ಯಾವುದೇ ಕ್ಷಣದಲ್ಲೂ ಬೇಕಾದರೂ ಬಿಡುಗಡೆಯಾಗಲಿದೆ ಮೊಜೊ

Written By:

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2014 ಫೆಬ್ರವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಮಹೀಂದ್ರ ಮೊಜೊ ಯಾವುದೇ ಕ್ಷಣದಲ್ಲೂ ಬೇಕಾದರೂ ಮಾರುಕಟ್ಟೆ ತಲುಪಲಿದೆ.

ಬಲ್ಲ ಮೂಲಗಳ ಪ್ರಕಾರ ಮಹೀಂದ್ರ ಮೊಜೊ ಸರ್ವ ರೀತಿಯಲ್ಲಿ ಸಜ್ಜಾಗಿದ್ದು, ಯಾವುದೇ ಕ್ಷಣದಲ್ಲೂ ಬಿಡುಗಡೆಯಾಗಲಿದೆ ಎಂದಿದೆ. ಪುಣೆಯಲ್ಲಿ ನಿರಂತರ ಪರೀಕ್ಷೆ ವೇಳೆ ಸಿಕ್ಕಿಬಿದ್ದಿರುವ ಮೊಜೊ ದೇಶದ ದ್ವಿಚಕ್ರ ವಾಹನ ವಿಭಾಗದಲ್ಲಿ ಹೊಸ ಅಧ್ಯಾಯ ತರೆಯುವ ನಿರೀಕ್ಷೆ ಹೊಂದಲಾಗಿದೆ.

To Follow DriveSpark On Facebook, Click The Like Button
Mahindra Mojo

ಡ್ಯುಯಲ್ ಟೋನ್ ಬಣ್ಣಗಳಲ್ಲಿ ಇದು ಆಗಮನವಾಗಲಿದೆ. ಮುಂದುಗಡೆ ಅರ್ಧ ಫೇರಿಂಗ್ ಹಾಗೂ ವಿಶಿಷ್ಟ ವಿನ್ಯಾಸದ ಹೆಡ್‌ಲೈಟ್ ಪಡೆದುಕೊಂಡಿದೆ. ಇನ್ನು ಎತ್ತರವಾದ ಹ್ಯಾಂಡಲ್‌ಬಾರ್ ರೈಡರ್‌ಗೆ ರಾಯಲ್ ಅನುಭವ ನೀಡಲಿದೆ.

ಅಂದ ಹಾಗೆ ನೂತನ ಮಹೀಂದ್ರ ಮೊಜೊ ಬೈಕ್ 292 ಸಿಸಿ, ಫೋರ್ ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 25 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಸಹ ಇರಲಿದೆ. ಅಂತೆಯೇ ಮುಂದುಗಡೆ ಅಪ್‌ಸೈಡ್ ಡೌನ್ ಫಾರ್ಕ್ ಮತ್ತು ಹಿಂದುಗಡೆ ಮೊನೊ ಶಾಕ್ ಪಡೆಯಲಿದೆ. ಇನ್ನುಳಿದಂತೆ ಮುಂದೆ ಹಾಗೂ ಹಿಂದುಗಡೆ ಡಿಸ್ಕ್ ಬ್ರೇಕ್ ಲಗ್ಗತ್ತಿಸಲಾಗಿದೆ.

English summary
The 2014 Auto Expo showcased the revamped Mahindra Mojo. Ever since, the bike was frequently seen testing in Pune. Recently, Mahindra Two-Wheelers showcased the Mojo to the Indian dealers, hinting a launch very soon.
Story first published: Wednesday, August 13, 2014, 9:34 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark