ಕೆಟಿಎಮ್ ಡ್ಯೂಕ್‍ 390 ಬೈಕ್‍‍ಗೆ ಪೈಪೋಟಿ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಇಟಾಲಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬೆನೆಲ್ಲಿ ತಮ್ಮ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಕ್ರಿಯೆಗೊಳಿಸಲು ಹೈದೆರಾಬಾದ್‍‍‍ನ ಮಹವೀರ್ ಗ್ರೂಪ್‍‍ನೊಂದಿಗೆ ಕೈ ಜೋಡಿಸಿದೆ. ಬೆನೆಲ್ಲಿ ಮತ್ತು ಮಹವೀರ್ ಗ್ರೂಪ್ ಸೇರಿ ದೇಶಿಯ ಮಾರುಕಟ್ಟೆಗೆ

By Rahul Ts

ಇಟಾಲಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬೆನೆಲ್ಲಿ ತಮ್ಮ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಕ್ರಿಯೆಗೊಳಿಸಲು ಹೈದೆರಾಬಾದ್‍‍‍ನ ಮಹವೀರ್ ಗ್ರೂಪ್‍‍ನೊಂದಿಗೆ ಕೈ ಜೋಡಿಸಿದೆ. ಬೆನೆಲ್ಲಿ ಮತ್ತು ಮಹವೀರ್ ಗ್ರೂಪ್ ಸೇರಿ ದೇಶಿಯ ಮಾರುಕಟ್ಟೆಗೆ ಹೊಸ ಬೈಕ್‍‍ಗಳನ್ನು ಪರಿಚಯಿಸುವ ಯೋಜನೆಯಲ್ಲಿದ್ದಾರೆ.

ಕೆಟಿಎಮ್ ಡ್ಯೂಕ್‍ 390 ಬೈಕ್‍‍ಗೆ ಪೈಪೋಟಿ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಇದೀಗ ಮಾಹಿತಿಗಳ ಪ್ರಕಾರ ಬೆನೆಲ್ಲಿ ಸಂಸ್ಥೆಯು ಕೆಟಿಎಮ್ ಡ್ಯೂಕ್ 390 ಬೈಕ್‍ಗೆ ಪೈಪೋಟಿಯಾಗಿ ಟಿಎನ್‍ಟಿ 302ಎಸ್ ಬೈಕ್ ಅನ್ನು ಬಿಡುಗದೆಗೊಳಿಸಲಿದೆ. ಈ ಬೈಕ್ ಪ್ರಸ್ತುತ ಮಾರಟದಲ್ಲಿರುವ ಬೆನೆಲ್ಲಿ ಟಿಎನ್‍ಟಿ 300 ಬೈಕ್‍‍ನ ಸ್ಥಾನವನ್ನು ಭರ್ತಿ ಮಾಡಲಿದ್ದು, ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ.

ಕೆಟಿಎಮ್ ಡ್ಯೂಕ್‍ 390 ಬೈಕ್‍‍ಗೆ ಪೈಪೋಟಿ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಬೆನೆಲ್ಲಿ ಟಿಎನ್‍‍‍‍ಟಿ ಆಧೂನಿಕ ವಿನ್ಯಾಸದ ಶೈಲಿಯನ್ನು ಹೊಂದಿದ್ದು, ಟಿಎನ್‍‍‍ತಿ 300 ಬೈಕ್‍‍ಗಿಂತಾ ಆಕರ್ಶಕವಾದ ಸ್ಪೋರ್ಟಿ ಲುಕ್ ಅನ್ನು ಪಡೆದುಕೊಂಡಿದೆ. ಬೈಕ್‍‍ನ ಮುಂಭಾಗದಲ್ಲಿ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ನೊಂದಿಗೆ ಎಲ್ಇಡಿ ಹೆಡ್‍‍ಲ್ಯಾಂಪ್ಸ್ ಅನ್ನು ಒದಗಿಸಲಾಗಿದೆ.

ಕೆಟಿಎಮ್ ಡ್ಯೂಕ್‍ 390 ಬೈಕ್‍‍ಗೆ ಪೈಪೋಟಿ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಆಕ್ರಮಣಕಾರಿ ವಿನ್ಯಾಸದಲ್ಲಿ ಕಾಣಲು ಬೆನೆಲ್ಲಿ 302ಎಸ್ ಬೈಕ್‍‍ನಲ್ಲಿ ಅಗ್ರೆಸಿವ್ ಶ್ರಾಡ್ಸ್ ನೊಂದಿಗೆ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿದ್ದು, ಎತ್ತರವಾದ ಸಂಗಲ್ ಪೀಸ್ ಸೀಟ್, ಮತ್ತು ಎಲ್ಇಡಿ ಟೈಲ್ ಲೈಟ್ ಹಾಗು ಅಗಲವಾದ ರಿಯರ್ ಟೈರ್ ಅನ್ನು ಪಡೆದುಕೊಂಡಿದೆ.

ಕೆಟಿಎಮ್ ಡ್ಯೂಕ್‍ 390 ಬೈಕ್‍‍ಗೆ ಪೈಪೋಟಿ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಬಿಡುಗಡೆಗೊಳ್ಳಲಿರುವ ಬೆನೆಲ್ಲಿಯ ನೇಕೆಡ್ ಮೋಟರ್‍‍ಸೈಕಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್‍‍ಲೈಟ್ ಮತ್ತು ಟೈಲ್ ಲೈಟ್, ಅಲ್ಯೂಮೀನಿಯಮ್ ಎಕ್ಸಾಸ್ಟ್ ಪ್ಲೆಟ್, ಸ್ಪ್ಲಿಟ್ ಗ್ರ್ಯಾಬ್ ರೈಲ್ಸ್ ಮತ್ತು ಅಲಾಯ್ ವ್ಹೀಲ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಬೆನೆಲ್ಲಿ ಟಿಎನ್‍‍ಟಿ 302ಎಸ್ ಬೈಕ್‍‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದ ಚಕ್ರಗಳಿಗೆ ಟ್ವಿನ್ ಪೆಟಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿರಲಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಕೆಟಿಎಮ್ ಡ್ಯೂಕ್‍ 390 ಬೈಕ್‍‍ಗೆ ಪೈಪೋಟಿ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಬೆನೆಲ್ಲಿ 302ಎಸ್ ಬೈಕ್ 300ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಸಹಯಾದಿಂದ 37.5 ಬಿಹೆಚ್‍‍ಪಿ ಮತ್ತು 25.6 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. 16 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಮತ್ತು 203 ಕಿಲೋಗ್ರಾಂ ತೂಕವನ್ನು ಹೊಂದಿರಲಿದೆ.

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬೆನೆಲ್ಲಿ ಮತ್ತು ಮಹವೀರ್ ಗ್ರೂಪ್ ಜೊತೆಗೂಡಿ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಬೈಕ್‍‍ಗಳನ್ನು ಬಿಡುಗಡೆಗೊಳಿಸುವ ಯೋಜನೆಯಲಿದೆ. ಬೆನೆಲ್ಲಿ 302ಎಸ್ ಶೀಘ್ರವೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದ್ದು, ಮಾರುಕಟ್ಟೆಯಲ್ಲಿನ ಬಿಎಮ್‍ಡಬ್ಲ್ಯೂ ಜಿ 310 ಆರ್ ಮತ್ತು ಕೆಟಿಎಮ್ ಡ್ಯೂಕ್ 390 ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on benelli ktm
English summary
Benelli TNT 302S India Launch Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X