ವಾಹನ ಪ್ರೇಮಿಗಳು ಓಡಿಸಲೇಬೇಕಾದ 10 ಬೈಕ್ ಗಳು

By Nagaraja

ವಿಸ್ತಾರವಾಗಿ ಹರಡಿರುವ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳಿಗೂ ಹೆಚ್ಚಿನ ಬೇಡಿಕೆಯಿದೆ. ಈ ಪೈಕಿ ಬಹು ದೊಡ್ಡ ವಿಭಾಗವನ್ನು ಪ್ರಯಾಣಿಕ ಬೈಕ್ ಗಳು ಆಕ್ರಮಿಸಿಕೊಂಡಿದೆ. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ.

ಹೆಚ್ಚಿನ ಸಾಮರ್ಥ್ಯದ ಬೈಕ್ ಗಳು ಭಾರತದ ರಸ್ತೆಗಳಲ್ಲಿ ನಿಧಾನವಾಗಿ ಓಡಾಡಲು ಆರಂಭಿಸಿದೆ. ಇದರಂತೆ ಜಗತ್ತಿನ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳು ದೇಶದತ್ತ ಕಣ್ಣಾಯಿಸಿದೆ. ಹಾಗಿರುವಾಗ ಇಂತಹ ಬೈಕ್ ಗಳು ಈಗಾಗಲೇ ಬೈಕ್ ಸವಾರರನ್ನು ತಲುಪಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಭಾವನೆಯನ್ನುಂಟು ಮಾಡುವ 10 ಅತ್ಯಾಕರ್ಷಕ ಬೈಕ್ ಗಳನ್ನು ಇಲ್ಲಿ ಪಟ್ಟಿ ಮಾಡಕೊಡಲಾಗುವುದು. ಸ್ವಲ್ಪ ತಡವಾಗಿಯಾದರೂ ಈ ಎಲ್ಲ ಬೈಕ್ ಗಳು ಭಾರತ ಮಾರುಕಟ್ಟೆಯನ್ನು ತಲುಪಲಿದೆ ಎಂಬ ನಂಬಿಕೆ ನಮ್ಮದ್ದು.

10. ಹೋಂಡಾ ಸಿಆರ್ ಎಫ್250ಎಲ್

10. ಹೋಂಡಾ ಸಿಆರ್ ಎಫ್250ಎಲ್

ಹೋಂಡಾ ಸಿಆರ್ ಎಫ್250ಎಲ್ ಹೆಸರನ್ನು ಎಂದಾದರೂ ಕೇಳಿರುವೀರಾ? ಇದರಲ್ಲಿ 249.6 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಎಂಜಿನ್ ಆಳವಡಿಸಲಾಗಿದೆ. ಈ ಡ್ಯುಯಲ್ ಸ್ಪೋರ್ಟ್ ಮೋಟಾರುಸೈಕಲ್ ಆಫ್ ರೋಡ್ ಜೊತೆ ಜೊತೆಗೆ ಅದ್ಭುತ ರಸ್ತೆ ಸಾನಿಧ್ಯವನ್ನು ಹೊಂದಿದೆ. ಸಾಹಸಿ ಪ್ರಯಾಣಿಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಿರಲಿದೆ.

09. ಎಪ್ರಿಲಿಯಾ ಆರ್ ಎಸ್4 125

09. ಎಪ್ರಿಲಿಯಾ ಆರ್ ಎಸ್4 125

ಕೊನೆಗೂ ಎಪ್ರಿಲಿಯಾ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವುದು ಖುಷಿಯ ವಿಚಾರ. ಆದರೂ ಎಪ್ರಿಲಿಯಾದ ಶಕ್ತಿಶಾಲಿ ಆರ್ ಎಸ್4 125 ಯಾವಾಗ ಎಂಟ್ರಿ ಕೊಡಲಿದೆ ಎಂಬುದು ಪ್ರಶ್ನಾತಕ ವಿಷಯವಾಗಿದೆ. 125 ಸಿಸಿ ಸ್ಟ್ರೀಟ್ ಮಾದರಿಯಾಗಿರುವ ಆರ್ ಎಸ್4 ಐಕಾನಿಕ್ ರೇಸ್ ಮಾದರಿ ಆರ್ ಎಸ್ ವಿ4 125 ಮಾದರಿಯ ನಕಲು ಪ್ರತಿಯಾಗಿದೆ.

08. ಮಾಡ್ಡಾಸ್

08. ಮಾಡ್ಡಾಸ್

ಯಾಕೆ ಬರಬರಾದು ಅಂತೀರಾ? ಕೆಫೆ ರೇಸರ್ ಶೈಲಿಯ ಸ್ಪ್ಲೆಂಡರ್ ನಮ್ಮ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಬಹುದಾದರೆ ಈ ಚೀನಾ ಮೊಪೆಡ್ ಬೈಕ್ ಏಕೆ ಓಡಾಡಬಾರದು? 125 ಹಾಗೂ 49 ಸಿಸಿ ಸಿಂಗಲ್ ಸಿಲಿಂಡರ್ ಮೊಪೆಡ್ ಬೈಕ್ ಸ್ಟೈಲಿಷ್ ಲುಕ್ ಹೊಂದಿದೆ.

07. ಯಮಹಾ ಟಿಮ್ಯಾಕ್ಸ್

07. ಯಮಹಾ ಟಿಮ್ಯಾಕ್ಸ್

ಯಮಹಾದ ಅತಿ ಶಕ್ತಿಶಾಲಿ ಟಿಮ್ಯಾಕ್ಸ್ ಮಾದರಿಯನ್ನು ನಾವಿಲ್ಲಿ ಪರಿಚಯಿಸಲು ಬಯಸುತ್ತಿದ್ದೇವೆ. ಬರೋಬ್ಬರಿ 45 ಅಶ್ವಶಕ್ತಿ ಉತ್ಪಾದಿಸುವ ಈ ಬೈಕ್ ಸಿವಿಟಿ ಗೇರ್ ಬಾಕ್ಸ್ ಹಾಗೂ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ಪೆಡೆದುಕೊಂಡಿದೆ. ಇದು ಹೆಚ್ಚು ಆರಾಮದಾಯಕತೆಯನ್ನು ಪ್ರದಾನ ಮಾಡಲಿದೆ.

06. ಯಮಹಾ ವೈಝಡ್ ಎಫ್-ಆರ್6

06. ಯಮಹಾ ವೈಝಡ್ ಎಫ್-ಆರ್6

ಈ ಪಟ್ಟಿಯಲ್ಲಿ ಮಗದೊಂದು ಯಮಹಾ ಬೈಕ್ ನಿಮ್ಮ ಕಣ್ಣ ಮುಂದೆ ಅರಳುತ್ತಿದೆ. ಇದರಲ್ಲಿ ಪವರ್ ಫುಲ್ 599 ಸಿಸಿ, ಇನ್ ಲೈನ್, ಲಿಕ್ವಿಡ್ ಕೂಲ್ಡ್ ಫೋರ್ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದ್ದು, ಗರಿಷ್ಠ 133 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನಿರ್ವಹಣಾ ಬೈಕ್ ಪ್ರಿಯರಿಗೆ ಇದೊಂದು ಅದ್ಭುತ ಅನುಭವವಾಗಿರಲಿದೆ.

05. ಹೋಂಡಾ ಸಿಬಿಆರ್ 600 ಆರ್ ಆರ್

05. ಹೋಂಡಾ ಸಿಬಿಆರ್ 600 ಆರ್ ಆರ್

ಮೊಟೊಜಿಪಿ ತಂತ್ರಗಾರಿಕೆಯೊಂದಿಗೆ ಅಭಿವೃದ್ಧಿಗೊಂಡಿರುವ ಹೋಂಡಾದ ಸಿಬಿಆರ್ 600 ಆರ್ ಆರ್ ಯಮಹಾದ ಆರ್6 ಮಾದರಿಗೆ ಸ್ಪಷ್ಟ ಉತ್ತರವಾಗಿರಲಿದೆ. ಇದರಲ್ಲೂ 599 ಸಿಸಿ, ಲಿಕ್ವಿಡ್ ಕೂಲ್ಡ್, ಇನ್ ಲೈನ್, ಫೋರ್ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದ್ದು, 99.61 ಅಶ್ವಶಕ್ತಿ ಉತ್ಪಾದಿಸುತ್ತದೆ.

04. ಎಂವಿ ಆಗಸ್ಟಾ ಎಫ್3

04. ಎಂವಿ ಆಗಸ್ಟಾ ಎಫ್3

ಐಕಾನಿಕ್ ಆಗಸ್ಟಾ ಬೈಕ್ ಗಳ ಬಗ್ಗೆ ನೀವು ಕೇಳಿರಬಹುದು. ಭಾರತೀಯರು ಇಷ್ಟಪಡಬಹುದಾದ ಮಗದೊಂದು ಬೈಕ್ ಇದಾಗಿದೆ. ಇದರಲ್ಲಿ 798 ಸಿಸಿ ಲಿಕ್ವಿಡ್ ಕೂಲ್ಡ್ ಇನ್ ಲೈನ್ ತ್ರಿ ಸಿಲಿಂಡರ್ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದ್ದು, 148 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲದೆ ಗಂಟೆಗೆ 167 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವು ಇದಕ್ಕಿದೆ.

03. ಕವಾಸಕಿ ಕೆಎಲ್ ಆರ್650

03. ಕವಾಸಕಿ ಕೆಎಲ್ ಆರ್650

ಕವಾಸಕಿ ನಿಂಜಾದ ಹಲವು ಉತ್ಪನ್ನಗಳನ್ನು ನೀವು ನೋಡಿರಬಹುದು. ಆದರೆ ಸಂಪೂರ್ಣ ವಿಭಿನ್ನವಾಗಿರುವ ಕವಾಸಕಿ ಕೆಎಲ್ ಆರ್650 ಬೈಕ್ ನಿಮ್ಮ ಗಮನ ಸೆಳೆಯಲಿದೆ. 1987ನೇ ಇಸವಿಯಿಂದಲೇ ನಿರ್ಮಾಣದಲ್ಲಿರುವ ಈ ನಿರ್ವಹಣಾ ಬೈಕ್ ನಲ್ಲಿ 651 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದ್ದು, 36 ಅಶ್ವಶಕ್ತಿ ಉತ್ಪಾದಿಸುತ್ತದೆ. ಇದು ಕೂಡಾ ಟೂರಿಂಗ್ ಜೊತೆ ಪರಿಪೂರ್ಣ ಆಫ್ ರೋಡ್ ಬೈಕ್ ಎನಿಸಿಕೊಳ್ಳಲಿದೆ.

02. ಕೆಟಿಎಂ ಡ್ಯೂಕ್ 690

02. ಕೆಟಿಎಂ ಡ್ಯೂಕ್ 690

ಕೆಟಿಎಂ ಡ್ಯೂಕ್ 200 ಓಡಿಸಿದವರಿಗಂತೂ ಇದರಲ್ಲೊಮ್ಮೆ ಸವಾರಿ ಮಾಡೋಣವೇ ಎಂಬ ಹಂಬಲ ಹುಟ್ಟಿಕೊಳ್ಳಬಹುದು. ಯಾಕೆಂದರೆ ಕೆಟಿಎಂ ನಿರ್ವಹಣಾ ಬೈಕ್ ಗಳನ್ನು ಓಡಿಸುವುದರಲ್ಲಿ ಸಿಗುವ ಮಜಾನೇ ಬೇರೆ. ಬೈಕ್ ಪ್ರೇಮಿಗಳ ಕಣ್ಣು ಕುಕ್ಕುವಂತಹ ನೋಟವನ್ನು ಹೊಂದಿರುವ ಕೆಟಿಎಂ ಡ್ಯೂಕ್ 690 ಬೈಕ್ ನಲ್ಲಿ 690 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದ್ದು, 69.1 ಅಶ್ವಶಕ್ತಿ ಉತ್ಪಾದಿಸುತ್ತದೆ.

01. ರಾಯಲ್ ಎನ್ ಫೀಲ್ಡ್ ಟ್ರಯಲ್ಸ್ ಬೈಕ್

01. ರಾಯಲ್ ಎನ್ ಫೀಲ್ಡ್ ಟ್ರಯಲ್ಸ್ ಬೈಕ್

ಸ್ವದೇಶಿ ವಾಹನ ತಯಾರಿಕ ಸಂಸ್ಥೆಯಾಗಿರುವ ಹೊರತಾಗಿಯೂ ದೇಶದ ಪ್ರೇಮಿಗಳಿಗೆ ಇದುವರೆಗೆ ಇಂತಹದೊಂದು ಅದೃಷ್ಟ ದೊರಕಿಲ್ಲ. ಸದಾ ರಾಯಲ್ ಎನ್ ಪೀಲ್ಡ್ ಕನಸನ್ನು ಕಂಡು ಬೆಳೆದು ಬರುತ್ತಿರುವ ನಮ್ಮ ಯುವ ಬೈಕ್ ಪ್ರೇಮಿಗಳಿಗೆ ಐಕಾನಿಕ್ ರಾಯಲ್ ಎನ್ ಫೀಲ್ಡ್ ಟ್ರಯಲ್ಸ್ ಬೈಕ್ ಓಡಿಸುವ ಅವಕಾಶ ದೊರಕುತ್ತಿದ್ದರೆ ಚೆನ್ನಾಗಿರುತ್ತಿತ್ತು.

Most Read Articles

Kannada
Read more on ಬೈಕ್ motorcycles
English summary
In this list, we are going to take a look at 10 motorcycles that would suit India well:
Story first published: Wednesday, April 8, 2015, 9:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X