ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನಾವರಣಗೊಳಿಸಿದ ಹೀರೋ

Written By:
Recommended Video - Watch Now!
Ducati 959 Panigale Crashes Into Buffalo - DriveSpark

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಯುವ ಸಮುದಾಯವನ್ನು ಸೆಳೆಯುವ ಉದ್ದೇಶಕ್ಕಾಗಿ 200 ಸಿಸಿ ಸಾಮರ್ಥ್ಯದ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಅದಕ್ಕೂ ಮುನ್ನ ಹೊಸ ಬೈಕಿನ ಎಂಜಿನ್ ವೈಶಿಷ್ಟ್ಯತೆಗಳು ಮತ್ತು ಹೊಸ ಬೈಕಿನ ವಿನ್ಯಾಸಗಳ ಬಗ್ಗೆ ಕುರಿತಾದ ಎಕ್ಸ್‌ಕ್ಲೂಸಿವ್ ಮಾಹಿತಿಗಳನ್ನು ಬಹಿರಂಗ ಮಾಡಿದೆ.

ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನಾವರಣಗೊಳಿಸಿದ ಹೀರೋ

ಫೆಬ್ರುವರಿ 7ರಿಂದ ದೆಹಲಿ ಆಟೋ ಎಕ್ಸ್ ಪೋ ಆರಂಭಗೊಳ್ಳಲಿದ್ದು, ಆಟೋ ಮೇಳದಲ್ಲಿ ತನ್ನ ಹೊಸ ಬೈಕ್ ಉತ್ಪನ್ನವನ್ನು ಬಿಡುಗಡೆ ಮಾಡುತ್ತಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಇದಕ್ಕೆ ಪೂರಕವಾಗಿ ಎಕ್ಸ್‌ಟ್ರಿಮ್ 200ಆರ್ ಬೈಕಿನ ಬಗ್ಗೆ ಮಾಹಿತಿಗಳನ್ನು ಹೊರಹಾಕಿದೆ.

ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನಾವರಣಗೊಳಿಸಿದ ಹೀರೋ

ಎಕ್ಸ್‌ಟ್ರಿಮ್ 200ಆರ್ ಕುರಿತಾದ ಎಂಜಿನ್ ಮಾಹಿತಿ, ವಿನ್ಯಾಸಗಳು ಮತ್ತು ಲಭ್ಯವಿರುವ ಬಣ್ಣಗಳ ಕುರಿತು ಮಾಹಿತಿ ಹಂಚಿಕೊಂಡಿರುವ ಹೀರೋ ಸಂಸ್ಥೆಯು ಆಟೋ ಎಕ್ಸ್ ಪೋದಲ್ಲಿಯೇ ಹೊಸ ಬೈಕಿನ ಬೆಲೆಗಳನ್ನು ಬಹಿರಂಗ ಮಾಡಲಿದೆ.

ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನಾವರಣಗೊಳಿಸಿದ ಹೀರೋ

ಹೀಗಾಗಿ ಹೊಸ ಬೈಕ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, 200 ಸಿಸಿ ಯಿಂದ 300 ಸಿಸಿ ಸಾಮರ್ಥ್ಯದ ಬೈಕ್ ಮಾದರಿಗಳನ್ನು ಖರೀದಿಗೆ ಮುಂದಾಗುವ ಗ್ರಾಹಕರಿಗೆ ಎಕ್ಸ್‌ಟ್ರಿಮ್ 200ಆರ್ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನಾವರಣಗೊಳಿಸಿದ ಹೀರೋ

ಎಂಜಿನ್ ಸಾಮರ್ಥ್ಯ

200 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಗಳು 18.1-ಬಿಎಚ್‌ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

Trending On DriveSpark Kannada:

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಮೈಲೇಜ್ ವಿಚಾರದಲ್ಲಿ ಸುಳ್ಳು ಜಾಹೀರಾತು- ಹೀರೋ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿ ಕಲಿಸಿದ ಬೆಂಗಳೂರು ಯುವಕ..!!

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನಾವರಣಗೊಳಿಸಿದ ಹೀರೋ

ಇದರೊಂದಿಗೆ ಡೈಮಂಡ್ ಫ್ರೇಮ್ ಚಾರ್ಸಿ ಡಿಸೈನ್ ಪಡೆದಿರುವ ಎಕ್ಸ್‌ಟ್ರಿಮ್ 200ಆರ್ ಮಾದರಿಗಳು 276ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 220ಎಂಎಂ ರಿರ್ ಡಿಸ್ಕ್ ಬ್ರೇಕ್, ಸಿಂಗಲ್ ಚಾನೆಲ್ ಎಬಿಎಸ್ ಟೆಕ್ನಾಲಜಿ ಜೋಡಣೆಯಿದೆ.

ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನಾವರಣಗೊಳಿಸಿದ ಹೀರೋ

ಹೀಗಾಗಿ ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, 17 ಇಂಚಿನ ಅಲಾಯ್ ಚಕ್ರಗಳು, ದೊಡ್ಡದಾದ ಹೆಡ್‌ಲ್ಯಾಂಪ್, ಮಸ್ಕ್ಯೂಲರ್ ಫ್ಯೂಲ್ ಟ್ಯಾಂಕ್ ಡಿಸೈನ್, ರಿರ್ ಪೆಂಡರ್, ಐದು ವಿವಿಧ ಬಣ್ಣಗಳ ಆಯ್ಕೆಯು ಹೊಸ ಬೈಕಿನ ಪ್ರಮುಖಾಂಶಗಳು.

ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನಾವರಣಗೊಳಿಸಿದ ಹೀರೋ

ಮೈಲೇಜ್ ಮತ್ತು ಬೆಲೆ(ಅಂದಾಜು)

ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಎಕ್ಸ್‌ಟ್ರಿಮ್ ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 40 ಕಿಮಿ ಮೈಲೇಜ್ ಹೊಂದಿದ್ದು, ಹೊಸ ಬೈಕಿನ ಬೆಲೆಯು 1.15 ರಿಂದ 1.25 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನಾವರಣಗೊಳಿಸಿದ ಹೀರೋ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಲವು ವಿಶೇಷತೆಗಳನ್ನು ಹೊತ್ತು ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು 200ಸಿಸಿಯಿಂದ 300ಸಿಸಿ ಸಾಮರ್ಥ್ಯದ ಬೈಕ್‌ಗಳ ಪ್ರಬಲ ಪ್ರತಿಸ್ಪರ್ಧಿಯಾಗಲಿದ್ದು, ಹೊಸ ಬೈಕಿನ ಮತ್ತಷ್ಟು ಮಾಹಿತಿಗಳು ಫೆ.7ರಂದು ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಲಭ್ಯವಾಗಲಿವೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Read more on hero motocorp
English summary
Hero Xtreme 200R Unveiled – An Extreme Revival.
Story first published: Tuesday, January 30, 2018, 15:16 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark