ಇಂಡಿಯಾ ಬೈಕ್ ವೀಕ್; ಎಪ್ರಿಲಿಯಾ ಸೂಪರ್ ಬೈಕ್ ಪ್ರದರ್ಶನ

Written By:

ಈ ಬಾರಿ 2015 ಇಂಡಿಯಾ ಬೈಕ್ ವೀಕ್ ಹಲವಾರು ಕಾರಣಗಳಿಂದಾಗಿ ಅತಿ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. ಇಲ್ಲಿ ಮಗದೊಂದು ಐಕಾನಿಕ್ ಬೈಕ್ ಬ್ರಾಂಡ್ ಪ್ರದರ್ಶನ ಕಂಡಿದೆ.

ಗೋವಾದಲ್ಲಿ ಸಾಗುತ್ತಿರುವ ಇಂಡಿಯಾ ಬೈಕ್ ವೀಕ್‌ನಲ್ಲಿ ಇಟಲಿಯ ಐಕಾನಿಕ್ ಪಿಯಾಜಿಯೊದ ಎಪ್ರಿಲಿಯಾ ಸೂಪರ್ ಬೈಕ್ ಬ್ರಾಂಡ್‌ನಿಂದ ಆಕರ್ಷಕ ಮಾದರಿ ಪ್ರದರ್ಶನ ಕಂಡಿದೆ. ಅದುವೇ ಎಪ್ರಿಲಿಯಾ ಆರ್‌ಎಸ್‌ವಿ4

ಇದೇ ವಾಹನ ಜಗತ್ತಿನಲ್ಲಿ ಪಿಯಾಜಿಯೊ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ. ತಂತ್ರಜ್ಞಾನ ಹಾಗೂ ನಿರ್ವಹಣೆಯ ವಿಚಾರದಲ್ಲಿ ಜಾಗತಿಕವಾಗಿ ಎಪ್ರಿಲಿಯಾ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿದೆ.

ರೇಸಿಂಗ್ ವಿಭಾಗದಲ್ಲೂ ಎಪ್ರಿಲಿಯಾ ತನ್ನದೇ ಆದ ಸ್ಥಾನಮಾನ ಕಾಪಾಡಿಕೊಂಡಿದೆ. ಅಷ್ಟೇ ಯಾಕೆ 2015 ಮೊಟೊ ಜಿಪಿಯಲ್ಲೂ ತನ್ನ ಕೌಶಲ್ಯವನ್ನು ಮೆರೆಯಲಿದೆ.

ಈಗ ಭಾರತದಲ್ಲಿ ನಡೆಯುತ್ತಿರುವ ಇಂಡಿಯಾ ಬೈಕ್ ವೀಕ್ ಹಬ್ಬದಲ್ಲಿ ಎಪ್ರಿಲಿಯಾ ಆರ್‌ಎಶ್‌ವಿ4 ಬೈಕ್ ಪ್ರದರ್ಶಿಸಲಾಗಿದೆ. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಸಂತಸಕ್ಕೆ ಕಾರಣವಾಗಿದೆ.

English summary
Italian auto major Piaggio has displayed itd Aprilia RSV4 superbike at ongoing 2015 India Bike Week in Goa. Take a look. 
Story first published: Saturday, February 21, 2015, 15:29 [IST]
Please Wait while comments are loading...

Latest Photos