ನಿಮಗೂ ಟ್ರಯಂಪ್ ಬೈಕ್ ಕನಸು ನನಸಾಗಿಸಬಹುದು!

Written By:

ಇತ್ತೀಚೆಗಷ್ಟೇ ದೇಶದ ಮಾರುಕಟ್ಟೆಗೆ ಬ್ರಿಟನ್ ಮೂಲದ ಟ್ರಯಂಪ್ ಬೈಕ್‌ಗಳು ಭರ್ಜರಿ ಎಂಟ್ರಿ ಕೊಟ್ಟಿದ್ದವು. ಈ ಸಂದರ್ಭದಲ್ಲಿ ಬರೋಬ್ಬರಿ 10 ನೂತನ ಮಾದರಿಗಳನ್ನು ದೇಶಕ್ಕೆ ಪರಿಚಯಿಸಲಾಗಿತ್ತು.

ಇದರಲ್ಲಿ ಅಗ್ಗದ ಬೊನೆವಿಲ್ಲೆ 5.7 ಲಕ್ಷ ರು.ಗಳಿಂದ ಹಿಡಿದು ದುಬಾರಿ ರಾಕೆಟ್ III ರೋಡ್‌ಸ್ಟರ್ 20 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತವೆ. ಇದರಿಂದಾಗಿ ದೇಶದ ಮಧ್ಯಮ ವರ್ಗದವರಿಗೆ ಟ್ರಯಂಪ್ ಬೈಕ್ ಖರೀದಿ ಸ್ವಲ್ಪ ಕಷ್ಟಕರವಾಗಿರಬಹುದು.

Triumph Motorcycles With HDFC Finance Option

ಇದನ್ನು ಪರಿಗಣಿಸಿರುವ ಟ್ರಯಂಪ್ ಸಂಸ್ಥೆಯು, ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಜತೆ ಸೇರಿಕೊಂಡು ಹಣಕಾಸು ನೆರವು ಒದಗಿಸಲು ಯೋಜನೆ ಹಾಕಿಕೊಂಡಿದೆ.

ಇಲ್ಲಿ ನೀವು ಖರೀದಿಸುವ ಟ್ರಯಂಪ್ ಬೈಕ್‌ಗಳ ಶೇಕಡಾ 80ರಷ್ಟು ಮೊತ್ತವು ಸಾಲದ ರೂಪದಲ್ಲಿ ಬ್ಯಾಂಕ್ ನೀಡಲಿದೆ. ಇದಕ್ಕೆ ಶೇಕಡಾ 12.9ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ಅದೇ ರೀತಿ ಸಾಲದ ಮೊತ್ತವನ್ನು 2ರಿಂದ 5 ವರ್ಷದ ವರೆಗಿನ ಅವಧಿಯಲ್ಲಿ ಮರು ಪಾವತಿಸಬಹುದಾಗಿದೆ. ಅಷ್ಟೇ ಯಾಕೆ ನೀವಿದಕ್ಕಾಗಿ ಕಚೇರಿ ಕಲಾಪಗಳನ್ನು ಬಿಟ್ಟು ಬ್ಯಾಂಕ್ ಓಡಾಟ ನಡೆಸಬೇಕೇಂದಿಲ್ಲ. ಬದಲಾಗಿ ಬ್ಯಾಂಕ್ ಸಿಬ್ಬಂದಿಗಳೇ ನಿಮ್ಮ ಮನೆಬಾಗಿಲಿಗೆ ಬರಲಿದ್ದಾರೆ.

ಟ್ರಯಂಪ್ ಬೈಕ್‌ಗಳ ಅಬ್ಬರಕ್ಕಾಗಿ ಇಲ್ಲಿ ಕ್ಕಿಕ್ಕಿಸಿರಿ...

English summary
The British motorcycle brand Triumph had recently announced their product offering for India. To attract buyers finance option had to be chosen. Triumph India has tied up with India's leading bank HDFC, in an attempt to provide lucrative finance schemes.
Story first published: Thursday, January 16, 2014, 15:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark