ಬೆನೆಲ್ಲಿ ಝಫೆರನೊ 250 ಸ್ಕೂಟರಿನ ರಹಸ್ಯ ಚಿತ್ರಗಳು ಸೋರಿಕೆ

Written By:

ಇಟಾಲಿ ಮೂಲದ ದ್ವಿಚಕ್ರ ಉತ್ಪಾದಕ ಸಂಸ್ಥೆಯಾದ ಬೆನೆಲ್ಲಿ, ಭಾರತದಲ್ಲಿ ತನ್ನ ಝಫೆರನೊ 250 ಸ್ಕೂಟರಿನ ಪರೀಕ್ಷೆ ನೆಡೆಸುತಿದ್ದು, ಸ್ಕೂಟರಿನ ಸ್ಪೈ ಚಿತ್ರಗಳು ಬಿಡಿಗಡೆಗೊಂಡಿವೆ.

To Follow DriveSpark On Facebook, Click The Like Button
ಬೆನೆಲ್ಲಿ ಝಫೆರನೊ 250 ಸ್ಕೂಟರಿನ ರಹಸ್ಯ ಚಿತ್ರಗಳು ಸೋರಿಕೆ

ಬೆನೆಲ್ಲಿ ಸಂಸ್ಥೆ ಭಾರತದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಹರಸಾಹಸ ಪಡುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಶ್ರಮ ವಹಿಸುತ್ತಿದೆ. ಈ ಸಂಸ್ಥೆಯು ಇತ್ತೀಚಿಗೆ ಹೊಸ ಮಾದರಿಯ ಝಫ್ರಾನೊ 250 ಸ್ಕೂಟರ್ ಅನಾವರಣಗೊಳಿಸಲು ಮುಂದಾಗಿದ್ದು, ಸ್ಕೂಟರಿನ ಪರೀಕ್ಷೆ ಕೈಗೊಂಡಿದೆ.

ಬೆನೆಲ್ಲಿ ಝಫೆರನೊ 250 ಸ್ಕೂಟರಿನ ರಹಸ್ಯ ಚಿತ್ರಗಳು ಸೋರಿಕೆ

ಈ ನವೀನ ಮಾದರಿಯ ದ್ವಿಚಕ್ರ ವಾಹನವು ಭಾರತದ ಪುಣೆ ನಗರದಲ್ಲಿ ಪರೀಕ್ಷೆ ವೇಳೆ ಕಾಣಿಸಿಕೊಂಡಿದ್ದು, ಈ ಸ್ಕೂಟರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ. ಈ ವಾಹನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆನೆಲ್ಲಿ ಝಫೆರನೊ 250 ಸ್ಕೂಟರಿನ ರಹಸ್ಯ ಚಿತ್ರಗಳು ಸೋರಿಕೆ

250 ಸಿಸಿಯ ಬಲಿಷ್ಠ ಸ್ಕೂಟರ್ ಆಗಿರುವ ಝಫೆರನೊ, ಈಗಾಗಲೇ ಇಂಡೋನೇಷ್ಯಾದಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತವಾಗಿ, ಈ ಸ್ಕೂಟರ್ Rp 45,55 ದಶಲಕ್ಷ (ಅಂದಾಜು ರೂ 2.18 ಲಕ್ಷ) ಬೆಲೆ ಪಡೆದುಕೊಂಡಿದೆ.

ಬೆನೆಲ್ಲಿ ಝಫೆರನೊ 250 ಸ್ಕೂಟರಿನ ರಹಸ್ಯ ಚಿತ್ರಗಳು ಸೋರಿಕೆ

ಈ ವರ್ಷ ಯಾವುದೇ ರೀತಿಯ ವಾಹನಗಳನ್ನೂ ಸಹ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಗಳನ್ನು ಹೊಂದಿರದ ಬೆನೆಲ್ಲಿ, ಈ ಝಫೆರನೊ 250 ಸ್ಕೂಟರನ್ನು ಭಾರತದಿಂದ ಮತ್ತೊಂದು ಮಾರುಕಟ್ಟೆಗೆ ರಫ್ತು ಮಾಡುವ ಯೋಜನೆ ಹೊಂದಿದೆ ಎಂಬ ಮಾಹಿತಿ ದೊರಕಿದೆ.

ಬೆನೆಲ್ಲಿ ಝಫೆರನೊ 250 ಸ್ಕೂಟರಿನ ರಹಸ್ಯ ಚಿತ್ರಗಳು ಸೋರಿಕೆ

ಝಫೆರನೊ 250 ಸ್ಕೂಟರ್, 249.7 ಸಿಸಿ ಸಿಂಗಲ್ ಸಿಲಿಂಡರ್, ಫ್ಯುಯೆಲ್ ಇಂಜೆಕ್ಟ್ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 20.83 ಏನ್‌ಎಂ ತಿರುಗುಬಲದಲ್ಲಿ 20.7 ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. ಈ ಎಂಜಿನ್ ಸ್ವಯಂಚಾಲಿತ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಬೆನೆಲ್ಲಿ ಝಫೆರನೊ 250 ಸ್ಕೂಟರಿನ ರಹಸ್ಯ ಚಿತ್ರಗಳು ಸೋರಿಕೆ

ಸ್ಕೂಟರಿನ ಬ್ರೆಕಿಂಗ್ ಬಗ್ಗೆ ಹೇಳುವುದಾದರೆ, ಹಿಂಭಾಗದಲ್ಲಿ ಎರಡು ಡಿಸ್ಕ್ ಹೊಂದಿರುವ ಬ್ರೇಕ್ ಮತ್ತು ಮುಂಭಾಗದಲ್ಲಿ ಒಂದು ಡಿಸ್ಕ್ ಪ್ಲೇಟ್ ಹೊಂದಿರುವ ಬ್ರೇಕಿಂಗ್ ಸಿಸ್ಟಮ್ ಈ ಸ್ಕೂಟರ್ ಪಡೆದುಕೊಂಡಿದೆ. ಈ ಸ್ಕೂಟರ್ 155 ಕೆ.ಜಿ ತೂಕ ಹೊಂದಿದೆ.

ಬೆನೆಲ್ಲಿ ಝಫೆರನೊ 250 ಸ್ಕೂಟರಿನ ರಹಸ್ಯ ಚಿತ್ರಗಳು ಸೋರಿಕೆ

12 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ, ಡ್ಯುಯಲ್ ಹೆಡ್‌ಲ್ಯಾಂಪ್ ಸೆಟಪ್, ವಿಂಡ್ ಸ್ಕ್ರೀನ್, ಅನಲಾಗ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ನಯಗೊಳಿಸಿದ ಟೈಲ್ ಲ್ಯಾಂಪ್ ಸಂಯೋಜನೆಯ ಲಕ್ಷಣಗಳನ್ನು ನೋಡಬಹುದಾಗಿದೆ.

English summary
Read in Kannada about Italian two-wheeler manufacturer Benelli is testing a scooter in India. Know more about this vehicle, specification and more
Story first published: Thursday, August 10, 2017, 15:16 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark