ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ ನೋಡಿ..!

Written By:

ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಪರಿಷ್ಕೃತ ಮಾದರಿಯ ಬೈಕ್ ಜಿಕ್ಸರ್ ಬಿಡುಗಡೆಗೊಳಿಸಿದೆ. ಇದರೊಂದಿಗೆ ಜಿಕ್ಸರ್ ಎಸ್ಎಫ್ ಮತ್ತು ಆಕ್ಸೆಸ್ 125 ಸ್ಕೂಟರ್ ಕೂಡಾ ಬಿಡುಗಡೆಯಾಗಿದ್ದು, ವಿನೂತನ ಮಾದರಿಗಳಲ್ಲಿ ಬಿಎಸ್-IV ಎಂಜಿನ್ ಅಳವಡಿಸಲಾಗಿದೆ.

To Follow DriveSpark On Facebook, Click The Like Button
ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ ನೋಡಿ..!

ಬಿಡುಗಡೆಯಾಗಿರುವ ಜಿಕ್ಸರ್ ಹಾಗೂ ಜಿಕ್ಸರ್ ಎಸ್ಎಎಫ್ 2017ರ ಮಾದರಿಗಳಲ್ಲಿ ಬಿಎಸ್-IV ಎಂಜಿನ್ ಅವಳಡಿಸಲಾಗಿದ್ದು, ಬೈಕ್ ಗುಣಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ. ಇದಲ್ಲದೇ ಹೊಸ ಮಾದರಿಯಲ್ಲಿ ಆಟೋಮೆಟಿಕ್ ಹೆಡ್‌ಲ್ಯಾಂಪ್ ವ್ಯವಸ್ಥೆಯಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ ನೋಡಿ..!

ನೂತನ ಜಿಕ್ಸರ್ ಹಾಗೂ ಜಿಕ್ಸರ್ ಎಸ್ಎಫ್‌ನ ಗ್ರಾಫಿಕ್ಸ್ ವರ್ಕ್ ಅದ್ಭುತವಾಗಿದ್ದು, ಬೈಕ್‌ಗೆ ಸ್ಪೋರ್ಟ್ಸ್ ಲುಕ್ ನೀಡಲಾಗಿದೆ. ಜಿಕ್ಸರ್ ಚಿಹ್ನೆಯೂ ಕೂಡಾ ಟ್ಯಾಂಕ್ ಮೇಲೆ ದೊಡ್ಡದಾಗಿದ್ದು, ಎಲ್‌ಇಡಿ ಟೈಲ್ ಲ್ಯಾಂಪ್ ನೂತನ ಬೈಕಿನ ಅಂದ ಹೆಚ್ಚಿಸಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ ನೋಡಿ..!

ಇನ್ನೊಂದು ವಿಶೇಷವೇನೆಂದರೆ ಹಿಂಬದಿ ಚಕ್ರಕ್ಕೂ ಡಿಸ್ಕ್ ಬ್ರೇಕ್ ವ್ಯವಸ್ಥೆ ಹೊಂದಿರುವ ಜಿಕ್ಸರ್ ಬೈಕ್, ಪ್ರಮುಖ ಬಣ್ಣಗಳಲ್ಲಿ ಲಭ್ಯವಿದೆ. ಜಿಕ್ಸರ್ ಸರಣಿಗಳು ಪರ್ಲ್ ಮಿರಾ ರೆಡ್, ಗ್ರಾಸ್ ಸ್ಪಾರ್ಕಲ್ ಬ್ಲ್ಯಾಕ್ ಹಾಗೂ ಮೆಟಾಲಿಕ್ ಟ್ರೈಟಾನ್‌ಗಳಲ್ಲಿ ಲಭ್ಯವಿದ್ದು, ಗ್ರಾಸ್ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣ ಡ್ರಮ್ ಬ್ರೇಕ್ ಹೊಂದಿರುವ ಮಾದರಿಯಲ್ಲೂ ಲಭ್ಯವಿರಲಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ ನೋಡಿ..!

ಹಿಂಬದಿಯ ಡಿಸ್ಕ್ ಬ್ರೇಕ್ ಹೊಂದಿರುವ ಜಿಕ್ಸರ್ ಬೈಕ್ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 80,528ಗಳಿಗೆ ಲಭ್ಯವಿದೆ. ಅದೇ ರೀತಿ ಡ್ರಮ್ ಬ್ರೇಕ್ ಹೊಂದಿರೋ ಬೈಕ್ ಬೆಲೆ ರೂ. 77,452ಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ ನೋಡಿ..!

ವಿನೂತನ ಮಾದರಿಯ ಜಿಕ್ಸರ್ ಎಸ್ಎಫ್ ಬೈಕ್‌ಗಳಲ್ಲಿ ಬೈಕ್ ಚಿಹ್ನೆಗಳಿಗೆ ಹೆಚ್ಚಿನ ಗಮನಹರಿಸಲಾಗಿದ್ದು, ನೋಡಲು ಅತ್ಯಾಕರ್ಷಕವಾಗಿವೆ. ವಿವಿಧ ಬಣ್ಣಗಳಲ್ಲಿ ಚಿಹ್ನೆಗಳನ್ನು ಅಭಿವೃದ್ದಿಪಡಿಸಲಾಗಿದ್ದು, ಪರ್ಲ್ ಮಿರಾ ರೆಡ್, ಗ್ರಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟಾಲಿಕ್ ಟೈಟಾನ್‌ ಮತ್ತು ಮೆಟಾಲಿಕ್ ಟ್ರೈಟಾನ್ ಬ್ಲೂ ಬಣ್ಣಗಳಲ್ಲಿ ಮಿಂಚಲಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ ನೋಡಿ..!

ಜಿಕ್ಸರ್ ಎಸ್ಎಫ್ ಎಫ್ಐ ಮಾದರಿ ಕೂಡಾ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಮೆಟಾಲಿಕ್ ಟ್ರೈಟಾನ್ ಬ್ಲೂ, ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಗಿಕ್ಸರ್ ಎಸ್ಎಫ್ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.89,659ಗಳಿಗೆ ಲಭ್ಯವಿದ್ದರೆ, ಎಸ್ಎಫ್ ಎಫ್ಐ ಮಾದರಿ ರೂ.93,499ಗಳಿಗೆ ಲಭ್ಯವಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ ನೋಡಿ..!

ವಿವಿಧ ಮಾದರಿಯ ಜಿಕ್ಸರ್ ಸರಣಿಗಳನ್ನು ಹೊರತಂದಿರುವ ಸುಜುಕಿ, ಆಕ್ಸೆಸ್ 125 ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಮೆಟಾಲಿಕ್ ಸೊನಿಕ್ ಸಿಲ್ವರ್ ಕಲರ್‌ನಲ್ಲಿ ಲಭ್ಯವಿದ್ದು, ದಹೆಲಿ ಎಕ್ಸ್‌ಶೋರಂ ಪ್ರಕಾರ ಡ್ರಮ್ ಬ್ರೇಕ್ ಹೊಂದಿರುವ ಸ್ಕೂಟರ್ ಬೆಲೆ ರೂ. 54,302ಗಳಿಗೆ ಲಭ್ಯವಿದೆ. ಜೊತೆಗೆ ಡಿಸ್ಕ್ ಬ್ರೇಕ್ ಹೊಂದಿರುವ ಸ್ಕೂಟರ್ ಬೆಲೆ ರೂ.57, 615ಗಳಿಗೆ ಲಭ್ಯವಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ ನೋಡಿ..!

ಬೈಕ್ ಬಿಡುಗಡೆ ಬಗ್ಗೆ ಮಾಹಿತಿ ನೀಡಿರುವ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಸತೋಶಿ ಉಚಿಡಾ, ನೂತನ ವೈಶಿಷ್ಟ್ಯತೆಗಳ ಬಗ್ಗೆ ಹೆಚ್ಚು ಉತ್ಸುಕತೆ ಹೊಂದಿದ್ದಾರೆ. ಸತೋಶಿ ಪ್ರಕಾರ "ಈ ಹಿಂದಿನ ಸರಣಿಗಳಿಂತ ಹೆಚ್ಚು ಪರಿಷ್ಕೃತ ತಂತ್ರಜ್ಞಾನ ಹೊಂದಿರುವ ಹೊಸ ಸರಣಿಗಳು ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಲಿವೆ. ಜೊತೆಗೆ ಆಟೋಮೆಟಿಕ್ ಹೆಡ್ ಲ್ಯಾಂಪ್ ವ್ಯವಸ್ಥೆ ಹೊಂದಿದ್ದು, ಗ್ರಾಹಕ ಸ್ನೇಹಿ ಬೈಕ್ ಎಂಬ ಹೆಗ್ಗಳಿಕೆ ಪಾತ್ರವಾಗುವ ನೀರಿಕ್ಷೆಯಿದೆ" ಎಂದಿದ್ದಾರೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ ನೋಡಿ..!

ಸದ್ಯ ಬಿಡುಗಡೆಯಾಗಿರುವ ಗಿಕ್ಸರ್ ಮಾದರಿಗಳನ್ನು ಯುವಜನತೆಯನ್ನ ಹೆಚ್ಚು ಟಾರ್ಗೆಟ್ ಮಾಡಲಾಗಿದ್ದು, ನೂತನ ಬೈಕ್‌ಗಳ ಬಗೆಗೆ ಸುಜುಕಿ ಸಂಸ್ಥೆ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದೆ. ಅಲ್ಲದೇ ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಜಿಕ್ಸರ್ ಮುಂಬರುವ ದಿನಗಳಲ್ಲಿ ಭಾರೀ ಮಾರಾಟ ನೀರಿಕ್ಷೆ ಹೊಂದಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ 250 ಸಿಸಿ ಎಂಜಿನ್ ಹೊಂದಿರುವ ಯಮಹಾ FZ25 ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Suzuki has launched its 2017 Gixxer, Gixxer SF and Access 125 with BS-IV compliant engine, AHO and exciting new colours.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark