ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಭಾರತಕ್ಕೆ ಬರುತ್ತಾ?

Written By:

ಕಳೆದ ವರ್ಷ ಡಾರ್ಕ್ ಕಸ್ಟಮ್ ಮಾದರಿಗಳನ್ನು ಅನಾವರಣಗೊಳಿಸಿರುವ ಅಮೆರಿಕ ಮೂಲದ ಐಕಾನಿಕ್ ಹಾರ್ಲೆ ಡೇವಿಡ್ಸನ್ ಸಂಸ್ಥೆಯು 2016 ಆಟೋ ಎಕ್ಸ್ ಪೋದಲ್ಲೂ ತನ್ನ ಶ್ರೇಣಿಯ ಮಾದರಿಗಳನ್ನು ಪರಿಚಯಿಸಿತ್ತು.

ಈಗ ತನ್ನ ಸ್ಪೋರ್ಟ್ ಸ್ಟರ್ ಸರಣಿಯ ಬೈಕ್ ಶ್ರೇಣಿಗೆ ಮಗದೊಂದು ಬೈಕ್ ಸೇರ್ಪಡೆಗೊಳಿಸಿರುವ ಈ ಉತ್ತರ ಅಮೆರಿಕ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ಸಂಸ್ಥೆಯು 2016 ಡೋರ್ ಸ್ಟರ್ ಮಾದರಿಯನ್ನು ಅನಾವರಣಗೊಳಿಸಿದೆ.

ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಅನಾವರಣ

ತವರೂರಿನಲ್ಲಿ 11119 ಅಮೆರಿಕನ್ ಡಾಲರ್ ಗಳಷ್ಟು ದುಬಾರಿಯೆನಿಸಲಿರುವ ಹಾರ್ಲೆ ಡೇವಿಡ್ಸನ್ ರೋಡ್ ಸ್ಟರ್ ಬೆಲೆಯನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿದಾಗ 7.37 ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ.

ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಅನಾವರಣ

ಸ್ಪೋರ್ಟ್ ಸ್ಟರ್ ಶ್ರೇಣಿಯಲ್ಲಿ ಈಗಾಗಲೇ ಐಯಾನ್ 883, 1200 ಕಸ್ಟಮ್ ಮತ್ತು ಫೋರ್ಟಿ-ಎಯಿಟ್ ಮಾದರಿಗಳನ್ನು ಹೊಂದಿರುವ ಹಾರ್ಲೆ ಇದೀಗ ವಿಶೇಷವಾಗಿಯೂ ಯುವ ಗ್ರಾಹಕರಿಗಾಗಿ ಮಗದೊಂದು ನೂತನ ಮಾದರಿಯನ್ನು ಪರಿಚಯಿಸಿದೆ.

ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಅನಾವರಣ

ನೂತನ ಹಾರ್ಲೆ ಡೇವಿಡ್ಸನ್ ರೋಡ್ ಸ್ಟರ್ ಮಾದರಿಯು 1200 ಸಿಸಿ, ಏರ್ ಕೂಲ್ಡ್ ಇವೊಲ್ಯೂಷನ್ ವಿ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 103 ಎನ್ ಎಂ ತಿರುಗುಬಲ ನೀಡಲಿದೆ.

ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಅನಾವರಣ

1506 ಎಂಎಂ ಚಕ್ರಾಂತರವನ್ನು ಪಡೆದಿರುವ ಹಾರ್ಲೆ ಡೇವಿಡ್ಸನ್ ರೋಡ್ ಸ್ಟರ್ 2184 ಎಂಎಂ ಉದ್ದ ಮತ್ತು 152 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹೊಂದಿರಲಿದೆ.

ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಅನಾವರಣ

ಇನ್ನುಳಿದಂತೆ 43 ಎಂಎಂ ಇನ್ವರ್ಟಡ್ ಫ್ರಂಟ್ ಫಾರ್ಕ್, ಪವರ್ ಫುಲ್ ಡಿಸ್ಕ್ ಬ್ರೇಕ್, ಪ್ರೀಮಿಯಂ ರಿಯರ್ ಸಸ್ಪೆನ್ಷನ್, ಡ್ಯುಯಲ್ ಗೇಜ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಐಕಾನಿಕ್ ಇಂಧನ ಟ್ಯಾಂಕ್ ಇರಲಿದೆ.

ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಅನಾವರಣ

ದೂರ ಪ್ರಯಾಣಕ್ಕೆಯೋಗ್ಯವೆನಿಸಲಿರುವ ಹಾರ್ಲೆ ನೂತನ ಬೈಕ್ 19 ಇಂಚುಗಳ ಫ್ರಂಟ್ ಮತ್ತು 18 ಇಂಚುಗಳ ರಿಯರ್ ವಿಭಜಿಯ 5 ಸ್ಪೋಕ್ ಅಲ್ಯೂಮಿನಿಯಂ ಚಕ್ರಗಳನ್ನು ಪಡೆದಿದೆ.

ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಅನಾವರಣ

ಹ್ಯಾಂಡ್ಸ್ ಫ್ರಿ, ಎಚ್ ಡಿ ಸ್ಮಾರ್ಟ್ ಸೆಕ್ಯೂರಿಟಿ ಸಿಸ್ಟಂ, ಡ್ಯುಯಲ್ ಡಿಸ್ಕ್ ಫ್ರಂಟ್ ಬ್ರೇಕ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ರೇಸ್ ಪ್ರೇರಿತ ಗ್ರಾಫಿಕ್ಸ್ ಇತ್ಯಾದಿ ಹಲವಾರು ವೈಶಿಷ್ಟ್ಯಗಳನ್ನು ಪಡೆಯಲಿದೆ.

ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಅನಾವರಣ

ನಾಲ್ಕು ಆಕರ್ಷಕ ಬಣ್ಣಗಳು - ವೆಲೊಸಿಟಿ ರೆಡ್ ಸಂಗ್ಲೊ, ಬಿಲ್ಲೆಟ್ ಸಿಲ್ವರ್, ಬ್ಲ್ಯಾಕ್ ಡೆನಿಮ್ ಮತ್ತು ವಿವಿಡ್ ಬ್ಲ್ಯಾಕ್.

ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಅನಾವರಣ

2016 ಜೂನ್ ವೇಳೆಯಾಗುವಾಗ ಅಮೆರಿಕ ಮಾರುಕಟ್ಟೆ ಪ್ರವೇಶಿಸಲಿರುವ ನೂತನ ರೋಡ್ ಸ್ಟರ್, ನಿಕಟ ಭವಿಷ್ಯದಲ್ಲಿ ಭಾರತ ಪ್ರವೇಶಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.

English summary
Harley-Davidson Roadster Thunders Into Life, Prices Start At $11,119
Story first published: Tuesday, April 19, 2016, 17:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark