ಸೂಪರ್ ಚಾರ್ಜ್ಡ್ ಮೋಟಾರ್ ಸೈಕಲ್‌ಗಳನ್ನು ಪರಿಚಯಿಸುತ್ತಿದೆ ಕವಾಸಕಿ

Written By:

ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಸೂಪರ್ ಬೈಕ್ ಉತ್ಪಾದನಾ ಸಂಸ್ಥೆಯಾದ ಕವಾಸಕಿ ಸದ್ಯದಲ್ಲೇ ಸೂಪರ್ ಚಾರ್ಜ್ಡ್‌ನೊಂದಿಗೆ ಅಭಿವೃದ್ಧಿ ಹೊಂದಿರುವ ವಿಶೇಷ ಬೈಕ್ ಒಂದನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಬೃಹತ್ ಯೋಜನೆ ಕೈಗೊಂಡಿರುವ ಕವಾಸಕಿಯು ಸದ್ಯದ್ಲಲೇ ಸುಧಾರಿತ ತಂತ್ರಜ್ಞಾನ ಮಾದರಿಯ ಸೂಪರ್ ಚಾರ್ಜ್ಡ್ ಪ್ರೇರಿತ ಬೈಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದು ,ಮುಂಬರುವ ಪ್ರತಿಷ್ಠಿತ ಇಐಸಿಎಂಎ ಆಟೋ ಮೇಳ ಪ್ರದರ್ಶನಗೊಳಿಸಲಿದೆ.

ಇದಕ್ಕಾಗಿಯೇ ಟೀಸರ್ ಒಂದನ್ನು ಬಿಡುಗಡೆ ಕೂಡಾ ಮಾಡಿರುವ ಕವಾಸಕಿ ಸಂಸ್ಥೆಯು ದೂರದ ಪ್ರಮಾಣಗಳಿಗೆ ಅನುಕೂಲಕರವಾಗಬಲ್ಲ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಆಟೋ ಉದ್ಯಮಕ್ಕೆ ಪರಿಚಯಿಸುವ ಇರಾದೆ ವ್ಯಕ್ತಪಡಿಸಿದೆ.

ಸೂಪರ್ ಚಾರ್ಜ್ಡ್ ಎಂಜಿನ್ ವಿಶೇಷತೆ?

ಸದ್ಯ ಎಲೆಕ್ಟ್ರಿಕ್ ಎಂಜಿನ್ ಮಾದರಿಗಳಲ್ಲೇ ಅತಿ ಹೆಚ್ಚು ಸುಧಾರಿತ ಮಾದರಿಯಾಗಿರುವ ಸೂಪರ್ ಚಾರ್ಜ್ಡ್ ಎಂಜಿನ್‌ಗಳು ಅತಿಹೆಚ್ಚು ಮೈಲೇಜ್ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದಲ್ಲಿ ಸಾವಿರಕ್ಕೂ ಅಧಿಕ ಮೈಲೇಜ್ ಒದಗಿಸುವ ಶಕ್ತಿಯನ್ನು ಪಡೆದಿಕೊಂಡಿವೆ.

English summary
Read in Kannada about Kawasaki Teases New Supercharged Motorcycle; To Be Revealed At EICMA.
Story first published: Wednesday, October 11, 2017, 19:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark