ಆಟೋ ಎಕ್ಸ್‌ಪೋ 2018: ಅನಾವರಣಗೊಂಡ ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್

Written By: Rahul

ಇಟಾಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥಯಾದ ಎಪ್ರಿಲಿಯಾ ತನ್ನ ಹೊಸ ಸ್ಟ್ರೋಮ್ 125 ಸ್ಕೂಟರ್‌ನ್ನು ಅನಾವರಣಗೊಳಿಸಿದ್ದು, ಜೊತೆಗೆ ಎಪ್ರಿಲಿಯಾ ಎಸ್ಆರ್ 125 ಸ್ಕೂಟರನ್ನು ಬಿಡುಗಡೆಗೊಳಿಸಿದೆ.

ಆಟೋ ಎಕ್ಸ್‌ಪೋ 2018: ಅನಾವರಣಗೊಂಡ ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್

ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟಾರ್ ಎಪ್ರಿಲಿಯಾ ಎಸ್ಆರ್ 125 ಸ್ಕೂಟರಿನ ರೂಪವನ್ನು ಹೋಲಲಿದ್ದು, ಸಣ್ಣ ಬದಲಾವಣೆಯೊಂದಿಗೆ ಸ್ಟೋರ್ಮ್ 125 ಸ್ಕೂಟರ್ ಅನಾವರಣಗೊಂಡಿದೆ. ಇನ್ನು ಈ ಸ್ಕೂಟರ್ ಕೆಂಪು ಮತ್ತು ಹಳದಿ ಡ್ಯುಯಲ್ ಟೋನ್ ಗ್ರಾಫಿಕ್ ಬಣ್ಣವನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2018: ಅನಾವರಣಗೊಂಡ ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್

ಸ್ಟ್ರೋಮ್ 125, ಎಸ್ಆರ್ 125 ಸ್ಕೂಟರಿನಲ್ಲಿರುವ ಎಪ್ರಾನ್ ಮೌಂಟೆಡ್ ಡ್ಯುಯಲ್ ಹೆಡ್ ಲ್ಯಾಂಪ್, ಟ್ವಿನ್-ಪಾಡ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಶಾರ್ಪ್ ವಿನ್ಯಾಸವನ್ನು ಹೊಂದಿದ್ದು, ಚಕ್ರಗಳಲ್ಲಿ ಮಾತ್ರ ಬದಲಾವಣೆಯನ್ನು ಕಾಣಬಹುದಾಗಿದೆ. ಎಸ್ಆರ್125 14ಇಂಚಿನ ಚಕ್ರಗಳನ್ನು ಹೊಂದಿದ್ದರೇ ಸ್ಟ್ರೋಮ್ 125 12 ಇಂಚಿನ ಚಕ್ರಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2018: ಅನಾವರಣಗೊಂಡ ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್

ಈ ಸ್ಕೂಟರ್‌ನ ವೀ ರಬ್ಬರ್ ಹೈ ಪ್ರೋಫೈಲ್ ಡ್ಯುಯಲ್-ಪರ್ಪಸ್ ಟ್ಯೂಬ್ ಲೆಸ್ ಚಕ್ರಗಳನ್ನು ಹೊಂದಿದ್ದು ವಿಂಡ್ ಸ್ಕ್ರೀನ್ ಅನ್ನು ಕೂಡ ಹೊಂದಿದೆ. ಹಾಗೆಯೇ ಆಫ್ ರೋಡ್ ನಲ್ಲಿಯು ಕೂಡ ಇದು ಸರಳವಾಗಿ ಚಲಿಸಬಲ್ಲದು.

ಆಟೋ ಎಕ್ಸ್‌ಪೋ 2018: ಅನಾವರಣಗೊಂಡ ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್

ಎಂಜಿನ್ ಸಾಮರ್ಥ್ಯ

ಸ್ಟ್ರೋಮ್ 125 ಸ್ಕೂಟಾರ್ 124 ಸಿಸಿ ತ್ರಿ ವಾಲ್ವ್ ಸಿಂಗಲ್ ಸಿಲೆಂಡರ್ ಹೊಂದಿದ್ದು, 9.46 ಬಿಹೆಚ್‌ಪಿ ಮತ್ತು 8.2 ಎನ್ಎಂ ಟಾರ್ಕ್ ಉತ್ಪಾದಿಸುವುದಲ್ಲದೇ ಸಿವಿಟಿ ಗೇರ್ ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಹಾಗೆಯೇ ಸ್ಟ್ರೋಮ್ ಸ್ಕೂಟರ್ 6.5 ಲೀಟರ್ ಫ್ಯುಯಲ್ ಟ್ಯಾಂಕ್‌ನ್ನು ಕೂಡ ಹೊಂದಿದೆ.

ಆಟೋ ಎಕ್ಸ್‌ಪೋ 2018: ಅನಾವರಣಗೊಂಡ ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್

ಸ್ಟ್ರೋಮ್ 125 ಸ್ಕೂಟಾರ್ ಮುಂಭಾಗದಲ್ಲಿ 30 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ರೇರ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದ್ದು, ನೋಡಲು ಸಖತ್ ಗ್ಲ್ಯಾಮರಸ್ ಆಗಿದೆ.

ಆಟೋ ಎಕ್ಸ್‌ಪೋ 2018: ಅನಾವರಣಗೊಂಡ ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್

ಸ್ಟ್ರೋಮ್ 125 ಸ್ಕೂಟರ್ ತನ್ನ ಹೊಸ ಗ್ರಾಫಿಕ್ ಮತ್ತು ಹೊಸ ಪೇಂಟ್ ಸ್ಕೀಮ್ ನಿಂದ ಯುವಜನತೆಯನ್ನು ತನ್ನತ್ತ ಸೆಳೆಯುವ ನಿರೀಕ್ಷೆಯಲ್ಲಿದ್ದು, 2018 ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲು ಎಪ್ರಿಲಿಯಾ ಯೋಜಿಸಿದೆ.

ಆಟೋ ಎಕ್ಸ್‌ಪೋ 2018: ಅನಾವರಣಗೊಂಡ ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್

ಇನ್ನು ಹೊಸ ಸ್ಕೂಟರಿನ ಬೆಲೆಯನ್ನು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 65ರಿಂದ 70 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಸ್ಕೂಟರ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿಸುವ ಎಲ್ಲಾ ಗುಣಲಕ್ಷಣ ಹೊಂದಿದೆ ಎನ್ನಬಹುದು.

Read more on aprilia auto expo 2018
English summary
Aprilia Storm 125 Unveiled - Expected Launch Date, Price, Features & Images.
Story first published: Tuesday, February 13, 2018, 18:40 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark