ರಸ್ತೆಯಲ್ಲಿ ಗಡಗಡ ಅಬ್ಬರಿಸಿದ ನೂತನ ಎನ್‌ಫೀಲ್ಡ್ 'ಹಿಮಾಲಯನ್' ಬೈಕ್

Written By:

ಚೆನ್ನೈ ಮೂಲದ ದೇಶದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ರಾಯಲ್ ಎನ್‌ಫೀಲ್ಡ್ ಅತಿ ಶೀಘ್ರದಲ್ಲೇ ತನ್ನ ಬಹುನಿರೀಕ್ಷಿತ ಹಿಮಾಲಯನ್ ಬೈಕ್ ಬಿಡುಗಡೆ ಮಾಡಲಿದೆ. ಈ ಸಂಬಂಧ ಕ್ರೀಡಾ ಪ್ರೇಮಿಗಳಲ್ಲಿ ಆಸಕ್ತಿ ಕೆರಳಿಸಿದೆ.

ಈ ನಡುವೆ ವಾಹನ ಉತ್ಸಾಹಿ ಸಂಸ್ಥೆಯೊಂದು ಎನ್‌ಫೀಲ್ಡ್ ರಹಸ್ಯ ವಿಡಿಯೋ ಲೀಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಚೆನ್ನೈನಲ್ಲಿ ಟೆಸ್ಟಿಂಗ್ ವೇಳೆ ಅತಿ ನೂತನ ಹಿಮಾಲಯನ್ ಬೈಕ್ ವಿಡಿಯೋವನ್ನು ಸೆರೆಹಿಡಿಯಲಾಗಿದೆ.

ರಾಯಲ್ ಎನ್ ಫೀಲ್ಡ್ ಹಿಮಾಲಯನ್

ರಾಯಲ್ ಎನ್ ಫೀಲ್ಡ್ ಹಿಮಾನಲಯನ್ ಅಡ್ವೆಂಚರ್ ಟೂರರ್ ಬೈಕ್ ನಲ್ಲಿರುವ 410 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ 32 ಎನ್ ಎಂ ತಿರುಗುಬಲದಲ್ಲಿ 28 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ

ಎಲ್ ಇಡಿ ಟೈಲ್ ಲ್ಯಾಂಪ್, ಮೊನೊ ಶಾಕ್, ಸಿಟ್ಟಿಂಗ್ ವ್ಯವಸ್ಥೆ, ಎಕ್ಸಾಸ್ ಹಾಗೂ ಒಟ್ಟಾರೆ ದೇಹ ವಿನ್ಯಾಸವು ಪ್ರಮುಖ ಆಕರ್ಷಣೆಯಾಗಿದೆ. ನೂತನ ರಾಯಲ್ ಎನ್‌ಫೀಲ್ಡ್ ಅಡ್ವೆಂಚರ್ ಟೂರರ್ ಬೈಕ್ ಎರಡು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ವರ್ಷಾರಂಭದಲ್ಲಿ ಮಾರುಕಟ್ಟೆ ತಲುಪಲಿದೆ.

ಇನ್ನುಳಿದಂತೆ ಹೊಸ ಇಂಧನ ಟ್ಯಾಂಕ್, ವಿಭಜಿತ ಸೀಟು, ಲಗ್ಗೇಜ್ ಕೇರಿಯರ್ ಹಾಗೂ ಸ್ಪೋಕ್ ವೀಲ್ಸ್ ಗಳು ಹೆಚ್ಚು ಆಕರ್ಷಣೆಯಾಗಲಿದೆ. ನೂತನ ಹಿಮಾಲಯನ್ ಬೈಕ್ ಸಂಸ್ಥೆಯ ಚೆನ್ನೈ ಘಟಕದಿಂದಲೇ ನಿರ್ಮಾಣಗೊಳ್ಳಲಿದ್ದು, ಅತಿ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ಶಬ್ದ ಆಲಿಸಿರಿ

English summary
Royal Enfield Himalayan Spy Video - Exhaust Thump Is Dead
Story first published: Tuesday, December 8, 2015, 9:32 [IST]
Please Wait while comments are loading...

Latest Photos