ಬೈಕ್ ಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿದ ಹೋಂಡಾ ಎಕ್ಸ್-ಬ್ಲೇಡ್

ಹೋಂಡಾ ಮೋಟಾರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು 2018ರ ಆಟೋ ಎಕ್ಸ್‌ಪೋದಲ್ಲಿ ಬಹುನಿರೀಕ್ಷಿತ ಎಕ್ಸ್-ಬ್ಲೇಡ್ 160ಸಿಸಿ ಬೈಕ್ ಅನಾವರಣಗೊಂಡಿದ್ದು, ಸದ್ಯದಲ್ಲೇ ಭರ್ಜರಿಯಾಗಿ ಬಿಡುಗಡೆಯಾಗಲು ಸಜ್ಜುಗೊಳ್ಳುತ್ತಿದೆ.

ದೇಶಿಯ ಮಾರುಕಟ್ಟೆಯ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆಯಾಗಿರುವ ಹೋಂಡಾ ಮೋಟಾರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು 2018ರ ಆಟೋ ಎಕ್ಸ್‌ಪೋದಲ್ಲಿ ಬಹುನಿರೀಕ್ಷಿತ ಎಕ್ಸ್-ಬ್ಲೇಡ್ 160ಸಿಸಿ ಬೈಕ್ ಅನಾವರಣಗೊಂಡಿದ್ದು, ಸದ್ಯದಲ್ಲೇ ಭರ್ಜರಿಯಾಗಿ ಬಿಡುಗಡೆಯಾಗಲು ಸಜ್ಜುಗೊಳ್ಳುತ್ತಿದೆ.

ಬೈಕ್ ಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿದ ಹೋಂಡಾ ಎಕ್ಸ್-ಬ್ಲೇಡ್

ಹೀಗಾಗಿ ಹೊಂಡಾ ತನ್ನ ಹೊಸ ಎಕ್ಸ್-ಬ್ಲೇಡ್ ಬೈಕ್‌ನ ಬುಕ್ಕಿಂಗನ್ನು ಕೂಡಾ ಶುರುಮಾಡಿದ್ದು, 5 ವಿವಿಧ ಬಣ್ಣಗಳಲ್ಲಿ ಲಭ್ಯವಿರಲಿದೆ. ಜೊತೆಗೆ ಈ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ 79 ಸಾವಿರ ಒಳಗೆ ಬೆಲೆ ನಿಗದಿಯಾಗಲಿದೆ ಎಂಬ ಮಹತ್ವದ ಮಾಹಿತಿ ಸಹ ಲಭ್ಯವಾಗಿದೆ.

ಬೈಕ್ ಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿದ ಹೋಂಡಾ ಎಕ್ಸ್-ಬ್ಲೇಡ್

ವಿನೂತನ ಎಕ್ಸ್-ಬ್ಲೇಡ್ ವಿನ್ಯಾಸವು ಹೊಂಡಾ ಹಾರ್ನೆಟ್ 160 ಆರ್ ಬೈಕ್‌ಗೆ ಹೋಲಿಕೆ ಆಗುತ್ತಾದರೂ ಈ ಬೈಕ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ಶಾರ್ಪ್ ಲುಕ್ ಯುವ ಸಮುದಾಯವನ್ನು ತನ್ನತ್ತ ಕೈ ಬಿಸಿ ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೈಕ್ ಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿದ ಹೋಂಡಾ ಎಕ್ಸ್-ಬ್ಲೇಡ್

ಕ್ರೀಡಾತ್ಮಕ ಸ್ಟೈಲಿಷ್ ವಿನ್ಯಾಸ, ಫ್ಯೂಚರಿಸ್ಟಿಕ್ ಎಲ್‌ಇಡಿ ಹೆಡ್‌ಲೈಟ್, ಡೇ ಟೈಮ್ ರನ್ನಿಂಗ್ ಲೈಟ್, ಸ್ಪೋರ್ಟಿ ಡ್ಯುಯಲ್ ಔಟ್ಲೆಟ್, ಲಿಂಕ್ ವಿಧದ ಗೇರ್ ಶಿಫ್ಟರ್, ಯೂನಿಕ್ ವಿಭಜಿತ ಗ್ರಾಬ್ ರೈಲ್ ಮತ್ತು ಸ್ಟೈಲಿಷ್ ಅಲಾಯ್ ಚಕ್ರಗಳನ್ನು ಹೊಂದಿರಲಿದೆ.

ಬೈಕ್ ಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿದ ಹೋಂಡಾ ಎಕ್ಸ್-ಬ್ಲೇಡ್

ಜೊತೆಗೆ ಫ್ರಂಟ್ ಡಿಸ್ಕ್ ಬ್ರೇಕ್, ಶಕ್ತಿಯುತ ಗ್ರಾಫಿಕ್ಸ್, ಆಲ್ ನ್ಯೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 1347ಎಂಎಂ ಚಕ್ರಾಂತರ, ಟ್ಯೂಬ್‌ಲೆಸ್ ಚಕ್ರಗಳು, ಗೇರ್ ಪೊಶಿಷನ್ ಇಂಡಿಕೇಟರ್ ಜೊತೆ ವಿವಿಧ 5 ಬಣ್ಣಗಳಲ್ಲಿ ಲಭ್ಯವಿರಲಿದೆ.

ಬೈಕ್ ಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿದ ಹೋಂಡಾ ಎಕ್ಸ್-ಬ್ಲೇಡ್

ಎಂಜಿನ್ ಸಾಮರ್ಥ್ಯ

162.7-ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್ -ಬ್ಲೇಡ್ ಬೈಕ್‌ಗಳು 13.93-ಬಿಹೆಚ್‌ಪಿ ಮತ್ತು 13.9-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಈ ಬೈಕ್‌ನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಜೋಡಣೆ ಇದ್ದು, ರೇಸರ್ ಶಾರ್ಪ್ ಡಿಸೈನ್ ಆಕರ್ಷಕ ಲುಕ್ ಕೊಟ್ಟಿದೆ.

ಬೈಕ್ ಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿದ ಹೋಂಡಾ ಎಕ್ಸ್-ಬ್ಲೇಡ್

ಆಕ್ರಮಣಕಾರಿ ಕಪ್ಪು ಶೇಡ್ ಗಳೊಂದಿಗೆ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ವಿನ್ಯಾಸವು ಹೊಸ ಬೈಕಿನ ವಿನ್ಯಾಸಕ್ಕೆ ಮೆರಗು ನೀಡಿದ್ದು, ಸೈಡ್ ಪ್ಯಾನೆಲ್ ಗಳು ಕೂಡ ಕಪ್ಪು ಬಣ್ಣವನ್ನು ಹೊಂದಿದೆ. ಬೈಕಿನ ಟೈಲ್ ವಿಭಾಗವು ಸ್ಪ್ಲಿಟ್ ಗ್ರಾಬ್ ರೈಲ್ ಮತ್ತು ರೇಜರ್ ಅಂಚುಗಳು ಮತ್ತು ಡಬಲ್ ಔಟ್ಲೆಟ್ ಮಫ್ಲರ್ ನೀಡಲಾಗಿದೆ.

ಬೈಕ್ ಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿದ ಹೋಂಡಾ ಎಕ್ಸ್-ಬ್ಲೇಡ್

ಲಭ್ಯವಿರುವ ಬಣ್ಣಗಳು

ಹೊಸ ಬೈಕ್‌ಗಳು ಮೇಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಪರ್ಲ್ ಇಗ್ನ್ಯೋಸ್ ಬ್ಲಾಕ್, ಮೇಟ್ ಫ್ರೋಜೆನ್ ಸಿಲ್ವರ್, ಪರ್ಲ್ ಸ್ಪಾರ್ಟನ್ ಮತ್ತುಮೇಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಎಂಬ 5 ವಿವಿಧ ಬಣ್ಣಗಳಲ್ಲಿ ದೊರೆಯಲಿವೆ.

ಬೈಕ್ ಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿದ ಹೋಂಡಾ ಎಕ್ಸ್-ಬ್ಲೇಡ್

ಹೊಂಡಾ ಎಕ್ಸ್-ಬ್ಲೇಡ್ ಅಲ್ಲದೇ ಆಕ್ಟಿವಾ 5ಜಿ, ಲಿವೊ, ಸೀಬಿ ಶೈನ್, ಸೀಬಿ ಶೈನ್ ಎಸ್ ಪಿ, ಸೀಬಿ ಹಾರ್ನೆಟ್ ಮತ್ತು ಸಿಬಿಆರ್ 250ಆರ್ ತನ್ನ ಹತ್ತು ಹೊಸ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿದೆ.

ಬೈಕ್ ಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿದ ಹೋಂಡಾ ಎಕ್ಸ್-ಬ್ಲೇಡ್

ಜೊತೆಗೆ ಪರ್ಫಾಮೆನ್ಸ್ ಬೈಕ್‌ಗಳಾದ ಸಿಬಿಆರ್ 650ಎಫ್, ಆಫ್ರಿಕಾ ಟ್ವಿನ್, ಸಿಬಿಆರ್1000 ಆರ್ ಆರ್ ಮತ್ತು ಗೋಲ್ಡ್ ವಿಂಗ್ ಹೊಸ ಆವೃತ್ತಿಗಳನ್ನು ಕೂಡಾ ಅನಾವರಣಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿವೆ.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

Article Published On: Sunday, February 18, 2018, 17:00 [IST]
English summary
Honda X-Blade Top Features You Should Know: Full-LED Lights, Digital Speedo, Five Colours & More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+