ಬಿಡುಗಡೆಗಾಗಿ ಮೊಜೊ ಎಲೆಕ್ಟ್ರಿಕ್ ಬೈಕ್ ಸಿದ್ದಗೊಳಿಸಿದ ಮಹೀಂದ್ರಾ

ಮುಂಬರುವ ದಿನಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನ ಉತ್ಪಾದನೆ ಯೋಜನೆಯಲ್ಲಿರುವ ಮಹೀಂದ್ರಾ ಸಂಸ್ಥೆಯು ಸದ್ಯದಲ್ಲೇ ಮೊಜೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯ ಸುಳಿವು ನೀಡಿದೆ.

By Praveen Sannamani

ಮಹೀಂದ್ರಾ ಸಂಸ್ಥೆಯು ಸದ್ಯ ದೇಶದಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡುತ್ತಿರುವ ಏಕೈಕ ಆಟೋ ಉತ್ಪಾದನಾ ಸಂಸ್ಥೆಯಾಗಿದ್ದು, ಗ್ರಾಹಕರ ಬೇಡಿಕೆ ಅನುಗುಣವಾಗಿ ಈಗಾಗಲೇ ಹಲವಾರು ಮಾದರಿಯ ಇವಿ ವಾಹನಗಳನ್ನು ಹೊರತಂದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನ ಉತ್ಪಾದನೆ ಯೋಜನೆಯಲ್ಲಿರುವ ಮಹೀಂದ್ರಾ ಸಂಸ್ಥೆಯು ಸದ್ಯದಲ್ಲೇ ಮೊಜೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯ ಸುಳಿವು ನೀಡಿದೆ.

ಬಿಡುಗಡೆಗಾಗಿ ಮೊಜೊ ಎಲೆಕ್ಟ್ರಿಕ್ ಬೈಕ್ ಸಿದ್ದಗೊಳಿಸಿದ ಮಹೀಂದ್ರಾ

ಮಹೀಂದ್ರಾ ಸಂಸ್ಥೆಯು ಸದ್ಯ ಮೊಜೊ ಎಲೆಕ್ಟ್ರಿಕ್ ಬೈಕಿನ ಬಿಡಿಭಾಗಗಳ ಕುರಿತು ಪರೀಕ್ಷೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ನೆಲೆಗೊಂಡಿರುವ ಬಾಷ್ ಸಂಸ್ಥೆಯಲ್ಲಿ ಹೊಸ ಬೈಕಿನ ಬಿಡಿಭಾಗಗಳ ಜೋಡಣೆ ಬಳಿಕ ಸ್ಪಾಟ್ ನಡೆಸುತ್ತಿರುವಾಗ ಹೊಸ ಬೈಕ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಬೈಕ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿತ್ತು.

ಬಿಡುಗಡೆಗಾಗಿ ಮೊಜೊ ಎಲೆಕ್ಟ್ರಿಕ್ ಬೈಕ್ ಸಿದ್ದಗೊಳಿಸಿದ ಮಹೀಂದ್ರಾ

ಯಾಕೆಂದ್ರೆ ಸಾಮಾನ್ಯ ಮೊಜೊ ಬೈಕಿಗಿಂತಲೂ ವಿಭಿನ್ನ ಡಿಸೈನ್ ಹೊಂದಿರುವ ಎಲೆಕ್ಟ್ರಿಕ್ ಮೊಜೊ ಬೈಕಿನಲ್ಲಿ ಕೆಲವು ವಿನ್ಯಾಸಗಳು ಮಾರ್ಪಾಡುಗೊಂಡಿರುವ ಸ್ಪಷ್ಟವಾಗುತ್ತೆ. ಹೊಸ ಬೈಕಿನಲ್ಲಿ ಎಕ್ಸಾಸ್ಟ್ ಮತ್ತು ಗೇರ್ ಶಿಫ್ಟರ್ ಇಲ್ಲದಿರುವುದನ್ನು ಚಿತ್ರದಲ್ಲಿ ನೀವು ಗಮನಿಸಬಹುದು.

ಬಿಡುಗಡೆಗಾಗಿ ಮೊಜೊ ಎಲೆಕ್ಟ್ರಿಕ್ ಬೈಕ್ ಸಿದ್ದಗೊಳಿಸಿದ ಮಹೀಂದ್ರಾ

ಹೊಸ ಬೈಕಿನಲ್ಲಿ ಗೇರ್ ಶಿಫ್ಟರ್ ಬದಲಾಗಿ ಫುಟ್ ಪೆಡಲ್ ಮಾತ್ರವೇ ಇರಿಸಲಾಗಿದ್ದು, ಎಂಜಿನ್ ವಿಭಾಗದಲ್ಲಿ ಈ ಹಿಂದೆ ಇದ್ದ ವಿನ್ಯಾಸವನ್ನು ಸಹ ಸಂಪೂರ್ಣವಾಗಿ ಬದಲಿಸಲಾಗಿದೆ. ಎಲೆಕ್ಟ್ರಿಕ್ ಬ್ಯಾಟರಿ ಬಳಕೆಯಿಂದಾಗಿ ಎಂಜಿನ್ ವಿಭಾಗಕ್ಕೆ ಸಂಪೂರ್ಣವಾಗಿ ಹೊದಿಕೆ ಹಾಕಲಾಗಲಿದೆ.

ಬಿಡುಗಡೆಗಾಗಿ ಮೊಜೊ ಎಲೆಕ್ಟ್ರಿಕ್ ಬೈಕ್ ಸಿದ್ದಗೊಳಿಸಿದ ಮಹೀಂದ್ರಾ

ಇದರ ಹೊರತಾಗಿ ಬೈಕಿನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಸಾಮರ್ಥ್ಯ ಮತ್ತು ಮೈಲೇಜ್ ಕುರಿತಾಗಿ ಯಾವುದೇ ಲಭ್ಯವಾಗಿಲ್ಲವಾದರೂ ಮುಂಬರುವ ದಿನಗಳಲ್ಲಿ ಹೊಸ ಬೈಕ್ ಬಿಡುಗಡೆಯಾಗುವುದು ಖಚಿತವಾಗಿದ್ದು, ಕೆಲವು ವರದಿಗಳ ಪ್ರಕಾರ ಮಹೀಂದ್ರಾ ಸಂಸ್ಥೆಯು ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ 250 ಕಿ.ಮಿ ಮೈಲೇಜ್ ಸಾಮರ್ಥ್ಯದ ಬೈಕ್ ಉತ್ಪಾದಿಸುತ್ತಿರುವ ಬಗ್ಗೆ ಮಾಹಿತಿಯಿದೆ.

ಬಿಡುಗಡೆಗಾಗಿ ಮೊಜೊ ಎಲೆಕ್ಟ್ರಿಕ್ ಬೈಕ್ ಸಿದ್ದಗೊಳಿಸಿದ ಮಹೀಂದ್ರಾ

ಹೀಗಾಗಿ ಹೊಸ ಬೈಕಿನ ತಾಂತ್ರಿಕ ಅಂಶಗಳ ಬಗೆಗೆ ಹೊಂದಲವಿದ್ದರೂ ಬೈಕ್ ಬಿಡುಗಡೆಯಾಗುವುದು ಮಾತ್ರ ಖಚಿತವಾಗಿದ್ದು, 2018ರ ಕೊನೆಯಲ್ಲಿ ಇಲ್ಲವೇ 2019ರ ಮೊದಲಾರ್ಧದಲ್ಲಿ ಹೊಸ ಬೈಕ್ ರಸ್ತೆಗಿಳಿವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗಾಗಿ ಮೊಜೊ ಎಲೆಕ್ಟ್ರಿಕ್ ಬೈಕ್ ಸಿದ್ದಗೊಳಿಸಿದ ಮಹೀಂದ್ರಾ

ಸದ್ಯ ಮಾರುಕಟ್ಟೆಯಲ್ಲಿ ಸಾಮಾನ್ಯ ಮೊಜೊ ಬೈಕ್‌ಗಳು ಸಹ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, 295-ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಮೊಜೆ ಬೈಕ್‌ಗಳು ಸಿಕ್ಸ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 27..2-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಬಿಡುಗಡೆಗಾಗಿ ಮೊಜೊ ಎಲೆಕ್ಟ್ರಿಕ್ ಬೈಕ್ ಸಿದ್ದಗೊಳಿಸಿದ ಮಹೀಂದ್ರಾ

ಇದರೊಂದಿಗೆ 165 ಕೆ.ಜಿ ತೂಕ ಹೊಂದಿರುವ ಸಾಮಾನ್ಯ ಮೊಜೊ ಬೈಕ್‌ಗಳು ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ಇದೀಗ ಎಲೆಕ್ಟ್ರಿಕ್ ಎಂಜಿನ್ ಹೊತ್ತು ಬರುತ್ತಿರುವ ಇವಿ ಮೊಜೊ ಸಹ ಹೊಸ ನೀರಿಕ್ಷೆಯಲ್ಲಿದೆ.

ಬಿಡುಗಡೆಗಾಗಿ ಮೊಜೊ ಎಲೆಕ್ಟ್ರಿಕ್ ಬೈಕ್ ಸಿದ್ದಗೊಳಿಸಿದ ಮಹೀಂದ್ರಾ

ಎಲೆಕ್ಟ್ರಿಕ್ ಮೋಟಾರ್ ಹಿನ್ನಲೆಯಲ್ಲಿ ಸಾಮಾನ್ಯ ಮೊಜೊ ಬೈಕಿಗಿಂತಲೂ ತೂಕದಲ್ಲಿ ಇನ್ನಷ್ಟು ಹೆಚ್ಚಲಿರುವ ಇವಿ ಮೊಜೊ ಬೈಕ್‌ಗಳು ಬೆಲೆ ವಿಚಾರದಲ್ಲೂ ದುಬಾರಿ ಎನ್ನಿಸಲಿವೆ. ವಿಶ್ವದರ್ಜೆ ಲಿಥಿಯಂ ಅಯಾನ್ ಬ್ಯಾಟರಿ ಬಳಕೆಯಿಂದಾಗಿ ಸಾಮಾನ್ಯ ಬೈಕ್‌ಗಳಿಂತಲೂ ತುಸು ದುಬಾರಿ ಬೆಲೆ ಪಡೆದುಕೊಳ್ಳಲಿವೆ.

Most Read Articles

Kannada
English summary
Mahindra Mojo Electric Spotted Testing in Bengaluru.
Story first published: Wednesday, August 29, 2018, 14:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X