ಬರಲಿದೆ 125ಸಿಸಿ ಸಾಮರ್ಥ್ಯದ ಹೋಂಡಾ ಹೊಸ ಬೈಕ್..

Written By: Rahul TS

ಈಗಾಗಲೇ ಹೋಂಡಾ ಸಂಸ್ಥೆಯು 2018/19 ರ ಹಣಕಾಸು ವರ್ಷದ ಯೋಜನೆಯನ್ನು ಬಹಿರಂಗಗೊಳಿಸಿದ್ದು, ಮಾರುಕಟ್ಟೆಗೆ ಹೊಸ ಬೈಕ್ ಅನ್ನು ಸಹ ಪರಿಚಯಿಸುವ ಸುಳಿವು ಕೂಡಾ ನೀಡಿತ್ತು. ಇದೀಗ ಹೋಂಡಾ ಪರಿಚಯಿಸಲಿರುವ ಹೊಸ ಬೈಕ್‍ ಬಗ್ಗೆ ಮಾಹಿತಿ ಲೀಕ್ ಆಗಿದ್ದು, ಸಿಬಿ 125ಎಫ್ ಎಂಬ 125ಸಿಸಿ ಸರಣಿಯ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದೆ.

ಬರಲಿದೆ 125ಸಿಸಿ ಸಾಮರ್ಥ್ಯದ ಹೋಂಡಾ ಹೊಸ ಬೈಕ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಭಾರತೀಯ ಮಾರುಕಟ್ಟೆಗೆ ನವೀಕರಿಸಲಾಗಿರುವ ತಮ್ಮ 18 ವಾಹನಗಳನ್ನು ಕೂಡಾ ಪರಿಚಯಿಸಲಿದೆ ಎಂದು ಹೇಳಿಕೊಂಡಿದ್ದು, ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ 125ಸಿಸಿ ಸಾಮರ್ಥ್ಯದ ಹೊಸ ಬೈಕ್ ಸಿಬಿ 125ಎಫ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬರಲಿದೆ 125ಸಿಸಿ ಸಾಮರ್ಥ್ಯದ ಹೋಂಡಾ ಹೊಸ ಬೈಕ್..

ಹೊಸ ಹೋಂಡಾ ಸಿಬಿ 125ಎಫ್ ಬೈಕಿನ ಒಟ್ಟಾರೆ ವಿನ್ಯಾಸವನ್ನು ತಮ್ಮ ಔಟ್ ಗೋಯಿಂಗ್ ಮಾಡೆಲ್‍ ಅನ್ನು ಆಧರಿಸಿದ್ದು, 2018ರ ಹೊಸ ಬೈಕ್ ಮಡ್‍ಗಾರ್ಡ್, ರಿವಾಂಪ್ಡ್ ಫ್ಯುಯಲ್ ಟ್ಯಾಂಕ್ ಮತ್ತು ಅಗಲವಾದ ಸೀಟ್ ಅನ್ನು ಹೊಸದಾಗಿ ಪಡೆದುಕೊಳ್ಳಲಿವೆ.

ಬರಲಿದೆ 125ಸಿಸಿ ಸಾಮರ್ಥ್ಯದ ಹೋಂಡಾ ಹೊಸ ಬೈಕ್..

ಸಿಬಿ 125ಎಫ್ ಬೈಕುಗಳಲ್ಲಿ ಅಳವಡಿಸಲಾಗಿರುವ ಸಣ್ಣದಾದ ಎಕ್ಸಾಸ್ಟ್ ಮಫ್ಲರ್ ಮತ್ತು ಸ್ಪೋರ್ಟಿ ಸ್ಪ್ಲಿಟ್ ಗ್ರ್ಯಾಬ್ ರೈಲ್‍‍‍ಗಳು ಬೈಕ್‍ಗೆ ಪ್ರೀಮಿಯಂ ರೂಪವನ್ನು ನೀಡಲಿದ್ದು, 2018ರ ಹೊಸ ಬೈಕ್‍‍ಗಳು ಸಿಬಿ ಹಾರ್ನೆಟ್ 160ಆರ್ ಬೈಕ್‍‍ಗಳಲ್ಲಿ ಕಾಣಬಹುದಾದ ಎಲ್ಇಡಿ ಹೆಡ್‍ಲ್ಯಾಂಪ್‍ಗಳನ್ನು ಕೂಡಾ ಪಡೆದುಕೊಳ್ಳಲಿದೆ.

ಬರಲಿದೆ 125ಸಿಸಿ ಸಾಮರ್ಥ್ಯದ ಹೋಂಡಾ ಹೊಸ ಬೈಕ್..

ಹೋಂಡಾ ಸಿಬಿ 125ಎಫ್ ಬೈಕ್‍ಗಳಲ್ಲಿ ಸಿಬಿ ಶೈನ್ ಬೈಕಿನಿಂದ ಆಧರಿಸಲಾಗಿರುವ 125ಸಿಸಿ ಏಂಜಿನ್ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 10-ಬಿಹೆಚ್‍‍ಪಿ ಹಾಗೂ 10.3-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 4 ಸ್ಪೀಡ್ ಗೇರ್‍‍ಬಾಕ್ಸ್ ಜೋಡಿಸಲಾಗಿರಲಿದೆ.

ಬರಲಿದೆ 125ಸಿಸಿ ಸಾಮರ್ಥ್ಯದ ಹೋಂಡಾ ಹೊಸ ಬೈಕ್..

ಹೋಂಡಾ ಸಂಸ್ಥೆಯು ಈಗಾಗಲೇ ಸಿಬಿ 125ಎಫ್ ಬೈಕ್ ಅನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತಿದ್ದು, ರಫ್ತು ಮಾಡಲಾಗುತ್ತಿರುವ ಸಿಬಿ 125ಎಫ್ ಬೈಕ್‍‍ಗಳು 125ಸಿಸಿ ಎಂಜಿನ್ ಸಹಾಯದಿಂದ 10.46 ಬಿಹೆಚ್‍ಪಿ ಹಾಗು 10.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬರಲಿದೆ 125ಸಿಸಿ ಸಾಮರ್ಥ್ಯದ ಹೋಂಡಾ ಹೊಸ ಬೈಕ್..

ಸರ್ಕಾರದ ಹೊಸ ನಿಯಮಾವಳಿಗಳ ಪ್ರಕಾರ ಬೈಕ್ ಸಿಬಿಎಸ್ ಬ್ರೇಕ್ ಸಿಸ್ಟಮ್ ಅನ್ನು ಅಳವಡಿಸಬೇಕಾಗಿದ್ದು, ಚಿತ್ರಗಳಲ್ಲಿ ಗಮನಿಸುವುದಾದರೆ ಹೊಸ ಬೈಕಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಬರಲಿದೆ 125ಸಿಸಿ ಸಾಮರ್ಥ್ಯದ ಹೋಂಡಾ ಹೊಸ ಬೈಕ್..

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಜಾಜ್ ಡಿಸ್ಕವರ್ 125 ಹಾಗೂ ಹೀರೊ ಗ್ಲಾಮರ್ ಬೈಕುಗಳಿಗೆ ಹೋಂಡಾ ಹೊಸ ಸಿಬಿ 125ಎಫ್ ಬೈಕುಗಳು ಪೈಪೋಟಿಯನ್ನು ನೀಡಲಿದ್ದು, ಪ್ರೀಮಿಯಂ ಲುಕ್ ಅನ್ನು ಪಡೆದ ಈ ಬೈಕ್ ಗ್ರಾಹಕರನ್ನು ಸೆಳೆಯುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾಯ್ದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಬೇಸಿಗೆಯಲ್ಲಿ ನಿಮ್ಮ ವಾಹನಗಳ ರಕ್ಷಣೆ ಹೇಗೆ? ಇಲ್ಲಿದೆ ಸರಳ ಉಪಾಯ....

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು...

Read more on honda
English summary
2018 Honda CB 125F Patent Image Leaked — India Launch Soon.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark