ರಾಯಲ್ ಎನ್‌ಫೀಲ್ಡ್ ಡಿಸ್ಪಾಚ್ 1 ತಾಸಿನೊಳಗೆ ಸೋಲ್ಡ್ ಔಟ್

Written By:

ಇತ್ತೀಚೆಗಷ್ಟೇ ಡಿಸ್ಪಾಚ್ ವಿಶೇಷ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ದೇಶದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ರಾಯಲ್ ಎನ್ ಫೀಲ್ಡ್, ಇದಕ್ಕಾಗಿ 2015 ಜುಲೈ 15ರಂದು ಮಾರಾಟ ನಿಗದಿಪಡಿಸಿತ್ತು.

ಆದರೆ ಮಾರಾಟ ಆರಂಭಗೊಂಡ ಒಂದು ತಾಸಿನ ಅವಧಿಯೊಳಗೆ ಎಲ್ಲ ಡಿಸ್ಪಾಚ್ ಮಾದರಿಗಳು ಸಂಪೂರ್ಣವಾಗಿ ಮಾರಾಟ ಕಂಡಿದೆ. ಎರಡು ಡಿಸ್ಪಾಚ್ ಮಾದರಿಗಳ ಸೀಮಿತ ಮಾದರಿಗಳನ್ನು ಮಾರಾಟಕ್ಕಿಡಲಾಗಿತ್ತು. ಅವುಗಳೆಂದರೆ,

To Follow DriveSpark On Facebook, Click The Like Button
ರಾಯಲ್ ಎನ್‌ಫೀಲ್ಡ್ ಡಿಸ್ಪಾಚ್
  • ಸ್ವಾಡ್ರಾನ್ ಬ್ಲೂ ಡಿಸ್ಪಾಚ್ ಮತ್ತು (Squadron Blue Despatch) ಮತ್ತು
  • ಡೆಸರ್ಟ್ ಸ್ಟ್ರೋಮ್ ಡಿಸ್ಪಾಚ್ (Desert Storm Despatch)

ನೂತನ ಡಿಸ್ಪಾಚ್ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ 2.24 ಲಕ್ಷ ರು. ಗಳಷ್ಟು (ಎಕ್ಸ್ ಶೋ ರೂಂ ಮುಂಬೈ) ದುಬಾರಿಯೆನಿಸಿದೆ. ವಿಶೇಷ ಮೈ ಬಣ್ಣ, ಹಾಲ್ ಮಾರ್ಕ್, ವೈಯಕ್ತಿಕ ಕಿಟ್, ಇಟಲಿಯನ್ ಲೆಥರ್ ಸೀಟು, ಏರ್ ಫಿಲ್ಟರ್ ಬಾಕ್ಸ್, ವಿಶೇಷ ಶೈಲಿಯ ಎಕ್ಸಾಸ್ಟ್ ಕೊಳವೆ, ಐಕಾನಿಕ್ ಕ್ಲಾಸಿಕ್ ಶೈಲಿ ಮುಂತಾದ ವೈಶಿಷ್ಟ್ಯಗಳು ಪ್ರಮುಖ ಆಕರ್ಷಣೆಯಾಗಿದ್ದವು.

ರಾಯಲ್ ಎನ್‌ಫೀಲ್ಡ್ ಡಿಸ್ಪಾಚ್

ಎರಡು ವಿಶಿಷ್ಟ ಮೈಬಣ್ಣಗಳಲ್ಲಿ ತಲಾ 200ರಷ್ಟು ನಿರ್ಮಾಣ ಮಾಡಲಾಗಿತ್ತು. ಈ ಪೈಕಿ ಎರಡು ಬಣ್ಣಗಳ ತಲಾ 100ರಷ್ಟು ಭಾರತದಲ್ಲಿ ಉಳಿದವುಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು.

ಯುದ್ಧ ಕಾಲಘಟ್ಟದ ಡಿಸ್ಪಾಚ್ ಚಾಲಕರಿಂದ ಸ್ಪೂರ್ತಿ ಪಡೆದು ಈ ಮಿಲಿಟರಿ ಶೈಲಿಯ ಬೈಕ್ ಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ 500 ಸಿಸಿ ಎಂಜಿನ್ ಬಳಕೆ ಮಾಡಲಾಗಿದ್ದು, 27.2 ಅಶ್ವಶಕ್ತಿ ಉತ್ಪಾದಿಸಲಿದೆ.

English summary
Limited Edition Royal Enfield Despatch Sold Out In 1 Hour!
Story first published: Thursday, July 16, 2015, 7:38 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark