ಅಪಾಚೆ ಆರ್‌ಟಿಆರ್ 160 ಬೈಕ್ ಹಿಂದಿಕ್ಕಲು ಬಂದ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್..

ಹೊಸತನಗಳೊಂದಿಗೆ ಬಂದಿರುವ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್ ಮಾದರಿಯಂತೂ ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ.

By Praveen Sannamani

ಕಳೆದ 2 ತಿಂಗಳ ಅವಧಿಯಲ್ಲಿ ಹಲವು ಬೈಕ್ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಬೈಕ್ ಪ್ರಿಯರ ಆಯ್ಕೆಯನ್ನು ಹೆಚ್ಚಿಸಿವೆ. ಅದರಲ್ಲೂ ಹೊಸತನಗಳೊಂದಿಗೆ ಬಂದಿರುವ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್ ಮಾದರಿಯಂತೂ ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ.

ಅಪಾಚೆ ಆರ್‌ಟಿಆರ್ 160 ಬೈಕ್ ಹಿಂದಿಕ್ಕಲು ಬಂದ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್..

ಕಮ್ಯುಟರ್ ಬೈಕ್ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕಿನ 2018ರ ಆವೃತ್ತಿಯು ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ಹೊಸ ಬೈಕ್‌ಗಳನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಬೆಲೆಗಳನ್ನು ರೂ.84,675ಕ್ಕೆ ನಿಗದಿಪಡಿಸಲಾಗಿದೆ.

ಅಪಾಚೆ ಆರ್‌ಟಿಆರ್ 160 ಬೈಕ್ ಹಿಂದಿಕ್ಕಲು ಬಂದ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್..

ಫೆಬ್ರುವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ತನ್ನ ಹೊಸ ಸಿಬಿ ಹಾರ್ನೆಟ್ 160ಆರ್ ಬೈಕ್ ಅನ್ನು ಪ್ರದರ್ಶನಗೊಳಿಸಿದ್ದ ಹೋಂಡಾ ಸಂಸ್ಥೆಯು, ಹಿಂದಿನ ಮಾದರಿಗಿಂತಲೂ ಅತ್ಯತ್ತಮ ಸುರಕ್ಷಾ ಸೌಲಭ್ಯಗಳನ್ನು ಒದಗಿಸುವ ಕುರಿತು ಭರವಸೆ ನೀಡಿತ್ತು.

ಅಪಾಚೆ ಆರ್‌ಟಿಆರ್ 160 ಬೈಕ್ ಹಿಂದಿಕ್ಕಲು ಬಂದ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್..

ಅಂತೆಯೇ ಹೊಸ ಬೈಕಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಒದಗಿಸಿರುವ ಹೋಂಡಾ ಸಂಸ್ಥೆಯು ಹಳೆಯ ಮಾದರಿಗಿಂತಲೂ ಹೆಚ್ಚು ಆಕರ್ಷಣೆ ಕಾಣುವಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಸಹ ಪರಿಚಯಿಸಿದೆ.

ಅಪಾಚೆ ಆರ್‌ಟಿಆರ್ 160 ಬೈಕ್ ಹಿಂದಿಕ್ಕಲು ಬಂದ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್..

ಹೊಸದಾಗಿ ಪರಿಚಯಿಸಿರುವ ಸಿಂಗಲ್ ಚಾನೆಲ್ ಸೌಲಭ್ಯವನ್ನು ಆಯ್ಕೆ ರೂಪದಲ್ಲಿ ನೀಡಲಾಗಿದ್ದು, ಗ್ರಾಹಕರು ತಮ್ಮ ಆದ್ಯತೆ ಮೆರೆಗೆ ವಿವಿಧ ಮಾದರಿಯ ಬೈಕ್ ಆವೃತ್ತಿಗಳನ್ನು ಆಯ್ಕೆ ಮಾಡಬಹುದಾದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಹೀಗಾಗಿ ವಿವಿಧ ಮಾದರಿಗಳಿಗೆ ಅನುಗುಣ ವಿವಿಧ ಬೆಲೆ ಪಡೆದುಕೊಂಡಿವೆ.

ಅಪಾಚೆ ಆರ್‌ಟಿಆರ್ 160 ಬೈಕ್ ಹಿಂದಿಕ್ಕಲು ಬಂದ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್..

ಎಂಜಿನ್ ಸಾಮರ್ಥ್ಯ

ಬೈಕಿನ ವಿನ್ಯಾಸಗಳು ಮತ್ತು ಸಿಂಗಲ್ ಚಾಲೆನ್ ಎಬಿಎಸ್ ಹೊರತುಪಡಿಸಿ ಈ ಹಿಂದಿನ ಮಾದರಿಯೆಂತೆಯೇ 162.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಒದಗಿಸಲಾಗಿದ್ದು, 14.9ಬಿಎಚ್‌ಪಿ ಮತ್ತು 14.5ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಗುಣಹೊಂದಿವೆ.

ಅಪಾಚೆ ಆರ್‌ಟಿಆರ್ 160 ಬೈಕ್ ಹಿಂದಿಕ್ಕಲು ಬಂದ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್..

ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿರುವ 2018ರ ಸಿಬಿ ಹಾರ್ನೆಟ್ 160ಆರ್ ಬೈಕ್‌ಗಳು, ಸುಧಾರಿತ ಎಲ್‌ಇಡಿ ಹೆಡ್‌ಲೈಟ್, ಮರು ವಿನ್ಯಾಸದ ಬಾಡಿ ಗ್ರಾಫಿಕ್ಸ್‌ಗಳು ಮತ್ತು ಹೊಸ ಬಣ್ಣಗಳ ಆಯ್ಕೆಯನ್ನು ನೀಡಿರುವುದೇ ಹೊಸ ಬೈಕ್‌ಗಳ ಹೈಲೆಟ್ಸ್.

ಅಪಾಚೆ ಆರ್‌ಟಿಆರ್ 160 ಬೈಕ್ ಹಿಂದಿಕ್ಕಲು ಬಂದ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್..

ಇತರೆ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಹೋಂಡಾದ ಮತ್ತೊಂದು ಎಕ್ಸ್ ಬ್ಲೇಡ್ ಬೈಕಿನಂತೆಯೇ ಈ ಬೈಕಿನಲ್ಲೂ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಕ್ಸ್ ಸೇಫ್ ಎಲ್ಇಡಿ ಲೈಟ್ ಮತ್ತು ಮರು ವಿನ್ಯಾಸದ ಅಗಲ ಸೀಟುಗಳನ್ನು ಸಹ ಪಡೆದಿದೆ.

ಅಪಾಚೆ ಆರ್‌ಟಿಆರ್ 160 ಬೈಕ್ ಹಿಂದಿಕ್ಕಲು ಬಂದ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್..

ಟೈರ್ ಮತ್ತು ಸುರಕ್ಷಾ ವಿಧಾನಗಳು

ಮೇಲೆ ಹೇಳಿದ ಹಾಗೆ ಹೊಸ ಬೈಕ್‌ಗಳಲ್ಲಿ ಸುರಕ್ಷಾ ಮಾರ್ಗಗಳಿಗೆ ಹೆಚ್ಚಿನ ಒತ್ತುನೀಡಲಾಗಿದ್ದು, ಬ್ರೇಕಿಂಗ್ ಸಿಸ್ಟಂ ಸುಧಾರಿಸಲು ಆಯ್ಕೆ ರೂಪದ ಸಿಂಗಲ್ ಚಾನೆಲ್ ಎಬಿಎಸ್ ಮತ್ತು 276ಎಂಎಂ ಪೆಟಲ್ ಡಿಸ್ಕ್ ಬ್ರೇಕ್, 220ಎಂಎಂ/130ಎಂಎಂ ಡ್ರಮ್ ಬ್ರೇಕ್ ಒದಗಿಸಲಾಗಿದೆ.

ಅಪಾಚೆ ಆರ್‌ಟಿಆರ್ 160 ಬೈಕ್ ಹಿಂದಿಕ್ಕಲು ಬಂದ 2018ರ ಹೋಂಡಾ ಸಿಬಿ ಹಾರ್ನೆಟ್ 160ಆರ್..

ಇನ್ನು ಬೈಕಿನ ಸಸ್ಪೆಷನ್‌ಗಳನ್ನು ಈ ಹಿಂದನಂತೆ ಮುಂದುವರಿಸಲಾಗಿದ್ದು, ಮುಂಭಾಗದ ಚಕ್ರಗಳಲ್ಲಿ ಟೆಲಿಸ್ಕೊಪಿಕ್ ಫೋರ್ಕ್ ಸಸ್ಪೆಷನ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಮೊನೊಶಾರ್ಕ್ ಸಸ್ಪೆಷನ್‌ನೊಂದಿಗೆ ಡೈಮಂಡ್ ಟೈಪ್ ಫ್ರೆಮ್ ಪಡೆದಿರಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

02. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!!

03. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

04. ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ..

05. ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

Most Read Articles

Kannada
Read more on honda ಹೋಂಡಾ
English summary
2018 Honda CB Hornet Top Features You Should Know.
Story first published: Saturday, March 31, 2018, 14:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X