ದಾರಿ ಬಿಡಿ, ಬರ್ತಿದೆ ಹಾರ್ಲೆ ಡೇವಿಡ್ಸನ್ ನ 'ರೋಡ್ ಕಿಂಗ್ ಸ್ಪೆಷಲ್'

Written By:

ಭಾರತ ದೇಶದ ನಂ.1 ಪ್ರೀಮಿಯಂ ಮೋಟಾರ್ ಸೈಕಲ್ ಬ್ರಾಂಡ್ ಆಗಿರುವ ಹಾರ್ಲೆ ಡೇವಿಡ್ಸನ್ ನ ರೋಡ್ ಕಿಂಗ್ ಬೈಕ್ ಹೊಸ ಅವತಾರದಲ್ಲಿ ಹೊಚ್ಚ ಹೊಸ ಛಾಯೆಯೊಂದಿದೆ ನಿಮ್ಮ ಕೈ ಸೇರಲಿದೆ.

'ಮೂಡಿ ಬ್ಲಾಕ್' ಎಂಬ ಹೊಚ್ಚ ಹೊಸ ಕ್ರೋಮ್ ಬಿಟ್ ಬಣ್ಣ ಹೊಂದಿರುವ ಈ ಬೈಕ್, ಮೊದಲ ಬಾರಿಗೆ ಬೈಕ್ ನೋಡಿದವರನ್ನು ಆಕರ್ಷಿಸದೆ ಇರದು. ಬೈಕಿನ ಬಣ್ಣದ ಜೊತೆ ಕೆಲವೇ ಕೆಲವು ಬದಲಾವಣೆಗಳನ್ನು ಮಾಡಿದ್ದು, ಈ ಮೊದಲಿಗೆ ಇದ್ದ 'ವಿಂಡ್ ಸ್ಕ್ರೀನ್' ತೆಗೆದುಹಾಕಲಾಗಿದೆ.

ಸಾಮಾನ್ಯ ಹಿಡಿಗಳ ಬದಲಾಗಿ 9 ಇಂಚಿನ ಆಪೇ ಹಿಡಿಯನ್ನು ಕೊಡಲಾಗಿದೆ ಇದರಿಂದಾಗಿ ಆರಾಮದಾಯಕ ಪ್ರಯಾಣ ನಿಮ್ಮದಾಗಲಿದೆ.

ಹೊಸ ರೋಡ್ ಕಿಂಗ್ ಪ್ರಮುಖವಾಗಿ ನಾಲ್ಕು ಬಣ್ಣಗಳಲ್ಲಿ ಬರುತಿದ್ದು, ಜನರು ಹೊಸ ಸೂಪರ್ ಬೈಕ್ ಅನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಮೇಲೆ ಹೇಳಿರುವಂತೆ ಚಾರ್ಕೋಲ್ ಡೆನಿಮ್, ವಿವಿಡ್ ಬ್ಲಾಕ್, ಆಲಿವ್ ಗೋಲ್ಡ್ ಮತ್ತು ಹಾಟ್ ರಾಡ್ ರೆಡ್ ಫ್ಲೇಕ್ ಹಾರ್ಡ್ ಕ್ಯಾಂಡಿ ಕಸ್ಟಮ್ ಎಂಬ ನಾಲ್ಕು ವಿಶಿಷ್ಟ ಬಣ್ಣಗಳಲ್ಲಿ ಈ ಬೈಕ್ ಬಿಡುಗಡೆಗೊಳ್ಳುತ್ತಿದೆ.

ಅಮೇರಿಕಾ ಮೂಲದ ಬೈಕ್ ತಾಂತ್ರಿಕತೆಗೆ ಸಂಬಂಧಿಸಿದಂತೆ 1750 ಸಿಸಿ ಮಿಲ್ವಾಕೀ ಎಂಟು ಎಂಜಿನ್ ಹೊಂದಿರುವ ಬೈಕ್ ಇದಾಗಿದ್ದು ಸಾಮಾನ್ಯ ಎಂಜಿನ್ ಗೆ ಹೋಲಿಸಿದರೆ ಶೇಕಡಾ 10 ರಷ್ಟು ಹೆಚ್ಚು ಅಶ್ವಶಕ್ತಿ ಉತ್ಪಾಧಿಸುವ ಸಾಮರ್ಥ್ಯ ಹೊಂದಿದೆ.

ಅಮೆರಿಕಾದಲ್ಲಿ ಬಿಡುಗಡೆಗೊಂಡಿದೆ ಎಂದ ಕೂಡಲೇ ಭಾರತಕ್ಕೆ ಬರುತ್ತಾ ಎಂಬ ಪ್ರೆಶ್ನೆ ನಿಮ್ಮನ್ನು ಕಾಡಬಹುದು, ನೆನಪಿಟ್ಟುಕೊಳ್ಳಿ, ಭಾರತದಲ್ಲಿ 601 ಸಿಸಿ ಹಾಗೂ ಅದಕ್ಕಿಂತಲೂ ಮೇಲ್ಪಟ್ಟ ವಿಭಾಗದಲ್ಲಿ ಹಾರ್ಲೆ ಡೇವಿಡ್ಸನ್ ಶೇಕಡಾ 60ರಷ್ಟು ಮಾರುಕಟ್ಟೆ ಶೇರನ್ನು ಹೊಂದಿದೆ.

ಭಾರತದಲ್ಲಿರುವ ಹಾರ್ಲೆ ಡೇವಿಡ್ಸನ್ ಬೈಕ್ ಗಳು :
ಸ್ಟ್ರೀಟ್ 750,
ಐಯಾನ್ 883,
1200 ಕಸ್ಟಮ್,
ಫೋರ್ಟಿ ಎಯಿಟ್,
ರೋಡ್ ಸ್ಟರ್,
ಸ್ಟ್ರೀಟ್ ಬಾಬ್,
ಫಾಟ್ ಬಾಬ್.

ಭಾರತದಲ್ಲಿರುವ ಹಾರ್ಲೆ ಡೇವಿಡ್ಸನ್ ಬೈಕ್ ಗಳು :
ಫಾಟ್ ಬಾಯ್,
ಹೆರಿಟೇಡ್ ಸಾಫ್ಟೈಲ್ ಕ್ಲಾಸಿಕ್,
ರೋಡ್ ಕಿಂಗ್,
ಸ್ಟ್ರೀಟ್ ಗ್ಲೈಡ್ ಸ್ಪೆಷಲ್,
ರೋಡ್ ಗ್ಲೈಡ್ ಸ್ಪೆಷಲ್,
ಸಿವಿಒ ಲಿಮಿಟೆಡ್.

ಹಾರ್ಲೆ ಡೇವಿಡ್ಸನ್ ಬೈಕಿನ ಮತ್ತೊಂದು ಆವೃತಿ "ಇಂಡಿಯನ್ ಚೀಫ್ ಟೈನ್ ಡಾರ್ಕ್ ಹಾರ್ಸ್" ಬೈಕಿನ ಚಿತ್ರಗಳನ್ನು ವೀಕ್ಷಿಸಿ.

English summary
Harley-Davidson has unveiled the Road King Special, with a host of cosmetic changes that is now available in four new shades.
Story first published: Tuesday, February 14, 2017, 11:39 [IST]
Please Wait while comments are loading...

Latest Photos