ಕವಾಸಕಿ ನಿಂಜಾ 650 ಕೆಆರ್‌ಟಿ ಆವೃತಿ ಭಾರತದಲ್ಲಿ ಬಿಡುಗಡೆ

Written By:

ಭಾರತದಲ್ಲಿ ಕವಾಸಕಿ ನಿಂಜಾ ಬ್ರ್ಯಾಂಡ್ ಜನಪ್ರಿಯತೆ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ರೀಡಾ ವಾಹನ ಪ್ರಿಯರಿಗೆ ನಿಂಜಾ ಝಡ್-10 ಆರ್-ಸ್ಪೀಡ್ ಮತ್ತು ನಿಂಜಾ 650 ವಾಹನಗಳನ್ನು ಬಿಡುಗಡೆಗೊಳಿಸಿತ್ತು.

ಕವಾಸಕಿ ನಿಂಜಾ 650 ಕೆಆರ್‌ಟಿ ಆವೃತಿ ಭಾರತದಲ್ಲಿ ಬಿಡುಗಡೆ

ಈಗಾಗಲೇ ಭಾರತದಲ್ಲಿ ಸಾಕಷ್ಟು ಹೆಸರು ಪಡೆದುಕೊಂಡಿರುವ 650 ವಾಹನದ ಕೆಆರ್‌ಟಿ ಆವೃತಿಯನ್ನು ಜಪಾನಿನ ದೈತ್ಯ ಪರಿಚಯಿಸಿದೆ. ಕೆಆರ್‌ಟಿ ಹೆಸರು ಕವಾಸಕಿ ರೇಸಿಂಗ್ ತಂಡವನ್ನು ಪ್ರತಿನಿಧಿಸಲಿದ್ದು, ಹೊಸ ಬೈಕ್ ಸಾಕಷ್ಟು ಗ್ರಾಫಿಕ್ಸ್ ಪಡೆದು ವಿನ್ಯಾಸಗೊಂಡಿದೆ.

ಕವಾಸಕಿ ನಿಂಜಾ 650 ಕೆಆರ್‌ಟಿ ಆವೃತಿ ಭಾರತದಲ್ಲಿ ಬಿಡುಗಡೆ

ಹೊಸ ಕವಾಸಕಿ ನಿಂಜಾ 650 ಬೈಕ್ ರೂ.5.49 ಲಕ್ಷ ಎಕ್ಸ್ ಶೋರೂಂ ಬೆಲೆ ಪಡೆದುಕೊಂಡಿದೆ. ಇದು ಸಾಮಾನ್ಯ ಆವೃತ್ತಿಗಿಂತ ಸುಮಾರು 16 ಸಾವಿರದಷ್ಟು ಹೆಚ್ಚು ಬೆಲೆ ಪಡೆದುಕೊಂಡಿದೆ.

ಕವಾಸಕಿ ನಿಂಜಾ 650 ಕೆಆರ್‌ಟಿ ಆವೃತಿ ಭಾರತದಲ್ಲಿ ಬಿಡುಗಡೆ

ನೂತನ ಕವಾಸಕಿ ನಿಂಜಾ 650 ಕೆಆರ್‌ಟಿ ದ್ವಿಚಕ್ರ, ಕಾಸ್ಮೆಟಿಕ್ ಜೊತೆಗೆ ಎಂಜಿನ್ ಪರಿಷ್ಕರಣೆಯನ್ನು ಪಡೆದಿದೆ. ಅಲ್ಲದೆ ಹಿಂದಿನ ಮಾದರಿಗಿಂತಲೂ ಹೆಚ್ಚು ಸ್ಟೈಲಿಶ್ ಆಗಿದೆ.

ಕವಾಸಕಿ ನಿಂಜಾ 650 ಕೆಆರ್‌ಟಿ ಆವೃತಿ ಭಾರತದಲ್ಲಿ ಬಿಡುಗಡೆ

"ಇತ್ತೀಚೆಗೆ ನಿಂಜಾ 650 ಕೆಆರ್‌ಟಿ ಆವೃತ್ತಿಯು ಅಮೇರಿಕ, ಯೂರೋಪ್ ಮತ್ತು ಇತರ ದೇಶಗಳಲ್ಲಿ ಈ ನಿಂಜಾ 650 ವಾಹನವು ಉತ್ತಮ ಪ್ರದರ್ಶನ ನೀಡಿದ್ದು, ಭಾರತದಲ್ಲಿಯೂ ಸಹ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಈ ಸಂತೋಷವನ್ನು ಮತ್ತಷ್ಟು ಹೆಚ್ಚಿಸಲು 650 ಕೆಆರ್‌ಟಿ ಆವೃತಿಯನ್ನು ಬಿಡುಗಡೆಗೊಳಿಸಿದ್ದೇವೆ" ಎಂದು ಭಾರತದಲ್ಲಿ ಕವಾಸಕಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯುಟಾಕಾ ಯಮಾಶಿಟಾ ಅವರು ತಿಳಿಸಿದ್ದಾರೆ.

ಕವಾಸಕಿ ನಿಂಜಾ 650 ಕೆಆರ್‌ಟಿ ಆವೃತಿ ಭಾರತದಲ್ಲಿ ಬಿಡುಗಡೆ

ಹಿಂದುಗಡೆಯು ವಿನ್ಯಾಸವನ್ನು ಪರಿಷ್ಕೃತಗೊಳಿಸಲಾಗಿದೆ. ಇನ್ನು ವಿಭಜಿತ ಸೀಟುಗಳನ್ನು ಜೋಡಣೆ ಮಾಡಲಾಗಿದೆ ಹಾಗು ಮೆಟ್ಯಾಲಿಕ್ ಸ್ಪಾರ್ಕ್ ಬ್ಲ್ಯಾಕ್, ಬ್ಲಿಜಾರ್ಡ್ ಪಿಯರ್ಲ್ ವೈಟ್ ಮತ್ತು ಕ್ಯಾಂಡಿ ಬಂರ್ಟ್ ಆರೆಂಜ್ ಎಂಬ ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಗೊಂಡಿದೆ.

ಕವಾಸಕಿ ನಿಂಜಾ 650 ಕೆಆರ್‌ಟಿ ಆವೃತಿ ಭಾರತದಲ್ಲಿ ಬಿಡುಗಡೆ

ಯುರೋ 4 ಮಟ್ಟದ ಪ್ಯಾರಲಲ್ ಟ್ವಿನ್ ಎಂಜಿನ್ ಮಧ್ಯಮ ಶ್ರೇಣಿಯ ಎಂಜಿನ್ ಆಳವಡಿಸಲಾಗಿದೆ. ಇದರ ಯುಆರ್6 ಎಂಜಿನ್ 75 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಹಿಂದುಗಡೆಯು ವಿನ್ಯಾಸವನ್ನು ಪರಿಷ್ಕೃತಗೊಳಿಸಲಾಗಿದೆ. ಇನ್ನು ವಿಭಜಿತ ಸೀಟುಗಳನ್ನು ಜೋಡಣೆ ಕಾಣಬಹುದಾಗಿದೆ.

English summary
The Japanese bike maker launched Kawasaki Ninja ZX-10R-inspired 2017 and Ninja 650 earlier this year. And now, the Japanese giant has introduced the Kawasaki Ninja 650 KRT Edition in India.
Story first published: Saturday, November 11, 2017, 15:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark