ಡುಕಾಟಿ ಇತಿಹಾಸದ ಮಹತ್ವದ ಹಂತ ಈ ಹೊಸ 'ವಿ4 ಎಂಜಿನ್'

Written By:

ಭವಿಷ್ಯದಲ್ಲಿ ಡುಕಾಟಿ ತನ್ನ ವಾಹನಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಹೊಸ ವಿ4 ಎಂಜಿನ್ ಈಗಾಗಲೇ ನಿರ್ಮಾಣಗೊಳ್ಳುತ್ತಿದ್ದು, ಈ ಎಂಜಿನ್ ಪಡೆದ ಬೈಕ್ ಸದ್ಯದರಲ್ಲಿಯೇ ಬಿಡುಗಡೆಗೊಳ್ಳಲಿದೆ.

ಡುಕಾಟಿ ಇತಿಹಾಸದ ಮಹತ್ವದ ಹಂತ ಈ ಹೊಸ 'ವಿ4 ಎಂಜಿನ್'

ಇಟಾಲಿಯನ್ ಸೂಪರ್ ಬೈಕ್ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಹೊಸ ವಿ4 ಎಂಜಿನ್ ಮೇಲೆ ಕೆಲಸ ಮಾಡುತ್ತಿದ್ದು, ಈ ಎಂಜಿನ್ ಹೊಂದಿರುವ ಹೊಸ ಸೂಪರ್ ಬೈಕ್ ಇದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲು ಕಂಪನಿ ನಿರ್ಧರಿಸಿದೆ ಎನ್ನಲಾಗಿದೆ.

ಡುಕಾಟಿ ಇತಿಹಾಸದ ಮಹತ್ವದ ಹಂತ ಈ ಹೊಸ 'ವಿ4 ಎಂಜಿನ್'

ವರದಿಯ ಪ್ರಕಾರ ಡುಕಾಟಿಯು ಮೊಟೊ ಇವೆಂಟ್ ಏರ್ಪಾಡು ಮಾಡಲು ಮುಂದಾಗಿದ್ದು, ಈ ಮೊಟೊ ರ‍್ಯಾಲಿಯಲ್ಲಿ ತನ್ನ ಶ್ರೇಷ್ಠ ಮಟ್ಟದ ಚೊಚ್ಚಲ ವಿ4 ಎಂಜಿನ್ ಪರಿಚಯ ಮಾಡುವ ಸುಳಿವು ನೀಡಿದೆ.

ಡುಕಾಟಿ ಇತಿಹಾಸದ ಮಹತ್ವದ ಹಂತ ಈ ಹೊಸ 'ವಿ4 ಎಂಜಿನ್'

ತನ್ನ ಸಾಕಷ್ಟು ವಾಹನಗಳಲ್ಲಿ ಸದ್ಯ ಬಳಸುತ್ತಿರುವ ಸಾಂಪ್ರದಾಯಿಕ V-ಟ್ವಿನ್ ಎಂಜಿನ್ ಬದಲು ಹೊಸ ವಿ4 ಎಂಜಿನ್ ಬಳಸಲು ಡುಕಾಟಿ ಮುಂದಾಗಿದ್ದು, ದೊಡ್ಡ ಮಟ್ಟದ ಬದಲಾವಣೆಯನ್ನು ಸೂಪರ್ ಬೈಕುಗಳು ಕಾಣಲಿವೆ.

ಡುಕಾಟಿ ಇತಿಹಾಸದ ಮಹತ್ವದ ಹಂತ ಈ ಹೊಸ 'ವಿ4 ಎಂಜಿನ್'

ಡುಕಾಟಿಯು ಕೇವಲ 90 ಡಿಗ್ರಿ ವಿ4 ಎಂಜಿನ್ ಮಾತ್ರ ಬಹಿರಂಗಪಡಿಸಬಹುದು ಎನ್ನಲಾಗಿದೆ ಮತ್ತು ಅನಾವರಣಗೊಳ್ಳುತ್ತಿರುವ ಹೊಸ ಎಂಜಿನ್ ಭಿನ್ನವಾದ ಶಕ್ತಿ ವಿತರಣೆಯನ್ನು ಪಡೆದುಕೊಳ್ಳಲಿದ್ದು, ನವೀನ ರೀತಿಯ ತಂತ್ರಜ್ಞಾನ ವಾಹನ ಚಾಲಕರಿಗೆ ಶ್ರೇಷ್ಠ ಅನುಭವ ನೀಡಲಿದೆ.

ಡುಕಾಟಿ ಇತಿಹಾಸದ ಮಹತ್ವದ ಹಂತ ಈ ಹೊಸ 'ವಿ4 ಎಂಜಿನ್'

ಹೊಸ ವಿ4 ಎಂಜಿನ್ ಡುಕಾಟಿ ಇತಿಹಾಸದಲ್ಲಿಯೇ ಮಹತ್ವದ ಹಂತ ಎಂಬ ಮಾತುಗಳು ವಾಹನೋದ್ಯಮದಲ್ಲಿ ಕೇಳಿ ಬರುತ್ತಿದ್ದು, ಇತ್ತೀಚೆಗೆ ಪ್ಯಾನಿಗಾಲೆ ಸರಣಿಯ 1299 ಆರ್ ಸೂಪರ್ ಬೈಕನ್ನು ಅನಾವರಣಗೊಳಿಸಿತ್ತು.

Read more on ಡುಕಾಟಿ ducati
English summary
Italian superbike manufacturer Ducati is working on a new V4 engine to be used in its future offerings. Moto.it reports that the new V4 Superbike will be revealed on September 7, 2017.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark