ಹೋಂಡಾ ಸಿಬಿ ಶೈನ್ ಸ್ಮಾರ್ಟ್ ಪವರ್ ಭರ್ಜರಿ ಬಿಡುಗಡೆ

By Nagaraja

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ಸ್ ಆ್ಯಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಸಿಬಿ ಶೈನ್ 125 ಸಿಸಿ ವಿಶೇಷ ಆವೃತ್ತಿಯ (SP) ಬೈಕನ್ನು ಬಿಡುಗಡೆ ಮಾಡಿದೆ. ಅದುವೇ ಹೋಂಡಾ ಸಿಬಿ ಶೈನ್ ಸ್ಮಾರ್ಟ್ ಪವರ್.

ಬೆಲೆ ಮಾಹಿತಿ: 59,000 ರು.(ಎಕ್ಸ್ ಶೋ ರೂಂ ದೆಹಲಿ)

Also Read: ಹೀರೊ ಹೋಂಡಾ ಮೈಲೇಜ್ ವಾರ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ನಂ.1 125 ಸಿಸಿ ಕಾರ್ಯ ನಿರ್ವಾಹಕ ಬೈಕ್ ಆಗಿರುವ ಸಿಬಿ ಶೈನ್, ದೇಶದ ಪ್ರಯಾಣಿಕ ವಿಭಾಗದಲ್ಲಿ ಹೆಚ್ಚು ಬೇಡಿಕೆಯನ್ನು ಕಾಪಾಡಿಕೊಂಡಿದೆ. ಈಗ ಬಿಡುಗಡೆಯಾಗಿರುವ ವಿಶೇಷ ಆವೃತ್ತಿಯು ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆಯಲ್ಲಿದೆ.

ಹೋಂಡಾ ಸಿಬಿ ಶೈನ್ ಸ್ಮಾರ್ಟ್ ಪವರ್ ಭರ್ಜರಿ ಬಿಡುಗಡೆ

ಇಲ್ಲಿ ಹೋಂಡಾ ಸಿಬಿ ಶೈನ್ ಎಸ್‌ಪಿ ಎಂಬುದು ಸ್ಮಾರ್ಟ್ ಪವರ್ ಎಂಬುದನ್ನು ಬಿಂಬಿಸುತ್ತದೆ. ಅಲ್ಲದೆ ಮೂರು ವೆರಿಯಂಟ್ ಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ

  • ಸಿಬಿ ಶೈನ್ ಡ್ರಮ್,
  • ಸಿಬಿ ಶೈನ್ ಡಿಸ್ಕ್,
  • ಸಿಬಿ ಶೈನ್ ಸಿಬಿಎಸ್.
  • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    • ಸಿಬಿ ಶೈನ್ ಡ್ರಮ್: 59,900 ರು.
    • ಸಿಬಿ ಶೈನ್ ಡಿಸ್ಕ್: 62,400 ರು.
    • ಸಿಬಿ ಶೈನ್ ಸಿಬಿಎಸ್: 64,400 ರು.
    • ಎಂಜಿನ್ ತಾಂತ್ರಿಕತೆ

      ಎಂಜಿನ್ ತಾಂತ್ರಿಕತೆ

      ನೂತನ ಹೋಂಡಾ ಸಿಬಿ ಶೈನ್ ಎಸ್‌ಪಿ ಮಾದರಿಯು 124.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 10.3 ಎನ್ ಎಂ ತಿರುಗುಬಲದಲ್ಲಿ 10.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

      ಗೇರ್ ಬಾಕ್ಸ್: 5 ಸ್ಪೀಡ್

      ಮೈಲೇಜ್

      ಮೈಲೇಜ್

      125 ಸಿಸಿ ವಿಭಾಗದಲ್ಲಿ ಅತ್ಯುತ್ತಮ ಇಂಧನ ಕ್ಷಮತೆಯನ್ನು ಕಾಪಾಡಿಕೊಂಡಿರುವ ಸಿಬಿ ಶೈನ್ ಎಸ್ ಪಿ ಮಾದರಿಯು ಪ್ರತಿ ಲೀಟರ್ ಗೆ 65 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

      ಹೋಂಡಾ ಸ್ಮಾರ್ಟ್ ಪವರ್ ತಂತ್ರಜ್ಞಾನ

      ಹೋಂಡಾ ಸ್ಮಾರ್ಟ್ ಪವರ್ ತಂತ್ರಜ್ಞಾನ

      ಇದೇ ಮೊದಲ ಬಾರಿಗೆ ಶೈನ್ ನಲ್ಲೂ ಹೋಂಡಾ ಸ್ಮಾರ್ಟ್ ಪವರ್ ತಂತ್ರಜ್ಞಾನ ಬಳಕೆಯಾಗಲಿದೆ. ಅಂದರೆ ಇದು ಸ್ಟ್ಯಾರ್ಟ್/ಸ್ಟಾಪ್ ತಂತ್ರಜ್ಞಾನದಿಂದ ಕೂಡಿರಲಿದ್ದು, ಟ್ರಾಫಿಕ್ ಮುಂತಾದ ಪ್ರದೇಶದಲ್ಲಿ ನಿಲ್ಲುವಾಗ ಗಾಡಿಯ ಎಂಜಿನ್ ಸ್ವಯಂಚಾಲಿತವಾಗಿ ನಿಲುಗಡೆಯಾಗಲಿದೆ. ಬಳಿಕ ಕ್ಲಚ್ ಅದುಮಿದರೆ ವಾಹನದ ಎಂಜಿನ್ ನಿಧಾನವಾಗಿ ಚಲಿಸಲು ಬಿಡಲಿದೆ ಇದರಿಂದ ಹೆಚ್ಚಿನ ಇಂಧನಯನ್ನು ಉಳಿತಾಯ ಮಾಡಬಹುದಾಗಿದೆ.

      ವೈಶಿಷ್ಟ್ಯಗಳು

      ವೈಶಿಷ್ಟ್ಯಗಳು

      ಕೊಂಬಿ ಬ್ರೇಕಿಂಗ್ ವ್ಯವಸ್ಥೆ, 10.5 ಲೀಟರ್ ಗಳ ಇಂಧನ ಟ್ಯಾಕ್, 18 ಇಂಚುಗಳ ಅಲಾಯ್ ವೀಲ್, ಎಲೆಕ್ಟ್ರಿಕ್ ಸ್ಟ್ರಾರ್ಟ್, ಟೆಲಿಸ್ಕಾಪಿಕ್ ಫ್ರಂಟ್ ಸಸ್ಪೆನ್ಷನ್, ಟ್ವಿನ್ ಕಾಯಿಲ್ ಸ್ಪ್ರಿಂಗ್ ರಿಯರ್ ಸಸ್ಪೆನ್ಷನ್, ಅನಲಾಗ್ ಸ್ಪೀಡೋಮೀಡರ್ ಹಾಗೂ ಟ್ಯೂಬ್ ಲೆಸ್ ಚಕ್ರಗಳು ಇದರಲ್ಲಿರುವ ಪ್ರಮುಖ ವೈಶಿಷ್ಟ್ಯಗಳಾಗಿರಲಿದೆ.

      ಐದು ಆಕರ್ಷಕ ಬಣ್ಣಗಳು

      ಐದು ಆಕರ್ಷಕ ಬಣ್ಣಗಳು

      • ಕಪ್ಪು,
      • ಅಥ್ಲೆಟಿಕ್ ಬ್ಲೂ ಮೆಟ್ಯಾಲಿಕ್,
      • ಗೆನಿ ಗ್ರೇ ಮೆಟ್ಯಾಲಿಕ್,
      • ಪಿಯರ್ಲ್ ಅಮೇಜಿಂಗ್ ವೈಟ್ ಮತ್ತು
      • ರೆಡ್ ಮೆಟ್ಯಾಲಿಕ್.
      • ಹೋಂಡಾ ಸಿಬಿ ಶೈನ್ ಸ್ಮಾರ್ಟ್ ಪವರ್ ಭರ್ಜರಿ ಬಿಡುಗಡೆ

        ಒಟ್ಟಿನಲ್ಲಿ ಹೀರೊ ಸ್ಪ್ಲೆಂಡರ್ ಐ ಸ್ಮಾರ್ಟ್ ತಂತ್ರಜ್ಞಾನಕ್ಕೆ ಎಲ್ಲ ರೀತಿಯಲ್ಲೂ ಸೆಡ್ಡು ನೀಡುತ್ತಿರುವ ಹೋಂಡಾ ಇದಕ್ಕೆ ಸಮಾನವಾದ ತಂತ್ರಜ್ಞಾನ ಹೊರ ತರುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.

        ಹೋಂಡಾ ಸಿಬಿ ಶೈನ್ ಸ್ಮಾರ್ಟ್ ಪವರ್ ಭರ್ಜರಿ ಬಿಡುಗಡೆ

        ಹೀರೊ ಸ್ಪ್ಲೆಂಡರ್ ಸ್ಟ್ಯಾರ್ಟ್ ಸ್ಟಾಪ್ ಸ್ಟ್ಯಾರ್ಟ್


More from DriveSpark

Article Published On: Thursday, November 19, 2015, 14:31 [IST]
English summary
Honda Launch The CB Shine SP In India For Rs 59,900/-
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+