ದೇಶ ಪ್ರೇಮಿಗಳಿಗಾಗಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಆರ್ಮಿ ಬೈಕ್

Written By:

ದೇಶ ಪ್ರೇಮಿಗಳಿಗೊಂದು ಖುಷಿ ಸುದ್ದಿ. ಭಾರತದ ಪ್ರತಿಷ್ಠಿತ ದ್ವಿಚಕ್ರ ವಾಹನ ಸಂಸ್ಥೆ ರಾಯಲ್ ಎನ್ ಫೀಲ್ಡ್, ವಿಶೇಷ ಆರ್ಮಿ ಶೈಲಿಯ ಹಿಮಾಲಯನ್ ಬೈಕನ್ನು ಪರಿಚಯಿಸಿದೆ.

ಅಡ್ವೆಂಚರ್ ಟೂರರ್ ಬೈಕ್ ಆಗಿರುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಕೆಲವು ಸಮಯಗಳ ಹಿಂದೆಯಷ್ಟೇ ಮಾರುಕಟ್ಟೆಗೆ ಪ್ರವೇಶಿಸಿತ್ತು. ಈಗ ಬಿಡುಗಡೆಗೊಂಡಿರುವ ಬೆನ್ನಲ್ಲೇ ಅಹಮದಾಬಾದ್ ಡೀಲರ್ ಶಿಪ್ ವೊಂದರಲ್ಲಿ ವಿಶಿಷ್ಟ ಇಂಡಿಯನ್ ಆರ್ಮಿ ಶೈಲಿಯ ಹಸಿರು ಬಣ್ಣದ ಹಿಮಾಲಯನ್ ಪತ್ತೆಯಾಗಿದೆ.

To Follow DriveSpark On Facebook, Click The Like Button
ದೇಶ ಪ್ರೇಮಿಗಳಿಗಾಗಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಆರ್ಮಿ ಬೈಕ್

ಯುವ ಜನಾಂಗದಲ್ಲಿ ದೇಶ ಪ್ರೇಮಿ ಉಕ್ಕಿ ಹರಿಯಲಿದ್ದು, ನೂತನ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ಮತ್ತಷ್ಟು ಹುರುಪು ತುಂಬಲಿದೆ.

ದೇಶ ಪ್ರೇಮಿಗಳಿಗಾಗಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಆರ್ಮಿ ಬೈಕ್

ದೇಶದ ಅತಿ ಪುರಾತನ ದ್ವಿಚಕ್ರ ವಾಹನ ಸಂಸ್ಥೆಗಳಲ್ಲಿ ಒಂದಾಗಿರುವ ರಾಯಲ್ ಎನ್ ಫೀಲ್ಡ್ ಆಧುನಿಕತೆಗೆ ತಕ್ಕಂತೆ ನೂತನ ಹಿಮಾಲಯನ್ ಬೈಕ್ ಬಿಡುಗಡೆಗೊಳಿಸಿತ್ತು.

ದೇಶ ಪ್ರೇಮಿಗಳಿಗಾಗಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಆರ್ಮಿ ಬೈಕ್

ವಿಶೇಷ ಆರ್ಮಿ ಶೈಲಿಯ ಬೈಕ್ ನ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ತರಲಾಗಿಲ್ಲ. ಆದರೆ ಹಸಿರು ಬಣ್ಣದ ಜೊತೆಗೆ ಲೆಥರ್ ಸ್ಪರ್ಶವನ್ನು ಕೊಡಲಾಗಿದೆ.

ದೇಶ ಪ್ರೇಮಿಗಳಿಗಾಗಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಆರ್ಮಿ ಬೈಕ್

ವೃತ್ತಾಕಾರದ ಹೆಡ್ ಲೈಟ್, ಇನ್ಸ್ಟ್ರುಮೆಂಟ್ ಪ್ಯಾನೆಲ್, ಅನಲಾಗ್ ಡಯಲ್ಸ್, ದೊಡ್ಡದಾದ ಸ್ಪೀಡೋಮೀಟರ್, ಗೇರ್ ಇಂಡಿಕೇಟರ್, ಎರಡು ಟ್ರಿಪ್ ಮೀಟರ್, ಓಡೋಮೀಟರ್, ಡಿಜಿಟಲ್ ಕಾಂಪಾಸ್ ಇತ್ಯಾದಿ ಸೇವೆಗಳಿರಲಿದೆ.

ದೇಶ ಪ್ರೇಮಿಗಳಿಗಾಗಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಆರ್ಮಿ ಬೈಕ್

ಕಳೆದ ತಿಂಗಳಷ್ಟೇ ರಾಕರ್ ಶಾಫ್ಟ್ ಹಾಗೂ ಕ್ಲಚ್ ಜೋಡಣೆಯಲ್ಲಿ ದೋಷ ಕಂಡುಬಂದಿರುವ ಹಿನ್ನಲೆಯಲ್ಲಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ವಾಪಾಸ್ ಕರೆಯಿಸಿಕೊಳ್ಳಲಾಗಿತ್ತು.

ದೇಶ ಪ್ರೇಮಿಗಳಿಗಾಗಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಆರ್ಮಿ ಬೈಕ್

ನೂತನ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ದೆಹಲಿ ಆನ್ ರೋಡ್ ಬೆಲೆ 1,78,872 ರು.ಗಳಾಗಿರಲಿದೆ. ಇನ್ನು ಬೆಂಗಳೂರು ಆನ್ ರೋಡ್ ಬೆಲೆ 1,84,316 ರು.ಗಳಾಗಿರಲಿದೆ.

ದೇಶ ಪ್ರೇಮಿಗಳಿಗಾಗಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಆರ್ಮಿ ಬೈಕ್

ಇದರಲ್ಲಿರುವ 411 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ 4 ಸ್ಟ್ರೋಕ್ ಎಸ್ ಒಎಚ್ ಸಿ ಎಂಜಿನ್ 32 ಎನ್ ಎಂ ತಿರುಗುಬಲದಲ್ಲಿ 24.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಚಕ್ರಾಂತರ: 1465

ಗ್ರೌಂಡ್ ಕ್ಲಿಯರನ್ಸ್: 220

ಉದ್ದ: 2190

ಅಗಲ: 840

ಸೀಟು ಎತ್ತರ: 800

ಎತ್ತರ: 1360

ಭಾರ: 182 ಕೆ.ಜಿ

ಇಂಧನ ಸಾಮರ್ಥ್ಯ: 15 + 0.5 ಲೀಟರ್

English summary
Army Green Royal Enfield Himalayan Spotted At Ahmedabad Dealership
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark