ಹೊಸ ಬಣ್ಣದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಕೆಟಿಎಂ ಡ್ಯೂಕ್ 390

2018ನೇ ಸಾಲಿನ ಕೆಟಿಎಂ ಡ್ಯೂಕ್ ಶ್ರೇಣಿಯ ಬೈಕ್‌ಗಳು ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೆೊಡುತ್ತಿದ್ದು, ಮೊದಲ ಹಂತವಾಗಿ ಡ್ಯೂಕ್ 390 ಬೈಕ್ ಬಿಡುಗಡೆಯಾಗಿದೆ.

By Praveen

Recommended Video

Bangalore Bike Accident At Chikkaballapur Near Nandi Upachar - DriveSpark

2018ನೇ ಸಾಲಿನ ಕೆಟಿಎಂ ಡ್ಯೂಕ್ ಶ್ರೇಣಿಯ ಬೈಕ್‌ಗಳು ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೆೊಡುತ್ತಿದ್ದು, ಮೊದಲ ಹಂತವಾಗಿ ಡ್ಯೂಕ್ 390 ಬೈಕ್ ಬಿಡುಗಡೆಯಾಗಿದೆ. ಹೊಸ ಬೈಕ್ ಅನ್ನು ವಿವಿಧ ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 2.29 ಲಕ್ಷ ದರ ನಿಗದಿ ಮಾಡಲಾಗಿದೆ.

ಹೊಸ ಬಣ್ಣದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಕೆಟಿಎಂ ಡ್ಯೂಕ್ 390

ಈ ಹಿಂದೆ 2017ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ ಸೇಕೆಂಡ್ ಜನರೇಷನ್ ಡ್ಯೂಕ್ 390 ಮಾದರಿಗಿಂತಲೂ ವಿಶೇಷ ವಿನ್ಯಾಸಗಳನ್ನು ಹೊಂದಿರುವ ಹೊಸ ಬೈಕ್, ಸುಧಾರಿತ ತಂತ್ರಜ್ಞಾನಗಳ ಜೊತೆ ಜೊತೆಗೆ ಆರೇಂಜ್ ಮತ್ತು ವೈಟ್ ಡ್ಯುಯಲ್ ಕಲರ್ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಹೊಸ ಬಣ್ಣದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಕೆಟಿಎಂ ಡ್ಯೂಕ್ 390

ಇನ್ನು ಮುಂದುವರೆದು ಹೊಸ ಬೈಕಿನಲ್ಲಿ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಡಿಸ್‌ಪೇ ಒದಗಿಸಲಾಗಿದ್ದು, ಈ ಹಿಂದೆ ಬೈಕ್ ಮಾದರಿಗಳಲ್ಲಿ ಕಂಡುಬಂದಿದ್ದ ಎಂಜಿನ್ ಹಿಟ್ ಮತ್ತು ಹೆಡ್ ಲೈಟ್ ವಿಭಾಗದಲ್ಲಿನ ತಾಂತ್ರಿಕ ದೋಷಗಳನ್ನು ಹೊಸ ಮಾದರಿಯಲ್ಲಿ ಸರಿಪಡಿಸಲಾಗಿದೆ.

ಹೊಸ ಬಣ್ಣದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಕೆಟಿಎಂ ಡ್ಯೂಕ್ 390

ಹೀಗಾಗಿ ಸೂಪರ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ 2018ರ ಡ್ಯೂಕ್ 390 ಮಾದರಿಯು ದಿನಬಳಕೆ ಮತ್ತು ಆಪ್ ರೋಡಿಂಗ್‌ಗೆ ಸಹಕಾರಿಯಾಗಿದ್ದು, ಸ್ಮಾರ್ಟ್ ಫೋನ್‌ಗಳ ಮೂಲಕ ನೇವಿಗೆಷನ್ ಟ್ರಾಕ್ ಮಾಡುವ ಸೌಲಭ್ಯ ಹೊಂದಿದೆ.

ಹೊಸ ಬಣ್ಣದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಕೆಟಿಎಂ ಡ್ಯೂಕ್ 390

ಎಂಜಿನ್ ಸಾಮರ್ಥ್ಯ

ಈ ಹಿಂದಿನ ಮಾದರಿಯಂತೆಯೇ 373.2-ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ 2018ರ ಡ್ಯೂಕ್ 390 ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 44-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

Trending On DriveSpark Kannada:

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಎಂಟು ಜನರ ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಹೊಸ ಬಣ್ಣದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಕೆಟಿಎಂ ಡ್ಯೂಕ್ 390

ಹೊಸ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಫ್ರಂಟ್ ಚಕ್ರದಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಮತ್ತು ರಿರ್ ಚಕ್ರದಲ್ಲಿ 230ಎಂಎಂ ಡಿಸ್ಕ್ ಬ್ರೇಕ್ ಅಳವಡಿಕೆ ಮಾಡಲಾಗಿದೆ. ಜೊತೆಗೆ ಸಂದರ್ಭಕ್ಕೆ ಅನುಗುಣವಾಗಿ ಎಬಿಎಸ್ ಸೌಲಭ್ಯವನ್ನು ತಟಸ್ಥವಾಗಿಸುವ ಆಯ್ಕೆಯನ್ನು ಕೂಡಾ ಒದಗಿಸಲಾಗಿದೆ.

ಹೊಸ ಬಣ್ಣದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಕೆಟಿಎಂ ಡ್ಯೂಕ್ 390

ಇನ್ನು ಸೂಪರ್ ಬೈಕ್ ಮಾದರಿಗಳಲ್ಲಿ ಒದಗಿಸಲಾಗುವ ಸಾಮಾನ್ಯ ವೈಶಿಷ್ಟ್ಯತೆಗಳಾದ ಮೊಣಚಾದ ಹೆಡ್‌ಲ್ಯಾಂಪ್, ಫುಲ್ ಎಲ್ಇಡಿ ಲೈಟಿಂಗ್, ಸಿಕ್ ಟೈಲ್ ಲ್ಯಾಂಪ್‌ಗಳು ಹೊಸ ಬೈಕಿನ ಅಂದಕ್ಕೆ ಮತ್ತಷ್ಟು ಮೆರಗು ನೀಡಿವೆ.

ಹೊಸ ಬಣ್ಣದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಕೆಟಿಎಂ ಡ್ಯೂಕ್ 390

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ವರ್ಷದ ಆರಂಭಕ್ಕೆ ಕೆಟಿಎಂ ಸಂಸ್ಥೆಯು ಡ್ಯೂಕ್ 390 ಮಾದರಿಯನ್ನು ಪರಿಚಯಿಸಿದ್ದು, ಮುಂಬರುವ ದಿನಗಳಲ್ಲಿ ಡ್ಯೂಕ್ ಮುಂದುವರಿದ ಶ್ರೇಣಿಗಳನ್ನು ಪರಿಚಯಿಸಲಿದೆ. ಸದ್ಯ ಬಿಡುಗಡೆಯಾಗಿರುವ ಹೊಸ ಬೈಕ್ ಹೊಸ ಬಣ್ಣದಲ್ಲಿ ಲಭ್ಯವಾಗಿರುವ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸೃಷ್ಠಿಸುವ ತವಕದಲ್ಲಿದೆ ಎನ್ನುಬಹುದು.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on ktm ಕೆಟಿಎಂ
English summary
2018 KTM Duke 390 Launched In India — Gets New Colour.
Story first published: Saturday, January 13, 2018, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X