ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಡಿಯೋ ಡೀಲಕ್ಸ್ ಸ್ಕೂಟರಿನ ಟಾಪ್ ಫೀಚರ್‍‍ಗಳಿವು..

Written By: Rahul TS

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಈ ಹಿಂದೆಯೆ ತಮ್ಮ ಡಿಯೋ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿ ಮಾರುಕಟ್ಟೆಯಲ್ಲಿ ಯುವ ಸಮುದಾಯವನ್ನು ಹೆಚ್ಚಾಗಿ ಆಕರ್ಷಿಸಿತ್ತು. ಈ ನಿಟ್ಟಿನಲ್ಲಿ ಸಂಸ್ಥೆಯು ಹೊಸ ವಿನ್ಯಾಸ ಹಾಗು ವೈಶಿಷ್ಟ್ಯತೆಗಳೊಂದಿಗೆ ಮತ್ತೊಮ್ಮೆ ಡಿಯೋ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಡಿಯೋ ಡೀಲಕ್ಸ್ ಸ್ಕೂಟರಿನ ಟಾಪ್ ಫೀಚರ್‍‍ಗಳಿವು..

ಹೊಸದಾಗಿ ಬಿಡುಗಡೆಗೊಂದ ಹೋಂಡಾ ಡಿಯೋ ಸ್ಕೂಟರ್‍‍‍ಗಳು ಡಿಯೋ, ಡಿಯೋ ಎಸ್‍‍ಟಿಡಿ ಮತ್ತು ಡಿಯೋ ಡಿಎಲ್ಎಕ್ಸ್ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡಿದ್ದು, ದೆಹಲಯ ಎಕ್ಸ್ ಶೋರಂ ಪ್ರಾಕರ ರೂ 50.26 ಸಾವಿರದಿಂದ ಪ್ರಾರಂಭಿಕ ಬೆಲೆಯಲ್ಲಿ ಮಾರಾಟಗೊಳ್ಳುತ್ತಿದೆ.

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಡಿಯೋ ಡೀಲಕ್ಸ್ ಸ್ಕೂಟರಿನ ಟಾಪ್ ಫೀಚರ್‍‍ಗಳಿವು..

2018ರ ಡಿಯೋ ಸ್ಕೂಟರ್ 109ಸಿಸಿ ಎಂಜಿನ್ ಸಹಾಯದಿಂದ 8ಬಿಹೆಚ್‍ಪಿ ಮತ್ತು 8.91ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ವಿ-ಮೇಟ್ ಟ್ರ್ಯಾನ್ಸ್ ಮಿಶನ್‍‍ನೊಂದಿಗೆ ಜೋಡಿಸಲಾಗಿದೆ. ಹಾಗೆಯೆ ಪ್ರತೀ ಲೀಟರ್‍‍ಗೆ 83 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ.

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಡಿಯೋ ಡೀಲಕ್ಸ್ ಸ್ಕೂಟರಿನ ಟಾಪ್ ಫೀಚರ್‍‍ಗಳಿವು..

ಹೆಡ್‍‍ಲ್ಯಾಂಪ್

2018ರ ಡೀಯೋ ಸ್ಕೂಟರ್‍‍ನಲ್ಲಿ ಹೊಸದಾಗಿ ಸಂಸ್ಥೆಯ ವಿಶೇಶವಾದ ಎಲ್ಇಡಿ ಹೆಡ್‍‍ಲ್ಯಾಂಪ್ ಅನ್ನು ಅಳವಡಿಸಲಾಗಿದ್ದು, ಹಳೆಯ ಮಾದರಿಗಿಂಗ ಆಕರ್ಷಕವಾಗಿದೆ.

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಡಿಯೋ ಡೀಲಕ್ಸ್ ಸ್ಕೂಟರಿನ ಟಾಪ್ ಫೀಚರ್‍‍ಗಳಿವು..

ಇನ್ಸ್ಟ್ರೂಮೆಂಟ್ ಕ್ಲಸ್ಟರ್

ಹೊಸ ಡಿಯೋ ಸ್ಕೂಟರ್‍‍ನಲ್ಲಿ ವಿನೂತನವಾಗಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನು ಅಳವಡಿಸಲಾಗಿದೆ. ಇದು ವಾಹನ ಸವಾರಿಯ ವೇಳೆ ಸಹಾಯಕವಾಗುವ ಹಾಗೆ ಕಾರ್ಯನಿರ್ವಹಿಸುತಿದ್ದು, ಮೂರು ಹಂತದ ಇಕೊ ಎಂಡಿಕೇಟರ್ ಅನ್ನು ಪಡೆದುಕೊಂಡಿದೆ.

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಡಿಯೋ ಡೀಲಕ್ಸ್ ಸ್ಕೂಟರಿನ ಟಾಪ್ ಫೀಚರ್‍‍ಗಳಿವು..

ಟೈರ್‍‍ಗಳು

2018ರ ಹೊಸ ಡಿಯೋ ಡೀಲಕ್ಸ್ ಸ್ಕೂಟರ್‍‍ಗಳು 10 ಇಂಚಿನ ಗೋಲ್ಡ್ ರಿಮ್ಸ್ ಅನ್ನು ಮುಂಭಾದಲ್ಲಿ ಮತ್ತು ಹಿಂಭಾಗದಲ್ಲಿ ಅಳವಡಿಸಲಾಗಿದ್ದು, ಎರಡು ಕಡೆ ಸಿಬಿಎಸ್ ಹೊಂದಿರುವ 90/100-10 ಟ್ಯೂಬ್‍‍ಲೆಸ್ ಟೈರ್‍‍ಗಳನ್ನು ಪಡೆದುಕೊಂಡಿವೆ.

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಡಿಯೋ ಡೀಲಕ್ಸ್ ಸ್ಕೂಟರಿನ ಟಾಪ್ ಫೀಚರ್‍‍ಗಳಿವು..

ಬಣ್ಣಗಳು

ಬಿಡುಗಡೆಗೊಂಡ ಹೊಸ ಡಿಯೋ ಸ್ಕೂಟರ್‍‍ಗಳು ಡ್ಯಾಜೆಲ್ ಮೆಟಾಲಿಕ್, ಮೇಟ್ ಮಾರ್ಶಲ್ ಗ್ರೀನ್ ಮೆಟಾಲಿಕ್, ಪರ್ಲ್ ಇಗ್‍‍ನೌಸ್ ಬ್ಲಾಕ್ ಮತ್ತು ಮೇಟ್ ಆಕ್ಸಿಸ್ ಗ್ರೇ ಮೆಟಲಿಕ್ ಎಂಬ ನಾಲ್ಕು ಬಣ್ಣಗಳ್ಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಡಿಯೋ ಡೀಲಕ್ಸ್ ಸ್ಕೂಟರಿನ ಟಾಪ್ ಫೀಚರ್‍‍ಗಳಿವು..

ಗ್ರಾಫಿಕ್ಸ್

2018ರ ಹೊಸ ಡಿಯೋ ಸ್ಕೂಟರ್‍‍ಗಳು ಆಕ್ರಮಣಕಾರಿ ಸ್ಪೋರ್ಟಿ ಗ್ರಾಫಿಕ್ಸ್ ಅನ್ನು ಪಡೆದಿದ್ದು, ಮೋಟೋ ಸ್ಕೂಟರ್‍‍ನ ಡ್ಯುಯಲ್ ಟೋನ್ ಪೇಯಿಂಟ್ ಸ್ಕೀಮ್ ಅನ್ನು ಕೂಡ ಪಡೆದುಕೊಂಡಿದೆ.

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಡಿಯೋ ಡೀಲಕ್ಸ್ ಸ್ಕೂಟರಿನ ಟಾಪ್ ಫೀಚರ್‍‍ಗಳಿವು..

ಮೇಲೆ ಹೇಳಿರುವ ಹಾಗೆಯೆ ಈ ಬಾರಿಯು ಕೂಡ ಸಂಸ್ಥೆತು ಯುವ ಸಮುದಾಯವನ್ನು ಸೆಳೆಯಲು ಹೊಸ ಡಿಯೋ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಈಗಾಗಲೆ ಮಾರುಕಟ್ಟೆಯಲ್ಲಿ ಯಮಹಾ ಸೈನಸ್ ರೇ ಜೆಡ್‍ಎಂ, ಟಿವಿಎಸ್ ಎನ್‍‍ಟಾರ್ಕ್ 125 ಮತ್ತು ಹೊ ಡ್ಯುಯೆಟ್ ಸ್ಕೂಟರ್‍‍ಗಳಿಗೆ ಪೈಪೋಟಿಯನ್ನು ನೀಡುತ್ತಿವೆ.

Read more on honda dio
English summary
Honda Dio Deluxe (DLX) Top Features.
Story first published: Saturday, May 12, 2018, 15:18 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark