ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಬಿಡುಗಡೆಗೂ ಮುನ್ನವೇ ಬೈಕ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಾವಾ ಹೊಚ್ಚ ಹೊಸ ಬೈಕ್‌ಗಳನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಖರೀದಿಗಾಗಿ ಲಕ್ಷಾಂತರ ಗ್ರಾಹಕರು ತುದಿಗಾಲಿನ ಮೇಲೆ ನಿಂತಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಸಂಸ್ಥೆಯು ಯಶಸ್ವಿಯಾಗಿದೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಹೀಗಾಗಿ ಹೊಸ ಬೈಕ್ ಖರೀದಿಗಾಗಿ ಈಗಾಗಲೇ ಗ್ರಾಹಕರು ಮುಂಗಡ ಪಾವತಿಸಿ ಬೈಕ್ ಪಡೆಯಲು ಕಾಯುತ್ತಿದ್ದು, ಬೆಂಗಳೂರಿನಲ್ಲಿ ಜಾವಾ ತನ್ನ ಮೊದಲ ಬೈಕ್ ಮಳಿಗೆಗೆ ಚಾಲನೆ ನೀಡಿದ್ದಲ್ಲದೇ ಮುಂದಿನ ಒಂದು ವಾರದೊಳಗೆ ದೇಶಾದ್ಯಂತ 20ಕ್ಕೂ ಹೆಚ್ಚು ಹೊಸ ಡೀಲರ್ಸ್‌ಗೆ ಚಾಲನೆ ನೀಡುವ ಸುಳಿವು ನೀಡಿದೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಸದ್ಯಕ್ಕೆ ಜಾವಾ ಸಂಸ್ಥೆಯು ಬೈಕ್ ಖರೀದಿಗಾಗಿ ರೂ.5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾತ್ರ ಸ್ವಿಕರಿಸಲಾಗುತ್ತಿದ್ದು, ಜನವರಿ ಆರಂಭದಲ್ಲಿ ಹೊಸ ಬೈಕ್ ವಿತರಣೆ ಮಾಡುವುದಾಗಿ ಹೇಳಿಕೊಂಡಿತ್ತು. ಆದ್ರೆ ಹೊಸ ಬೈಕ್ ಖರೀದಿ ಮಾಡುವ ಗ್ರಾಹಕರು ಬುಕ್ಕಿಂಗ್ ಮಾಡಿದ ನಂತರ ತುಸು ತಾಳ್ಮೆಯಿಂದ ಇರುವುದು ಒಳಿತು.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಯಾಕೆಂದ್ರೆ ಕಳೆದ ಒಂದು ವಾರದ ಹಿಂದೆಯೇ ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಬುಕ್ಕಿಂಗ್ ಸ್ವಿಕರಿಸಲಾಗಿದ್ದು, ಒಂದು ವೇಳೆ ನೀವು ಇಂದಿನಿಂದ ಬುಕ್ಕಿಂಗ್ ಮಾಡುವುದಾದರೇ ಹೊಸ ಬೈಕಿಗಾಗಿ ಬರೋಬ್ಬರಿ 9 ತಿಂಗಳು ಕಾಯಲೇಬೇಕಾದ ಪರಿಸ್ಥಿತಿಯಿದೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಹೌದು, 2019ರ ಸೆಪ್ಟೆಂಬರ್ ಅವಧಿಯ ತನಕ ಜಾವಾ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಗಳು ಭರ್ತಿಯಾಗಿದ್ದು, ಆರಂಭದಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಮಾರ್ಚ್‌ ಮೊದಲ ವಾರದಿಂದ ಬೈಕ್ ವಿತರಣೆ ಆರಂಭವಾಗಲಿದೆ ಎಂದು ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಹೇಳಿಕೊಂಡಿದೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಬ್ಯಾಚ್ ಪ್ರಕಾರ ಗ್ರಾಹಕರಿಗೆ ಬೈಕ್ ವಿತರಣೆ ಆರಂಭವಾಗಲಿದ್ದು, ಬುಕ್ಕಿಂಗ್ ಮಾಡಿದ ಪ್ರತಿ ಬ್ಯಾಚ್‌‌ಗಳು ಸಹ ಒಂದೊಂದು ತಿಂಗಳು ಕಾಲ ಹೆಚ್ಚುವರಿಯಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಸದ್ಯ ಮಧ್ಯಪ್ರದೇಶದ ಪ್ರಿಥಮ್‌ಪುರ್‌ನಲ್ಲಿರುವ ಒಂದೇ ಒಂದು ಬೈಕ್ ಉತ್ಪಾದನಾ ಘಟಕದಲ್ಲಿ ಜಾವಾ ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಆದರೂ ಸಹ ಜಾವಾ ಪ್ರಿಯರು ಅಷ್ಟೊಂದು ಕಾಯುವ ಅವಧಿಯ ನಡುವೆಯು ಬುಕ್ಕಿಂಗ್ ಮಾಡುತ್ತಿದ್ದು, ಮುಂದಿನ ಸೆಪ್ಟೆಂಬರ್ ಆದ್ರು ಪರವಾಗಿಲ್ಲ ನಮಗೆ ಜಾವಾ ಖರೀದಿ ಮಾಡಲೇಬೇಕು ಎನ್ನುತ್ತಿರುವುದು ಕ್ಲಾಸಿಕ್ ಲೆಜೆಂಡ್ ಸಂಸ್ಥೆಗೆ ಅಚ್ಚರಿ ತರಿಸಿದೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಆನ್‌ಲೈನ್ ಬುಕ್ಕಿಂಗ್‌ ಸದ್ಯದಲ್ಲೇ ಬಂದ್..!

ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಗ್ರಾಹಕರ ಕಾಯುವಿಕೆ ಅವಧಿಯನ್ನು ತಗ್ಗಿಸಲು ಶ್ರಮಿಸುತ್ತಿರುವ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಬೇಡಿಕೆ ಪೂರೈಸಲು ಪರದಾಟುತ್ತಿದ್ದು, ಸದ್ಯಕ್ಕೆ ಆನ್‌ಲೈನ್ ಬುಕ್ಕಿಂಗ್ ಪ್ರಕ್ರಿಯೆಗೆ ತೆರೆ ಎಳೆಯಲು ನಿರ್ಧರಿಸಿದೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಹೀಗಾಗಿ ಇದೇ ತಿಂಗಳು 25ರ ತನಕ ಮಾತ್ರವೇ ಆನ್‌ಲೈನ್ ಬುಕ್ಕಿಂಗ್ ಇರಲಿದ್ದು, ತದನಂತರ ಯಾವುದೇ ರೀತಿಯ ಬುಕ್ಕಿಂಗ್ ಸ್ವಿಕರಿಸದಿರಲು ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ನಿರ್ಧರಿಸಿದೆ. ಇದರಿಂದ ಇವತ್ತು ಮತ್ತು ನಾಳೆ ಬಿಟ್ಟಲ್ಲಿ ಮುಂದಿನ 9 ತಿಂಗಳ ತನಕ ಬೈಕ್ ಖರೀದಿಗೆ ಯಾವುದೇ ಅವಕಾಶವಿರುದಿಲ್ಲ ಎನ್ನಬಹುದು.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಸದ್ಯಕ್ಕೆ ಬುಕ್ಕಿಂಗ್ ಸ್ವಿಕರಿಸುವ ಗ್ರಾಹಕರಿಗೆ ಮಾರ್ಚ್‌ನಿಂದ ಬೈಕ್ ವಿತರಣೆ ಆರಂಭಿಸಿದ್ದಲ್ಲಿ ಅದು ಮುಂದಿನ ಸೆಪ್ಟೆಂಬರ್ ತನಕವು ವಿತರಣೆಯಾಗಲಿದ್ದು, ತದನಂತರವಷ್ಟೇ ಮತ್ತೆ ಬುಕ್ಕಿಂಗ್ ಪ್ರಕ್ರಿಯೆಗಳು ಆರಂಭವಾಗುತ್ತವೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಅಷ್ಟು ದಿನ ಕಾಯುವುದರಲ್ಲಿ ಅರ್ಥವಿದ್ಯಾ?

ಸಾಮಾನ್ಯವಾಗಿ ಈ ಪ್ರಶ್ನೆಯು ಬಹುತೇಕರಲ್ಲಿ ಮೂಡುತ್ತೆ. ಆದ್ರೆ ಜಾವಾ ಬೈಕ್ ಖರೀದಿಗಾಗಿ ಒಂಬತ್ತು ತಿಂಗಳಷ್ಟು ಕಾಯುವುದರಲ್ಲಿ ಅರ್ಥವಿದೆ ಎನ್ನಬಹುದು. ಕಾರಣ, ಕೈಗೆಟುಕುವ ಬೆಲೆಗಳಲ್ಲಿ ಅತ್ಯುತ್ತಮ ಡಿಸೈನ್ ಮತ್ತು ಉತ್ತಮ ಪರ್ಫಾಮೆನ್ಸ್ ಹೊಂದಿರುವ ಜಾವಾ ಬೈಕ್ ಪ್ರೇಮಿಗಳ ಹಾಟ್ ಫೆವರಿಟ್ ಎನ್ನಬಹುದು.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಇನ್ನು ಮಹೀಂದ್ರಾ ಸಂಸ್ಥೆಯು ಸದ್ಯಕ್ಕೆ ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಜಾವಾ ಪೆರಾಕ್ ಎನ್ನುವ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

MOST READ: ಹೊಸ ನಿಯಮ ಜಾರಿಯಾದ್ರೆ ರಾಜ್ಯದಲ್ಲಿ ಗುಜುರಿ ಸೇರಲಿವೆ 45 ಲಕ್ಷ ಹಳೆಯ ವಾಹನಗಳು..!

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ..!

ನಗರದ ಮೂರು ಕಡೆಗಳಲ್ಲಿ ಜಾವಾ ಹೊಸ ಡೀಲರ್ಸ್‌ಗಳು ಲಭ್ಯವಿರಲಿದ್ದು, ರಾಜಾಜಿನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಸ್ಕಂದ್ ಮೋಟಾರ್ಸ್ ಡೀಲರ್ಸ್‌ಗೆ ಮೊನ್ನೆಯಷ್ಟೇ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ.

ಇನ್ನುಳಿದ ಎರಡು ಜಾವಾ ಡೀಲರ್ಸ್‌ಗಳು ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಹಾಗೂ ಇನ್ನೊಂದು ಶೋರೂಂ ಇಂದಿರಾನಗರದ ಚಿನ್ಮಯ ಮಿಷನ್ ಹಾಸ್ಪಿಟಲ್ ರಸ್ತೆಯಲ್ಲಿ ತೆರಲಾಗುತ್ತಿದೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ರಾಯಲ್ ಎನ್‌‌ಫೀಲ್ಡ್‌ಗೆ ತಳಮಳ..!

ಆಕರ್ಷಕ ಬೆಲೆಗಳು ಮತ್ತು ತಾಂತ್ರಿಕವಾಗಿ ಬಲಿಷ್ಠವಾಗಿರುವ ಜಾವಾ ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಸಂಸ್ಥೆಯನ್ನೇ ಗುರಿಯಾಗಿಸಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಜಾವಾ ಮತ್ತು ಜಾವಾ 42 ಬೈಕ್‌ಗಳು ಕ್ಲಾಸಿಕ್ 350 ಬೈಕ್‌ಗಳಿಗೆ ಹೆಚ್ಚಿನ ಪೈಪೋಟಿ ನೀಡುತ್ತಿವೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಇದಕ್ಕೆ ಉದಾಹರಣೆ ಅಂದ್ರೆ, ಅಕ್ಟೋಬರ್ ಅವಧಿಯಲ್ಲಿನ ಬೈಕ್ ಮಾರಾಟಕ್ಕೂ ಮತ್ತೆ ನವೆಂಬರ್ ಅವಧಿಯಲ್ಲಿನ ಬೈಕ್ ಮಾರಾಟಕ್ಕೂ ಶೇ.10 ರಷ್ಟು ನಷ್ಟ ಅನುಭವಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಜಾವಾ ಅಬ್ಬರದ ಮುಂದೆ ಕಂಗಾಲಾಗಿ ಹೋಗಿದೆ.

ದಯವಿಟ್ಟು ಗಮನಿಸಿ- ಜಾವಾ ಖರೀದಿಸಲು ಇಷ್ಟು ದಿನ ಕಾಯಲೇಬೇಕಂತೆ ನೋಡಿ..!

ಜೊತೆಗೆ ರಾಯಲ್ ಎನ್‌ಫೀಲ್ಡ್ ಖರೀದಿಸುವ ಗ್ರಾಹಕರನ್ನ ತನ್ನತ್ತ ಸೆಳೆಯುವ ಉದ್ದೇಶ ಮತ್ತೊಂದು ಯೋಜನೆ ಆರಂಭಿಸಿರುವ ಜಾವಾ ಸಂಸ್ಥೆಯು, ದೇಶದ ವಿವಿಧ ನಗರಗಳಲ್ಲಿ ನೆಲೆಗೊಂಡಿರುವ ರಾಯಲ್ ಎನ್‌ಫೀಲ್ಡ್ ಶೋರೂಂಗಳ ಎದುರಲ್ಲೇ ಹೊಸ ಜಾವಾ ಬೈಕ್ ಡೀಲರ್ಸ್ ತೆರೆಯುವುದಾಗಿ ಹೇಳಿಕೊಂಡಿರುವುದು ಮಾರಾಟದಲ್ಲಿ ಮತ್ತಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.

Article Published On: Monday, December 24, 2018, 19:13 [IST]
English summary
Jawa Bike Waiting Period Crosses Nine Months. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+