ಜೂನ್ 5ಕ್ಕೆ ಬಿಡುಗಡೆಯಾಗಲಿದೆ ದೇಶದ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್
ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳಿಗಾಗಿ ಬೇಡಿಕೆ ಹೆಚ್ಚುತ್ತಿದ್ದು, ಬೆಂಗಳೂರು ಮೂಲದ ಪ್ರತಿಷ್ಠಿತ ಅಥೆರ್ ಎನರ್ಜಿ ಸಂಸ್ಥೆಯು ತನ್ನ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಎಸ್340 ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳಿಗಾಗಿ ಬೇಡಿಕೆ ಹೆಚ್ಚುತ್ತಿದ್ದು, ಬೆಂಗಳೂರು ಮೂಲದ ಪ್ರತಿಷ್ಠಿತ ಅಥೆರ್ ಎನರ್ಜಿ ಸಂಸ್ಥೆಯು ತನ್ನ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಎಸ್340 ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಅಥೆರ್ ಎನರ್ಜಿ ಸಂಸ್ಥೆಯು ಕಳೆದ ಎರಡು ವರ್ಷಗಳ ಹಿಂದೆಯೇ ತಮ್ಮ ಎಸ್340 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರದರ್ಶನಗೊಳಿಸಿತ್ತು. ಇದೀಗ ಅದೇ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಇದೇ ತಿಂಗಳು 5ರಂದು ಹೊಸ ಸ್ಕೂಟರ್‌ಗಳು ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ.

ಹತ್ತಾರು ಹೊಸ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಸ್340 ಸ್ಮಾರ್ಟ್ ಸ್ಕೂಟರ್‌ಗಳು ಟಚ್ ಸ್ಕ್ರೀನ್ ಡ್ಯಾಶ್ ಬೋರ್ಡ್, ರಿಮೋಟ್ ಅಪ್ಲಿಕೇ,ನ್ ಕಂಟ್ರೋಲ್, ನೇವಿಗೇಷನ್ ಸಿಸ್ಟಂ, ಲೈಟ್ ಸೆನ್ಸಿಂಗ್ ಹೆಡ್ ಲ್ಯಾಂಪ್ ಮುಂತಾದ ಸ್ಮಾರ್ಟ್ ಸೌಲಭ್ಯಗಳನ್ನು ಹೊಂದಿರಲಿದೆ.

ಜೊತೆಗೆ ಎಸ್340 ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಸ್ಮಾರ್ಟ್‍ಫೋನ್ ಕನೆಕ್ಟಿವಿಟಿ, ಪಾರ್ಕಿಂಗ್ ಅಸಿಸ್ಟ್, 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ವೆಹಿಕಲ್ ಚಾರ್ಜಿಂಗ್ ಪಾಯಿಂಟ್ ಟ್ರ್ಯಾಕರ್, ಎಲ್ಇಡಿ ಲೈಟಿಂಗ್ಸ್, ಸಿಬಿಎಸ್ ಮತ್ತು ಸೀಟ್ ಸ್ಟೊರೇಜ್ ಲೈಟ್ ವಿನ್ಯಾಸ ಪಡೆದಿದೆ.

ಬ್ಯಾಟರಿ ಸಾಮರ್ಥ್ಯ
ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಅಥೆರ್ ಎಸ್340, ಕೇವಲ 50 ನಿಮಿಷಗಳಲ್ಲೇ ಶೇಕಡಾ 80ರಷ್ಟು ಚಾರ್ಜ್ ಮಾಡಿಸಬಹುದಾಗಿದೆ. ಅಲ್ಲದೆ ಸಂಪೂರ್ಣ ಜಾರ್ಜ್ ಮಾಡಿಸಿದಾಗ ಗಂಟೆಗೆ 72 ಕೀ.ಮೀ. ವೇಗದಲ್ಲಿ 60 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸಬಹುದಾಗಿದೆ. ಅಂತೆಯೇ ಸಾಮಾನ್ಯ 5ಎ ಸಾಕೆಟ್ ನಿಂದಲೂ ಚಾರ್ಜ್ ಮಾಡಿಸಬಹುದಾಗಿದೆ.

ಇನ್ನು ಇದರಲ್ಲಿ ಬಳಸಲಾಗಿರುವ ಫಾಸ್ಟ್ ಚಾರ್ಜರ್‍ಗಳು ಅತಿ ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಪಡೆದುಕೊಳ್ಳುವ ಗುಣಹೊಂದಿದ್ದು, ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಅನಕೂಲವಾಗುವಂತೆ ಅಥೆರ್ ಎನರ್ಜಿ ಸಂಸ್ಥೆಯು ಬೆಂಗಳೂರಿನ ವಿವಿಧಡೆ ಅಗತ್ಯ ಚಾರ್ಜಿಂಗ್ ಪಾಯಿಂಟ್‍ಗಳನ್ನು ಸಹ ತೆರೆಯಲಿದೆ.

ಇದಕ್ಕಾಗಿಯೇ ಅಥೆರ್ ಸಂಸ್ಥೆಯು ಬೆಂಗಳೂರಿನ ಇಂದಿರಾನಗರದಲ್ಲಿ ಗ್ರಾಹಕರ ಅನುಭವ ಕೇಂದ್ರವನ್ನು ಕೂಡಾ ತೆರೆಯಲಿದ್ದು, ಆಸಕ್ತ ಗ್ರಾಹಕರು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಮುನ್ನ ಟೆಸ್ಟ್ ರೈಡ್ ಮಾಡಬಹುದಾಗಿದೆ.

ಎಂಜಿನ್ ಪರ್ಫಾಮೆನ್ಸ್
ಸ್ಮಾರ್ಟ್ ಕನೆಕ್ಟಿವಿಟಿ ಸೌಲಭ್ಯ ಹೊಂದಿರುವ ಎಸ್340 ಎಲೆಕ್ಟ್ರಿಕ್ ಸ್ಕೂಟರ್‌ಗಳು 14-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, 200-ಸಿಸಿ ಬೈಕ್ ಮಾದರಿಗಳಿಗೆ ಸಮನಾಗಿ ವೇಗ ಪಡೆಯಬಲ್ಲವು.

ಸ್ಕೂಟರ್ ಬೆಲೆಗಳು (ಅಂದಾಜು)
ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ. 1.10 ಲಕ್ಷದಿಂದ 1.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಐಷಾರಾಮಿ ವೈಶಿಷ್ಟ್ಯತೆಗಳಿಂದಾಗಿಯೇ ಈ ಸ್ಕೂಟರ್ ಬೆಲೆ ಇತರೆ ಬೈಕ್ ಮಾದರಿಗಳಿಂತಲೂ ದುಬಾರಿಯಾಗಿರುವ ಸಾಧ್ಯತೆಗಳಿವೆ.

ಆದರೂ ಬಿಡುಗಡೆಯ ದಿನದಂದು ಹೊಸ ಸ್ಕೂಟರಿನ ಬೆಲೆಗಳು ನಿಖರವಾಗಿ ಲಭ್ಯವಾಗಲಿದ್ದು, ಜೊತೆಗೆ ಸ್ಕೂಟರಿನಲ್ಲಿ ಅಳವಡಿಸಲಾಗಿರುವ ಮತ್ತಷ್ಟು ಹೊಸ ಸೌಲಭ್ಯಗಳ ಸಂಪೂರ್ಣ ಮಾಹಿತಿ ದೊರೆಯಲಿದೆ.

ಮತ್ತೊಂದು ಗಮನಾರ್ಹ ಸಂಗತಿಯೆಂದರೆ. ಅಥೆರ್ ಎಸ್340 ಎಲೆಕ್ಟ್ರಿಕ್ ಸ್ಕೂಟರನ್ನು ಮೊಬೈಲ್ ಫೋನ್ ಮುಖಾಂತರವೇ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದ್ದು, ಜೂನ್ 5ರಂದು ಬಿಡುಗಡೆಯಾಗಲಿರುವ ಈ ಹೊಸ ಸ್ಕೂಟರ್ ಮಾಹಿತಿಗಾಗಿ ತಪ್ಪದೇ ಡ್ರೈವ್‌ಸ್ಪಾರ್ಕ್ ಲಾಗಿನ್ ಆಗಿ...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್
5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..
ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!
ಚಿಲ್ಲರೆ ಕೊಟ್ಟದ್ದು ತಡವಾಯಿತು ಎಂದು ಈತ ಮಾಡಿದ ಕೆಲಸ ಏನು ಗೊತ್ತಾ..??


Click it and Unblock the Notifications