹೆರಾ, ಉತ್ತರಾಖಂಡದಲ್ಲಿ ಹರಿದ್ವಾರ, ರಾಜಸ್ತಾನದಲ್ಲಿ ನೀಮ್‌ರಾಣಾ ಮತ್ತು ಗುಜರಾತ್‌ನ ಹಾಲೋಲ್‌ನಲ್ಲಿ ಘಟಕಗಳನ್ನು ಹೊಂದಿದೆ.


Click it and Unblock the Notifications








