ಎಬಿಎಸ್ ತಂತ್ರಜ್ಞಾನ ಪಡೆದ ಮೊದಲ 150ಸಿಸಿ ಸ್ಕೂಟರ್ ಇದು...

ಕೇಂದ್ರ ಸರ್ಕಾರದ ಆದೇಶದ ಅನುಸಾರ 2019 ಎಪ್ರಿಲ್ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿರುವ 125ಸಿಸಿ ಗಿಂತಾ ಹೆಚ್ಚು ಸಮರ್ಥ್ಯವುಳ್ಳ ದ್ವಿಚಕ್ರ ವಾಹನಗಳು ಕಡ್ಡಾಯವಾಗಿ ಏಬಿಎಸ್ ಟೆಕ್ನಾಲಜಿಯನ್ನು ಪಡೆದಿರಲೇಬೇಕಿದ್ದು, ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ.

ಎಬಿಎಸ್ ತಂತ್ರಜ್ಞಾನ ಪಡೆದ ಮೊದಲ 150ಸಿಸಿ ಸ್ಕೂಟರ್ ಇದು...

ಈಗಾಗಲೆ ಹಲವಾರು ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಾದ ಬಜಾಜ್, ಟಿವಿಎಸ್, ರಾಯಲ್ ಎನ್‍ಫೀಲ್ಡ್ ತಮ್ಮ 125ಸಿಸಿ ಗಿಂತಾ ಹೆಚ್ಚಿನ ಸಾಮರ್ಥ್ಯವಿರುವ ವಾಹನಗಳಿಗೆ ಎಬಿಎಸ್ ಟೆಕ್ನಾಲಜಿಯನ್ನು ನೀದುತ್ತಿದೆ. ಇದೇ ಮೊದಲ ಬಾರಿಗೆ ಸ್ಕೂಟರ್‍‍ಗಳಲ್ಲಿಯು ಸಹ ಎಬಿಎಸ್ ಅನ್ನು ನೀಡಲು ಪಿಯಾಜಿಯೋ ಸಂಸ್ಥೆಯು ಮುಂದಾಗಿದ್ದು, ತಮ್ಮ ಎಪ್ರಿಲಿಯಾ 150 ಸ್ಕೂಟರ್‍‍ಗಳಿಗೆ ಎಬಿಎಸ್ ನೀಡಲು ಮುಂದಾಗಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಮೊದಲ 150ಸಿಸಿ ಸ್ಕೂಟರ್ ಇದು...

ಹೌದು, ಎಪ್ರಿಲಿಯಾ ಸಂಸ್ಥೆಯು ತಮ್ಮ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್‍ ಗ್ರಾಹಕರಿಗೆ ಸುರಕ್ಷತೆಯನ್ನು ನೀಡಲು ಕೇಂದ್ರ ಸರ್ಕಾರದ ಆದೇಶದಂತೆ ಎಬಿಎಸ್ ಟೆಕ್ನಾಲಜಿಯನ್ನು ನೀಡಲು ಮುಂದಾಗಿದ್ದು, ಈ ಸ್ಕೂಟರ್‍‍ಗಳ ಮಾರಾಟಕ್ಕಾಗಿ ಜನವರಿ ಯಲ್ಲಿ ಬಿಡುಗಡೆಗೊಳ್ಳಲು ಡೀಲರ್‍‍ಗಳ ಯಾರ್ಡ್ ಅನ್ನು ತಲುಪಲು ಸಿದ್ಧವಾಗಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಮೊದಲ 150ಸಿಸಿ ಸ್ಕೂಟರ್ ಇದು...

ಹೊಸ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್‍‍ಗಳು ಈ ಬಾರಿ 'ವೀ' ಟೈರ್‍‍ಗಳನ್ನು ಪಡೆದುಕೊಳ್ಳದೇ, ಎಂಆರ್‍ಎಫ್ ಟೈರ್‍‍ಗಳನ್ನು ಪಡೆದುಕೊಂಡಿದ್ದು, ಕೆಂಪು ಮತ್ತು ಕಪ್ಪು ಬಣ್ಣದ ಕಾಂಬಿನೇಷನ್‍‍ನಲ್ಲಿ ಲಭ್ಯವಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಮೊದಲ 150ಸಿಸಿ ಸ್ಕೂಟರ್ ಇದು...

ಅಷ್ಟೆ ಅಲ್ಲದೇ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್, ರೆಡ್ ಆಂಡ್ ವೈಟ್ & ರೆಡ್ ಮತ್ತು ಗ್ರೀನ್ ಬಣ್ಣಗಳ ಕಾಂಬಿನೇಷನ್‍‍ನಲ್ಲಿ ಕೂಡಾ ಲಭ್ಯವಿದೆ. 201ರ ಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶನಗೊಂಡ ಕಾರ್ಬನ್ ವೇರಿಯಂಟ್ ಕೂಡಾ ಎಬಿಎಸ್ ವೇರಿಯಂಟ್‍‍ನ ಜೊತೆಗೆ ಬಿಡುಗಡೆಗೊಳ್ಳುವುದಾಗಿ ಸಂಸ್ಥೆಯು ಹೇಳಿಕೊಂಡಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಮೊದಲ 150ಸಿಸಿ ಸ್ಕೂಟರ್ ಇದು...

ಮಾಹಿತಿಗಳ ಪ್ರಕಾರ ಎಬಿಎಸ್ ವೇರಿಯಂಟ್‍ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್‍‍ಗಳು ಸಾದಾರಣ ಸ್ಕೂಟರ್‍‍ಗಳಿಗಿಂತಾ ರೂ. 10,000 ಹೆಚ್ಚಿರಬಹುದೆಂಡು ಹೇಳಲಾಗಿದ್ದು, ಆನ್ ಒಟ್ಟಾರೆಯಾಗಿ 1 ಲಕ್ಷದ ಆನ್ ರೋಡ್ ಬೆಲೆಯನ್ನು ಪಡೆದುಕೊಳ್ಳಬಹುದಾಗಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಮೊದಲ 150ಸಿಸಿ ಸ್ಕೂಟರ್ ಇದು...

ಎಂಜಿನ್ ಸಾಮರ್ಥ್ಯ

ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್ 154.8ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 10.25 ಬಿಹೆಚ್‍ಪಿ ಮತ್ತು 11.4ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಮೊದಲ 150ಸಿಸಿ ಸ್ಕೂಟರ್ ಇದು...

ಇನ್ನು ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್ ರೈಡರ್‍‍ಗಳ ಸುರಕ್ಷತೆಗಾಗಿ ಮುಂಭಾಗದಲ್ಲಿ 220ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 140ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದ್ದು, ಎರಡೂ ಬದಿಯಲ್ಲಿ 14 ಇಂಚಿನ 120 ಸೆಕ್ಷನ್ ಟ್ಯೂಬ್‍ಲೆಸ್ ಟೈರ್ ಅನ್ನು ಪಡೆದುಕೊಂಡಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಮೊದಲ 150ಸಿಸಿ ಸ್ಕೂಟರ್ ಇದು...

ಜೊತೆಗೆ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್ ಪ್ರಸ್ಥುತ ಇರುವ ಸ್ಕೂಟರ್‍‍ನಂತೆಯೆ ಫ್ಯುಯಲ್ ಗೌಜ್, ಓಡೋಮೀಟರ್, 2 ಟ್ರಿಪ್ ಮೀಟರ್, ಅನಾಲಾಗ್ ಮೀಟರ್ ಮತ್ತು ಸಮಯವನ್ನು ತೋರಿಸುವ ಎಲ್‍ಸಿಡಿ ಸ್ಕ್ರೀನ್ ಅನ್ನು ಹೊಂದಿರಲಿದ್ದು, ಸಂಸ್ಥೆಯು ಈಗಾಗಲೆ ನವೀಕರಿಸಲಾದ ಎಸ್ಆರ್ 150 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿ ಹೆಚ್ಚಿನ ಬುಕ್ಕಿಂಗ್ ಅನ್ನು ಪಡೆದುಕೊಳ್ಳುತ್ತಿದೆ.

Source: Powerdrift

Most Read Articles

Kannada
English summary
Aprilia SR 150 ABS Reaches Dealerships, Launch In January. Read In Kannada
Story first published: Monday, December 31, 2018, 10:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X