ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

By Praveen Sannamani

ಬೆಂಗಳೂರು ಮೂಲದ ಪ್ರತಿಷ್ಠಿತ ಅಥೆರ್ ಎನರ್ಜಿ ಸಂಸ್ಥೆಯು ತನ್ನ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‍ ಮಾದರಿಗಳಾದ 340 ಮತ್ತು 450 ಎನ್ನುವ ಎರಡು ವಿಭಿನ್ನ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಖರೀದಿಗೆ ಸಿದ್ದವಾಗಿರುವ ವಿನೂತನ ಸ್ಕೂಟರ್‌ಗಳ ವಿಶೇಷತೆಗಳ ಬಗ್ಗೆ ಚರ್ಚಿಸಲಾಗಿದೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಅಥೆರ್ ಎನರ್ಜಿ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಸ್ಕೂಟರ್ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಿದ್ದು, 340 ಸ್ಕೂಟರ್ ಬೆಲೆಯನ್ನು ಆನ್ ರೋಡ್ ಪ್ರಕಾರ ರೂ.1.09 ಲಕ್ಷಕ್ಕೆ ಮತ್ತು 450 ಸ್ಕೂಟರಿನ ಬೆಲೆಯನ್ನು ಆನ್ ರೋಡ್ ಪ್ರಕಾರ ರೂ.1.24 ಲಕ್ಷಕ್ಕೆ ನಿಗದಿ ಮಾಡುವ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಅಥೆರ್ ಎನರ್ಜಿ ಸಂಸ್ಥೆಯು ಬಿಡುಗಡೆ ಮಾಡಿರುವ 340 ಮತ್ತು 450 ಎಲೆಕ್ಟ್ರಿಕ್ ಸ್ಕೂಟರ್ ನೋಡಲು ಒಂದೇ ರೀತಿಯಲ್ಲಿದ್ದರೂ ತಾಂತ್ರಿಕ ವಿಚಾರವಾಗಿ ವಿಭಿನ್ನತೆ ಹೊಂದಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ರೂಸ್‌ಲೆಸ್ ಡಿಸಿ ಮೋಟಾರ್(ಬಿಎಲ್‌ಡಿಸಿ) ಬಳಕೆ ಮಾಡಿರುವುದು ಸ್ಕೂಟರ್‌ಗಳ ಮೌಲ್ಯವನ್ನು ಹೆಚ್ಚಿಸಿವೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಹೊಸ ಸ್ಕೂಟರ್‌ಗಳಲ್ಲಿ ಜೋಡಿಸಲಾಗಿರುವ ಬ್ಯಾಟರಿ ಮ್ಯಾನೆಜ್‌ಮೆಂಟ್ ಸಿಸ್ಟಂ ಮೇಲೆ ಬರೋಬ್ಬರಿ 3 ವರ್ಷಗಳ ವಾರಂಟಿ ಸಹ ನೀಡಲಾಗಿದ್ದು, ಎಂಜಿನ್ ಪರ್ಫಾಮೆನ್ಸ್ ವಿಚಾರ ಬಂದಲ್ಲಿ 180 ಸಿಸಿ ಬೈಕ್ ಮಾದರಿಯಲ್ಲೇ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಹ ರೈಡಿಂಗ್ ಅನುಭವ ನೀಡಲಿವೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಸ್ಕೂಟರ್ ಪರ್ಫಾಮೆನ್ಸ್

ಅಥೆರ್ 340 ಎಲೆಕ್ಟ್ರಿಕ್ ಸ್ಕೂಟರ್‌ಗಳು 20ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ, 450 ಸ್ಕೂಟರ್ ಮಾದರಿಗಳು 20.5-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. ಜೊತೆಗೆ ಗಂಟೆಗೆ 70 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ 340 ಸ್ಕೂಟರ್‌ಗಳು ಕೇವಲ 5.1 ಸೇಕೆಂಡುಗಳಲ್ಲಿ 40 ಕಿ.ಮಿ ವೇಗ ಪಡೆದುಕೊಂಡರೇ, 450 ಸ್ಕೂಟರ್‌ಗಳು 3.9 ಸೇಕೆಂಡುಗಳಲ್ಲಿ 40 ಕಿ.ಮಿ ವೇಗದಲ್ಲಿ ಚಲಿಸಬಲ್ಲವು.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಬ್ಯಾಟರಿ ಸಾಮರ್ಥ್ಯ

ಒಂದು ಬಾರಿ ಪೂರ್ಣಪ್ರಮಾಣ ಬ್ಯಾಟರಿ ಚಾರ್ಜ್ ಮಾಡಿದಲ್ಲಿ 340 ಸ್ಕೂಟರ್‌ಗಳು 60 ಕಿ.ಮೀ ಮೈಲೇಜ್ ನೀಡಿದಲ್ಲಿ, 450 ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 75 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಇನ್‌ಬಿಲ್ಟ್ ರಿವರ್ಸ್ ಅಸಿಸ್ಟ್ ಫಿಚರ್ಸ್ ನೀಡಲಾಗಿದ್ದು, ಹಿಮ್ಮುಖವಾಗಿ ಪ್ರತಿ ಗಂಟೆಗೆ 5 ಕಿ.ಮಿ ವೇಗದಲ್ಲಿ ಚಲಿಸುವ ಗುಣವಿಶೇಷತೆ ಹೊಂದಿದೆ. ಇದು ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ಸ್ಕೂಟರ್‌ಗಳನ್ನು ಹೊರತೆಗೆಯಲು ಹೆಚ್ಚು ಅನುಕೂಲಕರವಾಗಲಿದೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಬೈಕಿನ ಹೊರ ವೈಶಿಷ್ಟ್ಯತೆಗಳು

ಅಥೆರ್ 340 ಮತ್ತು 450 ಸ್ಕೂಟರ್‌ಗಳಲ್ಲಿ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ನ್ಯಾವಿಗೆಷನ್, ಸ್ಮಾರ್ಟ್ ಫೋನ್ ಮೂಲಕ ನಿಯಂತ್ರಣ ಮಾಡಬಹುದಾದ ಪಾರ್ಕಿಂಗ್ ಅಸಿಸ್ಟ್, ಚಾರ್ಜಿಂಗ್ ಪಾಯಿಂಟ್ ಟ್ರ್ಯಾಕರ್ ಸೌಲಭ್ಯ ಸಹ ಇದರಲ್ಲಿದೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಈ ಹೊಸ ಸ್ಕೂಟರ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕೆಲವು ವಿಶೇಷ ಸೌಲಭ್ಯಗಳು ಸಹ ದೊರೆಯಿದ್ದು, ಮನೆ ಅಂಗಳದಲ್ಲಿ ಉಚಿತವಾಗಿ ಚಾರ್ಜಿಂಗ್ ಪಾಯಿಂಟ್ ಮತ್ತು ಸ್ಮಾರ್ಟ್ ಕನೆಕ್ಟಿವಿಟಿ ಮೂಲಕವೇ ಸ್ಕೂಟರಿನಲ್ಲಿ ಕಂಡುಬರುವ ತಾಂತ್ರಿಕ ಸಮಸ್ಯೆಗಳನ್ನು ತಿಳಿದುಕೊಂಡು ಸಮಸ್ಯೆ ಬಗೆಹರಿಸಲಾಗುತ್ತದೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಇದಲ್ಲದೇ ಅಥೆರ್ 340 ಮತ್ತು 450 ಖರೀದಿ ಮಾಡುವ ಗ್ರಾಹಕರಿಗೆ ಅನುಕೂಲಕರವಾಗುವಂತೆ ಬೆಂಗಳೂರಿನ 30 ಕಡೆಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲಾಗಿದ್ದು, ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಒಂದು ಗಂಟೆ ಕಾಲ ಚಾರ್ಜಿಂಗ್ ಮಾಡಿದಲ್ಲಿ ಕನಿಷ್ಠ 50 ಕಿ.ಮೀ ಮೈಲೇಜ್ ದೊರೆಯಲಿದೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಬ್ರೇಕಿಂಗ್ ಸಿಸ್ಟಂ

ಅಥೆರ್ ಸ್ಕೂಟರ್‌ಗಳಲ್ಲಿನ ಸುರಕ್ಷೆತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎರಡು ಸ್ಕೂಟರ್‌ಗಳಲ್ಲೂ ಮುಂಭಾಗದ ಹಾಗೂ ಹಿಂಭಾಗದ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯ ಒಗದಿಸಿದೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಮತ್ತೊಂದು ಗಮನಾರ್ಹ ಸಂಗತಿಯೆಂದರೆ. ಅಥೆರ್ 340 ಮತ್ತು 450 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊಬೈಲ್ ಫೋನ್ ಮುಖಾಂತರವೇ ಬುಕ್ಕಿಂಗ್ ಮಾಡಬಹುದಾಗಿದ್ದು, ಹೊಸ ಸ್ಕೂಟರ್ ಒದಗಿಸುವ ಮುನ್ನವೇ ಚಾರ್ಜಿಂಗ್ ಪಾಯಿಂಟ್ ಸೆಟಪ್ ಸಿದ್ದಪಡಿಸಿಕೊಡಲಾಗುತ್ತದೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಇನ್ನು ಅಥೆರ್ ಎನರ್ಜಿ ಸಂಸ್ಥೆಯು ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ ಸ್ಕೂಟರ್‌ಗಳು ಸದ್ಯ ಬೆಂಗಳೂರಿನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಮುಂದಿನ ಎರಡು ತಿಂಗಳ ಅವಧಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿಯೂ ಸಹ ಹೊಸ ಬೈಕ್‌ಗಳು ಖರೀದಿಗೆ ಲಭ್ಯವಿರಲಿವೆ ಎಂದು ಅಥೆರ್ ಎನರ್ಜಿ ಸಂಸ್ಥೆ ಮಾಹಿತಿ ನೀಡಿದೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪರಿಸರಕ್ಕೆ ಪೂರಕವಾಗಿ ಇವಿ ವಾಹನಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಈ ಹಿನ್ನೆಲೆ ಅಥೆರ್ ಎನರ್ಜಿ ಸಂಸ್ಥೆ ಬಿಡುಗಡೆ ಮಾಡಿರುವ ಈ ಹೊಸ ಸ್ಕೂಟರ್‌ಗಳು ಅತ್ಯುತ್ತಮ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಹೀಗಾಗಿ ಗ್ರಾಹಕರ ಸ್ನೇಹಿಯಾಗಿರುವ ಅಥೆರ್ 340 ಮತ್ತು 450 ಎಲೆಕ್ಟ್ರಿಕ್ ಸ್ಕೂಟರ್‌ಗಳು ಖರೀದಿಗೆ ಉತ್ತಮವಾಗಿದ್ದು, ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುತ್ತಿರುವ ಅಥೆರ್ ಎನರ್ಜಿ ಸಂಸ್ಥೆಯ ಹೊಸ ಟ್ರೆಂಡ್ ಸೃಷ್ಠಿಸುವ ತವಕದಲ್ಲಿದೆ.

ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಸೇನಾ ಟ್ರಕ್‌ಗೆ ಡಿಕ್ಕಿ ಹೊಡೆದ ನಿಸ್ಸಾನ್ ಮೈಕ್ರಾ- ಸ್ಥಳದಲ್ಲೇ ಐವರು ದುರ್ಮರಣ

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಚಿಲ್ಲರೆ ಕೊಟ್ಟದ್ದು ತಡವಾಯಿತು ಎಂದು ಈತ ಮಾಡಿದ ಕೆಲಸ ಏನು ಗೊತ್ತಾ..??

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

More from DriveSpark

Article Published On: Thursday, June 7, 2018, 11:18 [IST]
English summary
Ather S340 & S450 launched; 10 things you don’t know about India’s MOST expensive electric scooters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+