ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟವನ್ನ ಮತ್ತೆ ಆರಂಭಿಸಿದ ಹೀರೋ

By Praveen Sannamani

ಹೀರೋ ಮೋಟೋಕಾರ್ಪ್ ಸಂಸ್ಥೆಯು ಸದ್ಯ ಜಗತ್ತಿನಲ್ಲಿ ಅತಿ ಹೆಚ್ಚು ಬೈಕ್ ಮಾರಾಟ ಮಾಡುವ ಸಂಸ್ಥೆಗಳ ಪೈಕಿ ಟಾಪ್ 10ರ ಪಟ್ಟಿಯಲ್ಲಿದ್ದು, ಕಮ್ಯೂಟರ್ ಬೈಕ್ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೆಯೇ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟದಲ್ಲೂ ಭಾರೀ ವಹಿವಾಟು ಹೊಂದಿರುವ ಹೀರೋ ಸಂಸ್ಥೆಯು ತನ್ನ ಹಳೆಯ ವ್ಯವಹಾರಕ್ಕೆ ಇದೀಗ ಮರುಜೀವ ನೀಡಿದೆ.

ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟವನ್ನ ಮತ್ತೆ ಆರಂಭಿಸಿದ ಹೀರೋ

ಹೌದು, ಹೀರೋ ಸಂಸ್ಥೆಯು ಈ ಹಿಂದೆಯೇ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ್ದಲ್ಲದೇ ಭಾರೀ ಪ್ರಮಾಣದ ವಹಿವಾಟು ಸಡೆಸುತ್ತಿತ್ತು. ಆದ್ರೆ ತೆರಿಗೆ ಪಾವತಿ ಸಂಬಂಧಿ ಸಮಸ್ಯೆಗಳಿಂದಾಗಿ ತನ್ನ ಬಹುಕೋಟಿ ವ್ಯವಹಾರಕ್ಕೆ ತಾತ್ಕಲಿಕವಾಗಿ ತಡೆ ನೀಡಿತ್ತು. ಆದ್ರೆ ಇದೀಗ ಏಕರೂಪದ ತೆರಿಗೆ ನೀತಿ(ಜಿಎಸ್‌ಟಿ) ಜಾರಿ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ಸಮಸ್ಯೆಗಳು ಇತ್ಯರ್ಥವಾಗಿದ್ದು, 'ಹೀರೋ ಶ್ಯೂರ್' ಮೂಲಕ ನೀವು ಬಳಕೆ ಮಾಡಿದ ಬೈಕ್‌ಗಳನ್ನು ವಾರಂಟಿಯೊಂದಿಗೆ ಖರೀದಿ ಮಾಡಬಹುದು.

ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟವನ್ನ ಮತ್ತೆ ಆರಂಭಿಸಿದ ಹೀರೋ

ಹೀರೋ ಡೀಲರ್ಸ್‌ಗಳಲ್ಲಿ ಗ್ರಾಹಕರು ಹೊಸ ಬೈಕ್ ಖರೀದಿಸುವಾಗ ಎಕ್ಸ್‌ಚೆಂಜ್ ಆಫರ್ ಸಹ ದೊರಲಿದ್ದು, ಬೈಕಿನ ಸ್ಥಿತಿಗತಿ ಆಧಾರ ಮೇಲೆ ಬೆಲೆ ನಿರ್ಧರಿಸಲಿದೆ. ಜೊತೆಗೆ ಅದೇ ಬೈಕ್ ಅನ್ನು ಮತ್ತಷ್ಟು ಮಾರ್ಪಾಡುಗೊಳಿಸಿ ಮರು ಮಾರಾಟ ಮಾಡುವ ಹೀರೋ ಸಂಸ್ಥೆಯು ಎರಡು ಕಡೆಯಿಂದಲೂ ಲಾಭ ಗಳಿಕೆ ಮಾಡಲಿದೆ.

ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟವನ್ನ ಮತ್ತೆ ಆರಂಭಿಸಿದ ಹೀರೋ

ದೇಶದ ಬಹುತೇಕ ಕಾರು ಡೀಲರ್ಸ್‌ಗಳ ಬಳಿ ಈ ಸೌಲಭ್ಯವಿದ್ದು, ಹೀರೋ ಸಂಸ್ಥೆಯು 2016ರಿಂದ ಈ ಹೊಸ ವಹಿವಾಟಿಗೆ ಚಾಲನೆ ನೀಡಿತ್ತು. ಆರಂಭವಾದ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದ ವಹಿವಾಟು ನಡೆಸಿದ್ದ ಹೀರೋ ಸಂಸ್ಥೆಯು ತದನಂತರ ತೆರಿಗೆ ಪಾವತಿಸುವ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿತ್ತು.

ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟವನ್ನ ಮತ್ತೆ ಆರಂಭಿಸಿದ ಹೀರೋ

ಆದ್ರೆ ಕಳೆದ ವರ್ಷ ಹೊಸದಾಗಿ ಆರಂಭಗೊಂಡ ಜಿಎಸ್‌ಟಿ ಪದ್ದತಿಯಿಂದ ಹೀರೋ ಸಂಸ್ಥೆಯು ತನ್ನ ಹಳೆಯ ವಹಿವಾಟಿಗೆ ಮತ್ತೆ ಚಾಲನೆ ನೀಡಿದ್ದು, ಮೊದಲ ಹಂತವಾಗಿ ಗುಜರಾತ್ ಮತ್ತು ತಮಿಳುನಾಡಿನ 100 ಬೈಕ್ ಡೀಲರ್ಸ್‌ಗಳಲ್ಲಿ ಈ ಹೊಸ ವ್ಯವಹಾರಕ್ಕೆ ಚಾಲನೆ ಕೊಡಲಾಗಿದೆ.

ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟವನ್ನ ಮತ್ತೆ ಆರಂಭಿಸಿದ ಹೀರೋ

ತದನಂತರವಷ್ಟೇ ಗ್ರಾಹಕರ ಪ್ರತಿಕ್ರಿಯೆಯ ಆಧಾರ ಮೇಲೆ ದೇಶಾದ್ಯಂತ ನೆಲೆಗೊಂಡಿರುವ 6,500 ಹೀರೋ ಡೀಲರ್ಸ್‌ಗಳಲ್ಲಿ 'ಹೀರೋ ಶ್ಯೂರ್' ಸೇವೆಗಳು ಆರಂಭವಾಗಲಿದ್ದು, ಹೀರೋ ಸಂಸ್ಥೆಯಿಂದಲೇ ಮಾನ್ಯತೆ ಹೊಂದಿರುವ ಸೆಕೆಂಡ್ ಹ್ಯಾಂಡ್ ಬೈಕ್‌ಗಳನ್ನು ಕೈಗೆಟುಕುವ ಬೆಲೆಗಳಲ್ಲಿ ಖರೀದಿಗೆ ಇದು ಸಹಕಾರಿಯಾಗಲಿದೆ.

ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟವನ್ನ ಮತ್ತೆ ಆರಂಭಿಸಿದ ಹೀರೋ

ಜೊತೆಗೆ ಹೀರೋ ಶ್ಯೂರ್‌ನಲ್ಲಿ ಖರೀದಿಸಲಾದ ಸೆಕೆಂಡ್ ಹ್ಯಾಂಡ್ ಬೈಕ್‌ಗಳಿಗೆ ನೀರ್ದಿಷ್ಟ ಅವಧಿಯ ವಾರಂಟಿ ಸಹ ದೊರೆಯಲಿದ್ದು, ಗುಣಮಟ್ಟದ ಬಿಡಿಭಾಗಗಳ ಸೇವೆಯು ಸಹ ದೊರೆಯಲಿದೆ. ಜೊತೆಗೆ ಮಾನ್ಯತೆ ಹೊಂದಿರುವ ಸಂಸ್ಥೆಯಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವುದರಿಂದ ಮೋಸ ಹೋಗುವುದು ತಪ್ಪಲಿದೆ.

ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟವನ್ನ ಮತ್ತೆ ಆರಂಭಿಸಿದ ಹೀರೋ

ನಿಮಗೆಲ್ಲಾ ಗೊತ್ತಿರುವ ಹಾಗೆ, ಅಗ್ಗದ ಬೆಲೆಗೆ ಸೆಕೆಂಡ್ ಹ್ಯಾಂಡ್ ಬೈಕ್‌ಗಳನ್ನ ಮಾರಾಟ ಮಾಡುವ ಖದೀಮರು ಅಮಾಯಕರನ್ನ ವಂಚಿಸುವ ಸಾಧ್ಯತೆಗಳಿದ್ದು, ಮ್ಯಾನತೆ ಹೊಂದಿದ ಸಂಸ್ಥೆಗಳಿಂದ ಬಳಸಿದ ವಾಹನಗಳನ್ನು ಖರೀದಿಸಿದ್ದಲ್ಲಿ ಇಂತಹ ತೊಂದರೆಗಳು ಕಡಿಮೆ ಎನ್ನಬಹುದು.

ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟವನ್ನ ಮತ್ತೆ ಆರಂಭಿಸಿದ ಹೀರೋ

ಒಟ್ಟಿನಲ್ಲಿ ಹೊಸ ಬೈಕ್ ಮಾರಾಟದಲ್ಲಿ ಮಾತ್ರವಲ್ಲದೇ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟದಲ್ಲೂ ಹೊಸ ಹೊಸ ಯೋಜನೆ ರೂಪಿಸುತ್ತಿರುವ ಹೀರೋ ಸಂಸ್ಥೆಯು ಮುಖ್ಯವಾಗಿ ಮಧ್ಯಮ ವರ್ಗಗಳನ್ನು ಸೆಳೆಯುವತ್ತ ಹೆಚ್ಚು ಗಮನಹರಿಸುತ್ತೆ. ಹೀಗಾಗಿ ದೇಶದಲ್ಲಿ ಮಾರಾಟವಾಗುವ ಟಾಪ್ 10ರ ಬೈಕ್ ಮಾರಾಟ ಪಟ್ಟಿಯಲ್ಲಿ 4 ಬೈಕ್‌ಗಳು ಹೀರೋ ನಿರ್ಮಾಣದ ಬೈಕ್‌ಗಳು ಇವೇ ಅಂದ್ರೆ ನೀವು ನಂಬಲೇಬೇಕು.

ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟವನ್ನ ಮತ್ತೆ ಆರಂಭಿಸಿದ ಹೀರೋ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿಯವರ ಈ ವಿಡಿಯೋ ವೈರಲ್ ಆಗಿದ್ದು ಯಾಕೆ ಗೊತ್ತಾ..?

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

ಅಟಲ್ ಜೀ ಅವರು ಅಂಬಾಸಿಡರ್ ಬಿಟ್ಟು ಬಿಎಂಡಬ್ಲ್ಯು 7 ಸೀರಿಸ್ ಕಾರು ಏರಿದ್ದೇಕೆ ಗೊತ್ತಾ?

ಪ್ರವಾಹ ಪೀಡಿತ ಕೇರಳಕ್ಕೆ ಸಹಾಯ ಹಸ್ತ ಚಾಚಿದ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

Most Read Articles

Kannada
Read more on hero motocorp auto news
English summary
Hero MotoCorp Re-Enters Used Two-Wheeler Business With Hero Sure.
Story first published: Thursday, August 23, 2018, 19:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X