ಹೋಂಡಾ ನವಿ ಸ್ಕೂಟರ್‌ಗಳು ಇನ್ಮುಂದೆ ಖರೀದಿಗೆ ಸಿಗೋದು ಡೌಟ್..?

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಸಂಸ್ಥೆಯು 2016ರಲ್ಲಿ ತನ್ನ ಹೊಸ ಮಾದರಿಯ ನವಿ ಸ್ಕೂಟರ್‍‍‍ಗಳನ್ನು ಬಿಡುಗಡೆ ಮಾಡಿತ್ತು. ಆದರೆ ಇದೀಗ ಹೋಂಡಾ ಸಂಸ್ಥೆಯು ಈ ಸ್ಕೂಟರಿನ ಮಾರಾಟವನ್ನು ಸ್ಥಗಿತಗೊಳಿಸುವ ಯೋಚನೆಯಲ್ಲಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಸಂಸ್ಥೆಯು 2016ರಲ್ಲಿ ತನ್ನ ಹೊಸ ಮಾದರಿಯ ನವಿ ಸ್ಕೂಟರ್‍‍‍ಗಳನ್ನು ಬಿಡುಗಡೆ ಮಾಡಿತ್ತು. ಆದರೆ ಇದೀಗ ಹೋಂಡಾ ಸಂಸ್ಥೆಯು ಈ ಸ್ಕೂಟರಿನ ಮಾರಾಟವನ್ನು ಸ್ಥಗಿತಗೊಳಿಸುವ ಯೋಚನೆಯಲ್ಲಿದೆ. ಇದಕ್ಕೆ ಕಾರಣ, ಮಾರ್ಚ್ ತಿಂಗಳಿನಲ್ಲಿ ಒಂದೇ ಒಂದು ನವಿ ಸ್ಕೂಟರ್ ಕೂಡಾ ಮಾರಾಟವಾಗಲಿಲ್ಲವಂತೆ.

ಹೋಂಡಾ ನವಿ ಸ್ಕೂಟರ್‌ಗಳು ಇನ್ಮುಂದೆ ಖರೀದಿಗೆ ಸಿಗೋದು ಡೌಟ್..?

ಹೌದು, 2016ರ ಆಟೋ ಎಕ್ಸೋ ಮೇಳದಲ್ಲಿ ಬಿಡುಗಡೆಗೊಂಡಿದ್ದ ಹೋಂಡಾ ನಾವಿ ಹೈಬ್ರಿಡ್ ದ್ವಿಚಕ್ರ ವಾಹನವು ಬಿಡುಗಡೆಗೊಂಡ ಒಂದು ವರ್ಷದಲ್ಲಿ 50,000 ಯೂನಿಟ್ ಸ್ಕೂಟರ್‍‍ಗಳು ಮಾತ್ರ ಮಾರಾಟಗೊಂಡಿದ್ದವು. ಆದರೇ, ಬಿಡುಗಡೆಯಾದ ಎರಡನೇ ವರ್ಷದಲ್ಲಿ 60 ಸಾವಿರ ಯೂನಿಟ್ ಮಾರಾಟ ಮಾಡಬೇಕೆಂಬ ಹೋಂಡಾ ಲೆಕ್ಕಾಚಾರ ತೆಲೆ ಕೆಳಗಾಗಿದೆ.

ಹೋಂಡಾ ನವಿ ಸ್ಕೂಟರ್‌ಗಳು ಇನ್ಮುಂದೆ ಖರೀದಿಗೆ ಸಿಗೋದು ಡೌಟ್..?

2018ರ ನವಿ ಹೈಬ್ರಿಡ್ ಸ್ಕೂಟರ್‍‍ಗಳ ಮಾರಾಟ ವರದಿಯ ಪ್ರಕಾರ ಜನವರಿ ತಿಂಗಳಲ್ಲಿ 1003 ಯೂನಿಟ್, ಫೆಬ್ರುವರಿ ತಿಂಗಳಿನಲ್ಲಿ 620 ಯೂನಿಟ್ ಹಾಗು ಮಾರ್ಚ್ ತಿಂಗಳಿನಲ್ಲಿ ಒಂದೇ ಒಂದು ಸ್ಕೂಟರ್ ಕೂಡಾ ಮಾರಾಟಗೊಂಡಿಲ್ಲ.

ಹೋಂಡಾ ನವಿ ಸ್ಕೂಟರ್‌ಗಳು ಇನ್ಮುಂದೆ ಖರೀದಿಗೆ ಸಿಗೋದು ಡೌಟ್..?

ಈಗಾಗಲೇ ಈ ಸ್ಕೂಟರಿನ ಮಾರಾಟವನ್ನು ಹೆಚ್ಚಿಸಲು ಹೋಂಡಾ ಸಂಸ್ಥೆಯು ಕ್ರೋಮ್ ಮತ್ತು ಅಡ್ವೆಚರ್ ಅಡಿಷನ್‍‍ಗಳನ್ನು ಕೂಡಾ ಬಿಡುಗಡೆಗೊಳಿಸಿತ್ತು. ಆದರೂ ಕಳೆರಡು ತಿಂಗಳಿಂದ ಕಳಪೆ ಪ್ರಮಾಣದ ಮಾರಾಟ ಕಾಣುತ್ತಿದೆ ಎನ್ನಲಾಗಿದೆ.

ಹೋಂಡಾ ನವಿ ಸ್ಕೂಟರ್‌ಗಳು ಇನ್ಮುಂದೆ ಖರೀದಿಗೆ ಸಿಗೋದು ಡೌಟ್..?

ಹೋಂಡಾ ನವಿ ಸ್ಕೂಟರ್‍‍ಗಳು 110ಸಿಸಿ, ನಾಲ್ಕು ಸ್ಟ್ರೋಕ್, ಸಿಂಗಲ್ ಸಿಲೆಂಡರ್ ಸಹಾಯದಿಂದ 8 ಬಿಹೆಚ್‍ಪಿ ಹಾಗೂ 9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದ್ದು, ಪ್ರತಿ ಲೀಟರ್‍‍ಗೆ 60 ಕಿಲೋ ಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಹೋಂಡಾ ನವಿ ಸ್ಕೂಟರ್‌ಗಳು ಇನ್ಮುಂದೆ ಖರೀದಿಗೆ ಸಿಗೋದು ಡೌಟ್..?

ಹೋಂಡಾ ನವಿ ಸ್ಕೂಟರ್‍‍ಗಳು ಸ್ಟ್ರೀಟ್, ಅಡ್ವೆಂಚರ್ ಮತ್ತು ಆಫ್ ರೋಡ್ ಎಂಬ ಮೂರಿ ವೇರಿಯೆಂಟ್‍‍ಗಳಲ್ಲಿ ಲಭ್ಯವಿದ್ದು, ರೆಡ್, ಗ್ರೇ, ವೈಟ್, ಆರೆಂಜ್ ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಹೋಂಡಾ ನವಿ ಸ್ಕೂಟರ್‌ಗಳು ಇನ್ಮುಂದೆ ಖರೀದಿಗೆ ಸಿಗೋದು ಡೌಟ್..?

ಇನ್ನು ಈ ಸ್ಕೂಟರಿನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೇ, ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಎಕ್ಸ್ಟರ್ನಲ್ ಫ್ಯುಯಲ್ ಫಿಲ್ಲರ್ ಕ್ಯಾಪ್ ಅನ್ನು ಅಳವಡಿಸಲಾಗಿದ್ದು, ಇದಲ್ಲದೇ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಶಾಕ್ ಸಸ್ಪೆಷನ್ ಅನ್ನು ಕೂಡಾ ಪಡೆದಿವೆ.

ಹೋಂಡಾ ನವಿ ಸ್ಕೂಟರ್‌ಗಳು ಇನ್ಮುಂದೆ ಖರೀದಿಗೆ ಸಿಗೋದು ಡೌಟ್..?

ನವಿ ಹೈಬ್ರಿಡ್ ಸ್ಕೂಟರ್‍‍ಗಳು ಸಂಪೂರ್ಣವಾಗಿ ಭಾರತದಲ್ಲಿಯೇ ಹೋಂಡಾ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಘಟಕದಲ್ಲಿ ಸಿದ್ದವಾಗಿದ್ದು, ಇದೀಗ ಮಾರುಕಟ್ಟೆಯಲ್ಲಿ ಕಳಪೆ ಮಾರಾಟವನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಹೊಸದಾಗಿ ತಮ್ಮ ಎಮ್ಎಸ್ಎಕ್ಸ್ 125 ಮಾಡೆಲ್ ಅನ್ನು ಪರಿಚಯಿಸುವ ತವಕದಲ್ಲಿದೆ.

Most Read Articles

Kannada
Read more on honda
English summary
honda-navi-discontinued-in-india-low-sales-figures.
Story first published: Saturday, April 21, 2018, 18:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X