ರಾಯಲ್ ಎನ್‌ಫೀಲ್ಡ್‌ನಲ್ಲಿ ಅರಳಿದ ಬಾಬರ್ 500 ಕ್ಲಾಸಿಕ್ ಬೈಕ್...
ಬಾಬರ್ 500 ಬೈಕ್ ಮಾದರಿಯನ್ನು ಕೆಆರ್ ಕಸ್ಟಮ್ಸ್ ಎನ್ನುವ ಮಾಡಿಫೈ ಸಂಸ್ಥೆಯೊಂದು ರಾಯಲ್ ಎನ್‌ಫೀಲ್ಡ್‌ನೊಂದಿಗೆ ಹೊಸ ರೂಪ ನೀಡಿರುವುದು ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.
ದುಬಾರಿ ಬೆಲೆಯ ಕ್ಲಾಸಿಕ್ ಬೈಕ್‌ಗಳಲ್ಲಿ ಟ್ರಯಂಫ್ ಸಂಸ್ಥೆಯ ಬಾಬರ್ 500 ಆವೃತ್ತಿಯು ಅತಿಹೆಚ್ಚು ಬೇಡಿಕೆಯನ್ನು ಹೊಂದಿದ್ದು, ಈ ಹಿನ್ನೆಲೆ ಬಾಬರ್ 500 ಬೈಕ್ ಮಾದರಿಯನ್ನು ಕೆಆರ್ ಕಸ್ಟಮ್ಸ್ ಎನ್ನುವ ಮಾಡಿಫೈ ಸಂಸ್ಥೆಯೊಂದು ರಾಯಲ್ ಎನ್‌ಫೀಲ್ಡ್‌ನೊಂದಿಗೆ ಹೊಸ ರೂಪ ನೀಡಿರುವುದು ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಚೆನ್ನೈ ಮೂಲದ ಕೆಆರ್ ಕಸ್ಟಮ್ಸ್ ಮಾಡಿಫೈ ವಿನ್ಯಾಸಕರು ಬಾಬರ್ 500 ವಿಶೇಷ ಆವೃತ್ತಿಯನ್ನು ಮಾಡಿಫೈಗೊಳಿಸಿದ್ದು, ಆಪ್ ರೋಡಿಂಗ್ ಪ್ರಿಯರಿಗಾಗಿ ರಾಯಲ್ ಎನ್‌ಫೀಲ್ಡ್ 500 ಸಿಸಿ ಕ್ಲಾಸಿಕ್ ಮಾದರಿಗೆ ಬಾಬರ್ 500 ಟಚ್ ನೀಡಿದ್ದಾರೆ.

ಇನ್ನೊಂದು ಪ್ರಮುಖ ವಿಚಾರವೆಂದರೇ ಬೈಕ್ ಮಾಡಿಫೈಗಳಿಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳೇ ಹೆಚ್ಚು ಸೂಕ್ತವಾಗಿದ್ದು, ಹಲವಾರು ಸೂಪರ್ ಬೈಕ್ ಮಾದರಿಗಳನ್ನು ಎನ್‌ಫೀಲ್ಡ್ ಆವೃತ್ತಿಯಲ್ಲಿ ಮಾಡಿಫೈಗೊಳಿಸಲು ಸುಲಭವಾಗಿವೆ.

ಇದೇ ಕಾರಣಕ್ಕೆ ಮಾಡಿಫೈ ವಿನ್ಯಾಸಕಾರರು ರಾಯಲ್ ಎನ್‌ಫೀಲ್ಡ್ ಬೈಕ್ ಆವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವಾಗಿದ್ದು, ಬಾಬರ್ 500 ಮಾದರಿಯ ಹ್ಯಾಂಡಲ್ ಮತ್ತು ಸೀಟುಗಳ ವಿಭಾಗದಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ.

ಹೊಸ ಬೈಕ್‌ಗೆ ಕಸ್ಟಮ್ ಬಾಬರ್ 500 ಕ್ಲಾಸಿಕ್ ಎಂದು ನಾಮಕರಣ ಮಾಡಲಾಗಿದ್ದು, ಮೂಲ ಬೈಕ್‌ನಲ್ಲಿದ್ದ ಎಲ್ಲಾ ಸೌಲಭ್ಯಗಳನ್ನು ಮಾಡಿಫೈ ಮಾದರಿಯಲ್ಲೂ ಮುಂದುವರಿಸಲಾಗಿದೆ.

ಇನ್ನು ಹೊಸ ಮಾಡಿಫೈ ಬೈಕಿನಲ್ಲಿ ಬ್ಲ್ಯಾಕ್ ಮತ್ತು ವೈಟ್ ಬಣ್ಣಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗಿದ್ದು, ಅಲಾಯ್ ಚಕ್ರಗಳು, ಎಬಿಎಸ್, ವಿಶೇಷ ವಿನ್ಯಾಸದ ಎಕ್ಸಾಸ್ಟ್, ಹೆಡ್‌ಲ್ಯಾಂಪ್ ಮತ್ತು ಇನ್ಟ್ರುಮೆಂಟಲ್ ಕ್ರಸ್ಟರ್ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ಇನ್ನು ಬಾಬರ್ 500 ಮಾಡಿಫೈ ಎಂಜಿನ್ ವಿಭಾಗದ ಸಾಮರ್ಥ್ಯವನ್ನು ಕಡಿತಗೊಳಿಸಿರುವ ವಿನ್ಯಾಸಗಾರರು, ಹೊಸ ಬೈಕ್‌ನಲ್ಲಿ 489-ಸಿಸಿ ಎಂಜಿನ್ ಒದಗಿಸಿದ್ದಾರೆ. ಜೊತೆಗೆ ವಿಶೇಷವಾದ ಟೈರ್ ಬಳಕೆ ಮತ್ತು ಎಕ್ಸಾಸ್ಟ್ ವಿನ್ಯಾಸವು ಕಸ್ಟಮ್ ಬೈಕಿಗೆ ಹೊಸ ಲುಕ್ ನೀಡಿವೆ ಎನ್ನಬಹುದು.

ಒಂದು ವೇಳೆ ನೀವು ಕೂಡಾ ನಿಮ್ಮ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬೈಕ್‌ಗಳನ್ನು ಬಾಬರ್ 500ಗೆ ಬದಲಾಯಿಸಿಕೊಳ್ಳುವ ಆಸಕ್ತಿ ಇದ್ದಲ್ಲಿ ಕೆಆರ್ ಕಸ್ಟಮ್ಸ್ ಮಾಡಿಫೈ ವಿನ್ಯಾಸಗಾರರನ್ನು ಸಂಪರ್ಕಿಸಬಹುದು.
Trending On DriveSpark Kannada:
ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?
ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!
ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್


Click it and Unblock the Notifications








