ಹೋಂಡಾ 2015 ಸಿಬಿ125ಎಫ್ ಪ್ರಯಾಣಿಕ ಬೈಕ್ ಅನಾವರಣ

Written By:

ಜಾಗತಿಕವಾಗಿ ತನ್ನ ಪ್ರಾಬಲ್ಯವನ್ನು ವೃದ್ಧಿಸಿಕೊಂಡಿರುವ ಹೋಂಡಾ ಮೋಟಾರ್‌ಸೈಕಲ್ಸ್ ಕೇವಲ ಪ್ರಯಾಣಿಕ ಮಾತ್ರವಲ್ಲದೆ ಹೈ ಎಂಡ್ ಮಾದರಿಗಳಿಗೂ ಹೆಸರು ಮಾಡಿದೆ.

ಪ್ರಸ್ತುತ ಜಪಾನ್ ಮೂಲದ ಹೋಂಡಾ ಸಂಸ್ಥೆಯು 2015 ಸಿಬಿ125ಎಫ್ ಬೈಕ್ ಅನ್ನು ಅನಾವರಣಗೊಳಿಸಿದೆ. ಮುಂದಿನ ವರ್ಷ ಆರಂಭದಲ್ಲಿ ಯುರೋಪ್ ತಲುಪಲಿರುವ ಈ ಬಹುನಿರೀಕ್ಷಿತ ಬೈಕ್ ಬಳಿಕ ಇತರ ಮಾರುಕಟ್ಟೆಗಳನ್ನು ಪ್ರವೇಶಿಸಲಿದೆ.

ನೆಕ್ಡ್ ಬೈಕ್ ಆಗಿರುವ ಸಿಬಿ125ಎಫ್, ಸಿಬಿ ಟ್ರಿಗರ್ ಮಾದರಿಯಿಂತ ಸ್ಪೂರ್ತಿ ಪಡೆದು ರಚಿಸಲಾಗಿದೆ. ಇದು ಸಿಬಿ300ಎಫ್ ಮತ್ತು ಸಿಬಿ500ಎಫ್ ಬೈಕ್‌ಗಳ ಶ್ರೇಣಿಯಲ್ಲಿ ಗುರುತಿಸಿಕೊಳ್ಳಲಿದೆ.

ಆಧುನಿಕತೆಗೆ ಅನುಗುಣವಾಗಿ ಜಪಾನ್ ಸಂಸ್ಥೆಯು ತನ್ನ ಐಕಾನಿಕ್ ಮಾದರಿಗಳನ್ನು ಮರು ವಿನ್ಯಾಸಗೊಳಿಸುತ್ತಿದೆ. ಇದರಲ್ಲಿ 124.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 10.5 ಅಶ್ವಶಕ್ತಿ (11.35) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

honda cb125f

ಪ್ರಸ್ತುತ ಬೈಕ್ ಪ್ರತಿ ಲೀಟರ್ 42.69 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದರಲ್ಲಿ ಸುಧಾರಿತ ಚಾಸೀಸ್ ನೀಡಲಾಗಿದ್ದು, 18 ಇಂಚಿನ 6 ಸ್ಪೋಕ್ ವೀಲ್ ಜೋಡಣೆ ಮಾಡಲಾಗಿದೆ.

ಸದ್ಯಕ್ಕೆ ಈ ಬಹುನಿರೀಕ್ಷಿತ ಬೈಕ್ ಭಾರತ ಪ್ರವೇಶಿಸಲಿದೆಯೇ ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಅನುಮಾನಗಳಿಗೆ ಯುರೋಪ್ ಬಿಡುಗಡೆ ವೇಳೆ ಸ್ಪಷ್ಟ ಉತ್ತರ ದೊರಕುವ ಸಾಧ್ಯತೆಯಿದೆ.

English summary
The commuter segment all around is growing, more and more people are opting for affordable vehicles. Honda has now unveiled their CB125F, which will go on sale in 2015 in Europe first. They showcased this commuter bike at Motorcycle Live.
Story first published: Saturday, November 22, 2014, 14:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark