ಕೇಂದ್ರ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಸೌಲಭ್ಯ ಹೊಂದಲಿವೆ ಆರ್‌ಇ ಬೈಕ್‌ಗಳು..

ಕೇಂದ್ರ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಸೌಲಭ್ಯ ಹೊಂದಲಿವೆ ಆರ್‌ಇ ಬೈಕ್‌ಗಳು..

By Praveen Sannamani

ಕಳೆದ ಏಪ್ರಿಲ್ ಮೊದಲ ವಾರದಿಂದಲೇ 125 ಸಿಸಿ ಮೇಲ್ಪಟ್ಟ ಬೈಕ್‌ ಮಾದರಿಗಳಿಗೆ ಕೆಲವು ಕಡ್ಡಾಯ ಸುರಕ್ಷಾ ಕ್ರಮಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರವು ಹೊಸ ಆದೇಶವನ್ನು ಜಾರಿತರಲಾಗಿದ್ದು, ಈ ಹಿನ್ನೆಲೆ ಮಾರುಕಟ್ಟೆಯಲ್ಲಿ ಖರೀದಿಗೆ ಸಿದ್ದವಾಗಿರುವ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಕೆಲವು ಕಡ್ಡಾಯ ಸುರಕ್ಷಾ ಕ್ರಮಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿವೆ.

ಕೇಂದ್ರ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಸೌಲಭ್ಯ ಹೊಂದಲಿವೆ ಆರ್‌ಇ ಬೈಕ್‌ಗಳು..

ವರದಿಗಳ ಪ್ರಕಾರ, ಯುಎಸ್ಎ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕ್ಲಾಸಿಕ್ ಬೈಕ್ ಮಾದರಿಗಳಲ್ಲಿ ಕಡ್ಡಾಯವಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅಳವಡಿಸಲಾಗಿದ್ದು, ಅದೇ ಮಾದರಿಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 350ಸಿಸಿ ಮತ್ತು 500ಸಿಸಿ ಬೈಕ್ ಮಾದರಿಗಳು ಎಬಿಎಸ್ ಸೌಲಭ್ಯ ಅಳವಡಿಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಸೌಲಭ್ಯ ಹೊಂದಲಿವೆ ಆರ್‌ಇ ಬೈಕ್‌ಗಳು..

ಇದರಲ್ಲಿ 350ಸಿಸಿ ಬೈಕ್ ಮಾದರಿಗಳಿಗೆ ಸಿಂಗಲ್ ಚಾನೆಲ್ ಎಬಿಎಸ್ ಮತ್ತು 500ಸಿಸಿ ಬೈಕ್‌ಗಳಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅಳವಡಿಸುವ ಸಾಧ್ಯತೆಗಳಿದ್ದು, ಹೊಸ ಸುರಕ್ಷಾ ಸೌಲಭ್ಯ ಅಳವಡಿಕೆಯಿಂದಾಗಿ ಬೈಕ್ ಬೆಲೆ ಏರಿಕೆ ಮಾಡಿಕೆ ಮಾಡಬೇಕೆ ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಸೌಲಭ್ಯ ಹೊಂದಲಿವೆ ಆರ್‌ಇ ಬೈಕ್‌ಗಳು..

ಒಂದು ವೇಳೆ ಎಬಿಎಸ್ ಅಳವಡಿಕೆ ಹಿನ್ನೆಲೆ ಬೆಲೆ ಹೆಚ್ಚಳ ಮಾಡಿದ್ದಲ್ಲಿ ಬೈಕ್ ಮಾರಾಟ ಪ್ರಕ್ರಿಯೆ ಹಿನ್ನಡೆಯಾಗುತ್ತೆ ಎಂಬ ಮಾರುಕಟ್ಟೆ ವಿಶ್ಲೇಷಣೆಗೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಚಿಂತನೆ ನಡೆಸಿದ್ದು, ಪ್ರಸ್ತುತ ಬೆಲೆಗಳನ್ನೇ ಮುಂದುವರಿಸಿ ಎಬಿಎಸ್ ಸೌಲಭ್ಯ ನೀಡಿದ್ದಲ್ಲಿ ಅಧಿಕ ಮಟ್ಟದ ಗ್ರಾಹಕರನ್ನು ಸೆಳೆಯಲು ಸಹಕಾರಿಯಾಗುತ್ತೆ ಎನ್ನುವ ಬಗ್ಗೆಯೂ ವಿಶ್ಲೇಷಣೆ ಕೈಗೊಂಡಿದೆ.

ಕೇಂದ್ರ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಸೌಲಭ್ಯ ಹೊಂದಲಿವೆ ಆರ್‌ಇ ಬೈಕ್‌ಗಳು..

ಒಟ್ಟಿನಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕ್‌ಗಳಲ್ಲಿ ಎಬಿಎಸ್ ಸೌಲಭ್ಯ ಅಳವಡಿಸಿದ್ದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಸಹಕಾರಿಯಾಗಲಿದ್ದು, ಬೈಕ್ ಬೆಲೆಗಳನ್ನು ಹೆಚ್ಚಿಸದೇ ಹೊಸ ಸೌಲಭ್ಯ ಒದಗಿಸಿದ್ದಲ್ಲಿ ಇದು ಮತ್ತಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದು.

ಕೇಂದ್ರ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಸೌಲಭ್ಯ ಹೊಂದಲಿವೆ ಆರ್‌ಇ ಬೈಕ್‌ಗಳು..

ಇನ್ನು ದೇಶಿಯ ಮಾರುಕಟ್ಟೆಗಾಗಿ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮೋಟರ್ ಸೈಕಲ್‌ಗಳನ್ನು ಅಭಿವೃದ್ಧಿಗೊಳಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಹೊಸ ಬೈಕ್‌ಗಳನ್ನು ಮುಂಬರುವ ಜುಲೈ ಅಂತ್ಯಕ್ಕೆ ಇಲ್ಲವೇ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಕೇಂದ್ರ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಸೌಲಭ್ಯ ಹೊಂದಲಿವೆ ಆರ್‌ಇ ಬೈಕ್‌ಗಳು..

ಈ ಮಧ್ಯೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಡೀಲರ್ಸ್ ಯಾರ್ಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಹೊಸ ಬೈಕ್‌ಗಳನ್ನು ಡ್ಯುಯಲ್ ಟೋನ್ ಬಣ್ಣದೊಂದಿಗೆ ಪ್ರಿಮಿಯಂ ಟಚ್ ನೀಡಲಾಗಿದೆ. ಹೀಗಾಗಿ ಇದೇ ಮಾದರಿಗಳು ಭಾರತದಲ್ಲೂ ಕೂಡಾ ಬಿಡುಗಡೆಯಾಗಲಿವೆ.

ಕೇಂದ್ರ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಸೌಲಭ್ಯ ಹೊಂದಲಿವೆ ಆರ್‌ಇ ಬೈಕ್‌ಗಳು..

ರೆಡ್ ಆ್ಯಂಡ್ ವೈಟ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಅಭಿವೃದ್ಧಿಯಾಗಿರುವ ಇಂಟರ್‌ಸೆಪ್ಟರ್ 650 ಮತ್ತು ಸ್ಟೋರ್ಟಿ ಬ್ಲ್ಯಾಕ್ ಬಣ್ಣದಲ್ಲಿ ಸಿದ್ದವಾಗಿರುವ ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿವೆ.

ಕೇಂದ್ರ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಸೌಲಭ್ಯ ಹೊಂದಲಿವೆ ಆರ್‌ಇ ಬೈಕ್‌ಗಳು..

ಹೀಗಾಗಿ ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದಲ್ಲಿ ಟೆಲಿಸ್ಕೊಫಿಕ್ ಫೋರ್ಕ್ ಅಪ್, ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಜರ್ಸ್, ಎಬಿಎಸ್, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಒದಗಿಸಲಾಗಿದೆ. ಈ ಮೂಲಕ ಗಂಟೆಗೆ 170ಕಿಮಿ ಟಾಪ್ ಸ್ಪೀಡ್ ಪಡೆದುಕೊಂಡಿವೆ.

Most Read Articles

Kannada
Read more on royal enfield
English summary
Royal enfield classic bikes gets abs as standard in USA; India next.
Story first published: Tuesday, June 5, 2018, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X