ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು; ನಾಳೆಗೆ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ರಿಲೀಸ್

Written By:

ಆಸ್ಟ್ರಿಯನ್ ಪ್ರಮುಖ ದ್ವಿಚಕ್ರ ವಾಹನಗಳ ತಯಾರಕ ಕಂಪನಿ ಕೆಟಿಎಂ, 2017 ನೂತನ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ನಾಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ 390 ಡ್ಯೂಕ್ ಮತ್ತು 200 ಡ್ಯೂಕ್ ಗ್ರಾಹಕರ ಕೈಸೇರಲಿದ್ದು, ಖರೀದಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿದೆ.

To Follow DriveSpark On Facebook, Click The Like Button
ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು; ನಾಳೆಗೆ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ರಿಲೀಸ್

ಅಂತರ್ಜಾಲಗಳ ವರದಿ ಪ್ರಕಾರ ನಾಳೆಯೇ ಕೆಟಿಎಂ 390 ಡ್ಯೂಕ್ ಮತ್ತು 200 ಡ್ಯೂಕ್ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಹೊಸ ಬೈಕ್‌ ಮಾದರಿ ಬಗೆಗೆ ಭಾರೀ ನೀರಿಕ್ಷೆ ಹುಟ್ಟುಹಾಕಲಾಗಿದೆ. ಈ ಹಿಂದೆ 2016ರ ನವೆಂಬರ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ EICMA ಪ್ರದರ್ಶನದಲ್ಲಿ 390 ಡ್ಯೂಕ್ ಮತ್ತು 200 ಡ್ಯೂಕ್ ಯಶಸ್ವಿ ಪ್ರದರ್ಶನ ಕಂಡಿದ್ದವು.

ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು; ನಾಳೆಗೆ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ರಿಲೀಸ್

ಈ ಮಧ್ಯೆ ನೂತನ ಮಾದರಿಯ ಕೆಟಿಎಂ 390 ಡ್ಯೂಕ್ ಹಾಗೂ 200 ಡ್ಯೂಕ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಇದ್ದನ್ನೇ ಬಂಡವಾಳವಾಗಿ ಮಾಡಿಕೊಂಡ ಕೆಲ ಬೈಕ್ ವಿತರಕರು, ಗ್ರಾಹಕರಿಂದ 20 ಸಾವಿರ ರೂಪಾಯಿ ಮುಂಗಡ ಹಣ ಪಡೆದು ಬುಕಿಂಗ್ ಆರಂಭಿಸಿದ್ದಾರೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು; ನಾಳೆಗೆ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ರಿಲೀಸ್

ಈ ಮೊದಲು ಕೆಟಿಎಂ ತನ್ನ 200 ಡ್ಯೂಕ್ ಪ್ರಾರಂಭಿಸುವ ಮೂಲಕ 2012 ರಲ್ಲಿ ಭಾರತೀಯ ದ್ವಿಚಕ್ರ ಮಾರುಕಟ್ಟೆ ಪ್ರವೇಶ ಮಾಡಿತ್ತು. ಬೈಕ್ ಸವಾರರಿಗೆ ಹೊಸ ಅನುಭೂತಿ ನೀಡಿದ್ದ ಕೆಟಿಎಂ, ಅಲ್ಪಾವಧಿಯಲ್ಲೇಸಾಕಷ್ಟು ಜನಪ್ರಿಯತೆ ಪಡೆಯಿತು. ಇದಕ್ಕೆ ಪ್ರಮುಖ ಕಾರಣ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಕೆಟಿಎಂ, 2013ರಲ್ಲಿ 390 ಡ್ಯೂಕ್ ಬಿಡುಗಡೆಗೊಳಿಸಿ ಯಶಸ್ವಿಯಾಗಿತ್ತು.

ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು; ನಾಳೆಗೆ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ರಿಲೀಸ್

2013ರಲ್ಲಿ ಬಿಡುಗಡೆಯಾಗಿದ್ದ ಕೆಟಿಎಂ 390 ಡ್ಯೂಕ್ ಆವೃತ್ತಿ, ಹಾರ್ಸ್ ಪವರ್ ಕಾರ್ಯಕ್ಷಮತೆಯಿಂದಾಗಿ ಯುವಜನತೆಯ ಮೆಚ್ಚುಗೆಗೆ ಪಾತ್ರವಾಗಿತ್ತು. ಡ್ಯುಯಲ್ ಚಾನಲ್ ಎಬಿಎಸ್ ಉಪಕರಣ ಹೊಂದಿದ್ದರು, ಕೈಗೆಟುಕುವ ದರದಲ್ಲಿ ಬೈಕ್ ದರ ನಿಗದಿ ಗಮನ ಸೆಳೆದಿತ್ತು.

ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು; ನಾಳೆಗೆ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ರಿಲೀಸ್

ಸದ್ಯ ಬಿಡುಗಡೆಗೊಳ್ಳಲು ಸಜ್ಜಾಗಿರುವ 2017ರ 390 ಡ್ಯೂಕ್, ಹೊಸ ಎಲ್ಇಡಿ ಹೆಡ್ ಲ್ಯಾಂಪ್, ಹ್ಯಾಂಡ್ ಫ್ರಿ ಕಿಟ್ ಮತ್ತು ಆಡಿಯೊ ಪ್ಲೇಯರ್ ಹೊಂದಿದೆ. ಜೊತೆಗೆ ನೂತನ ಮಾದರಿಗಳಿಗೆ ಹೊಸ ರೂಪ ನೀಡಲಾಗಿದ್ದು, ಪ್ರಸ್ತುತ ತಂತ್ರಜ್ಞಾನಗಳೊಂದಿಗೆ ನವೀಕರಿಸಲಾಗಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು; ನಾಳೆಗೆ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ರಿಲೀಸ್

390 ಡ್ಯೂಕ್ 2017 ಆವೃತ್ತಿಯಲ್ಲಿ ಹೊಸ ಫ್ರಂಟ್ ಫ್ರೋಕ್ಸ್ , ದೊಡ್ಡದಾದ ಬ್ರೇಕ್, ಬೃಹತ್ ಗ್ರಾತದ ಇಂಧನ ಟ್ಯಾಂಕ್, ಸ್ಲಿಪ್ಪರ್ ಕ್ಲಚ್ ವ್ಯವಸ್ಥೆ ಹೊಂದಿದೆ. ಅಲ್ಲದೇ 373 ಸಿಸಿ ಎಂಜಿನ್ ಸಾಮರ್ಥ್ಯವಿದ್ದು, ವೇಗವರ್ಧಕ ಪರಿವರ್ತಕ ಸಾಧನ ಅಳವಡಿಸಲಾಗಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು; ನಾಳೆಗೆ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ರಿಲೀಸ್

ದ್ರವ ತಂಪುಗೊಳಿಸುವ ಮೋಟಾರ್ ಪವರ್ ಹೊಂದಿರುವ 373ಸಿಸಿ ಡ್ಯೂಕ್ 390, 35ಎನ್ಎಂ ಜೊತೆಗೆ 44ಬಿಎಚ್‌ಪಿ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವಿದೆ. ಅದೇ ರೀತಿಯಾಗಿ 2017ರ 200 ಡ್ಯೂಕ್ 200ಸಿಸಿ ಬೈಕಿನಲ್ಲೂದ್ರವ ತಂಪುಗೊಳಿಸುವ ಮೋಟಾರ್ ಪವರ್ ಹೊಂದಿದ್ದು, 19.2ಎನ್ಎಂ ಜೊತೆ 25ಬಿಎಚ್‌ಪಿ ಟಾರ್ಕ್ ಉತ್ವಾದಿಸುವ ಶಕ್ತಿ ಹೊಂದಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು; ನಾಳೆಗೆ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ರಿಲೀಸ್

ಒಟ್ಟಿನಲ್ಲಿ ಅದ್ಭುತ ವೆಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಕೆಟಿಎಂ ಹೊಸ ಆವೃತ್ತಿಗೆ ಜನ ಎದುರು ನೋಡುತ್ತಿದ್ದು, ಬೈಕ್ ವಿತರಕರಿಗೆ ಇದು ವರದಾನ ಪರಿಣಮಿಸಿದೆ.

2017 ಕೆಟಿಎಂ 390 ಡ್ಯೂಕ್ ಬೈಕ್‌ಗಳ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Some KTM dealerships have already started accepting bookings for the 2017 models for a token amount of Rs 20,000.
Please Wait while comments are loading...

Latest Photos