ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

Written By:

ಮೂರನೇ ವ್ಯಕ್ತಿಯ ವಿಮಾ ನಿಯಮಗಳನ್ನು ಬದಲಾವಣೆ ಮಾಡುವ ಸಂಬಂಧ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರವು(ಎಆರ್‌ಡಿಎಐ) ಪ್ರಿಮಿಯಂ ದರಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಕೆಲ ಪ್ರಿಮಿಯಂ ದರಗಳನ್ನು ಇಳಿಕೆ ಮಾಡಿದ್ದಲ್ಲಿ ಮತ್ತೆ ಕೆಲವು ಪ್ರಿಮಿಯಂ ದರಗಳನ್ನು ಏರಿಕೆ ಮಾಡಿದೆ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರವು ಹೊಸದಾಗಿ ಜಾರಿ ಮಾಡುತ್ತಿರುವ ಪ್ರಿಮಿಯಂ ದರಗಳು ಇದೇ ಏಪ್ರಿಲ್ 1ರಿಂದಲೇ ಅನ್ವಯವಾಗಲಿವೆ. ಹೀಗಾಗಿ 1000ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಎಂಜಿನ್ ಹೊಂದಿರುವ ಕಾರುಗಳ ಪ್ರಿಮಿಯಂ ದರಗಳಲ್ಲಿ ಇಳಿಕೆಯಾಗಿದ್ದು, ಪ್ರಸ್ತುತ ದರಗಳನ್ನು ರೂ. 2,055ರಿಂದ ರೂ. 1,850ಕ್ಕೆ ಇಳಿಕೆ ಮಾಡಲಾಗಿದೆ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ಹಾಗೆಯೇ 75ಸಿಸಿಗಿಂತ ಕಡಿಮೆ ಎಂಜಿನ್ ಹೊಂದಿರುವ ಬೈಕ್‌ಗಳ ಪ್ರಿಮಿಯಂ ಮೊತ್ತವನ್ನು ರೂ. 569ಗಳಿಂದ ರೂ. 427ಕ್ಕೆ ಇಳಿಕೆ ಮಾಡಲಾಗಿದ್ದು, 1000ಸಿಸಿಯಿಂದ 1500ಸಿಸಿ ಎಂಜಿನ್ ಸಾಮರ್ಥ್ಯದ ನಡುವಿನ ಕಾರುಗಳ ಮಾದರಿಗಳ ಪ್ರಿಮಿಯಂ ದರಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ಈ ಹಿಂದಿನಂತೆಯೇ ರೂ. 2,863 ಪ್ರಿಮಿಯಂ ದರಗಳನ್ನೇ ಮುಂದುವರಿಸಲಾಗಿದ್ದು, 1500ಸಿಸಿಗಿಂತ ಮೇಲ್ಪಟ್ಟ ಕಾರು ಮಾದರಿಗಳ ಪ್ರಿಮಿಯಂ ಮೊತ್ತದಲ್ಲೂ ಯಾವದೇ ಬದವಾಣೆ ತರದೇ ಈ ಹಿಂದಿನಂತೆಯೇ ರೂ. 7, 890 ದರ ಹೊಂದಿರಲಿವೆ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ಇನ್ನು 75ಸಿಸಿ ಯಿಂದ 150 ಸಿಸಿ ಎಂಜಿನ್ ಹೊಂದಿರುವ ಬೈಕ್‌ಗಳ ಪ್ರಿಮಿಯಂನಲ್ಲೂ ಈ ಹಿಂದಿನಂತೆಯೇ ರೂ. 720 ದರ ಮುಂದುವರಿಸಲಾಗಿದ್ದು, 150ಸಿಸಿಯಿಂದ 350ಸಿಸಿ ಸಾಮರ್ಥ್ಯದ ಬೈಕ್‌ಗಳಿಗೆ ರೂ. 887ರಿಂದ ರೂ. 985 ಏರಿಕೆ ಮಾಡಲಾಗಿದೆ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ಜೊತೆಗೆ 350 ಮೇಲ್ಪಟ್ಟ ಮೋಟಾರ್ ಸೈಕಲ್‌ಗಳ ಪ್ರಿಮಿಯಂ ದರದಲ್ಲಿ ಭಾರೀ ಏರಿಕೆ ಮಾಡಲಾಗಿದ್ದು, ಈ ಹಿಂದೆ ಇದ್ದ ರೂ. 1019 ದರಗಳನ್ನು ರೂ.2,323ಕ್ಕೆ ಏರಿಕೆ ಮಾಡಿದ್ದಾರೆ. ಎಲ್ಲಾ ಹೊಸ ದರಗಳು ನಾಳೆಯಿಂದಲೇ(ಏ.1ರಿಂದಲೇ) ಅನ್ವಯವಾಗಲಿವೆ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ಮೋಟಾರು ವಿಮೆ

ಅನಿರೀಕ್ಷಿತವಾಗಿ ಸಂಭವಿಸಬಹುದಾದ ಅಪಘಾತ ಅಥವಾ ವಾಹನ ಕಳವು ಸಂದರ್ಭದಲ್ಲಿ ಸಂಭಾವ್ಯ ಗಾಯ, ಹಾನಿಗಳಿಗೆ ವಿಮೆ ರಕ್ಷಣೆಯನ್ನು ಒದಗಿಸುತ್ತದೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ನಮ್ಮ ದೇಶದಲ್ಲಿ ನೀವು ಕಾರು ರಸ್ತೆಗಿಳಿಸುವ ಮೊದಲಾಗಿ ಮೂರನೇ ವ್ಯಕ್ತಿ ಮೋಟಾರು ವಿಮೆ ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ಮೋಟಾರು ವಿಮಾ ಪಾಲಿಸಿಗಳ ಅವಧಿಯೆಷ್ಟು?

ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಕಾರಿಗೆ ರಕ್ಷಣೆ ಒದಗಿಸುವುದು ಅತಿ ಅಗತ್ಯವಾಗಿದೆ. ಸಾಮಾನ್ಯವಾಗಿ ಮೋಟಾರು ವಿಮೆ ಕರಾರು ಒಂದು ವರ್ಷಕ್ಕೆ ಮಾತ್ರ ಅನ್ವಯವಾಗಿರುತ್ತದೆ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ಮೋಟಾರು ವಿಮಾ ಪಾಲಿಸಿಗಳಲ್ಲಿ ಎಷ್ಟು ವಿಧ?

ಕಾರು ವಿಮಾ ಪಾಲಿಸಿಯಲ್ಲಿ ಎರಡು ವಿಧಗಳಿವೆ. ಪಾಲಿಸಿ 'ಎ' ಎಂಬುದು ಮೂರನೇ ವ್ಯಕ್ತಿ ವಿಮಾ ಹಾಗೂ ಪಾಲಿಸಿ 'ಬಿ' ಎಂಬುದು ಸಮಗ್ರ ಪಾಲಿಸಿಯಾಗಿದೆ. ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ. ಎರಡನೇಯದ್ದಲ್ಲಿ ವಾಹನಕ್ಕಾಗುವ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ಸಮಗ್ರ ಮೋಟಾರ್ ವಿಮಾ ನೀತಿ ಎಂದರೇನು?

ಸಮಗ್ರ ವಾಹನ ವಿಮೆಯು ಮೂರನೇ ವ್ಯಕ್ತಿ ಪಾಲಿಸಿಗಿಂತ ತುಂಬಾ ವಿಭಿನ್ನವಾಗಿದ್ದು, ವಾಹನಕ್ಕಾಗುವ ಎಲ್ಲ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ. ಇದರಲ್ಲಿ ಥರ್ಡ್ ಪಾರ್ಟಿ ಜತೆಗೆ ಬೆಂಕಿ, ಅಪಘಾತ, ಕಳವು, ಪ್ರವಾಹ, ಭೂಕಂಪ, ಗಲಭೆ ಇತ್ಯಾದಿ ಅನಿಷ್ಟಗಳಿಂದಾಗಿ ವಾಹನಕ್ಕಾಗುವ ನಷ್ಟಗಳ ಜತೆಗೆ ಸಹ ಪ್ರಯಾಣಿಕ ಸೇರಿದಂತೆ ಮಾಲಿಕರಿಗಾಗುವ ನಷ್ಟವನ್ನು ಭರಿಸುತ್ತದೆ.

ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

ಸಮಗ್ರ ವಿಮೆಯಲ್ಲಿ ಮ್ಯೂಸಿಕ್ ಸಿಸ್ಟಂ, ಎಸಿ ಮುಂತಾದ ಕಾರು ಆಕ್ಸೆಸರಿಗಳಿಗೂ ವಿಮೆ ದೊರಕುತ್ತವೆ. ಇದಕ್ಕಾಗಿ ಹೆಚ್ಚುವರಿ ವಿಮೆ ಭರಿಸಬೇಕಾಗುತ್ತದೆ. ಒಟ್ಟಿನಲ್ಲಿ ಇದು ದುಬಾರಿ ಎನಿಸಿಕೊಂಡರೂ ಸಮಗ್ರ ವಿಮೆ ಮಾಡಿಸಿದರೆ ಉತ್ತಮ.

Read more on auto insurance
English summary
IRDAI Reduces Third-Party Insurance Premiums.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark