ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಎಡಿಷನ್ ಬೈಕ್ ಮಾರಾಟದಲ್ಲಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿರುವುದು ಬಹುತೇಕ ಆರ್‌ಇ ಪ್ರಿಯರಿಗೆ ಗೊತ್ತಿರುವ ವಿಚಾರ. ಪೆಗಾಸಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಆರ್‌ಇ ಸಂಸ್ಥೆಯು ಮಹತ್ವದ ನಿರ್ಧಾರಕ್ಕೆ ಬಂದಿದೆ.

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ಕಳೆದ ತಿಂಗಳ ಹಿಂದಷ್ಟೇ ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಬೈಕ್ ಮಾದರಿಗಳು ಮಾರಾಟಕ್ಕಿವೆ ಎಂದಿದ್ದೆ ತಡ, ಮುಗಿಬಿದ್ದು ಹೊಸ ಬೈಕ್ ಖರೀದಿ ಮಾಡಿದ್ದ ಗ್ರಾಹಕರು ಯಾಕಾದ್ರು ಆ ಹೊಸ ಬೈಕ್ ಅನ್ನು ಖರೀದಿ ಮಾಡಿದೆವೋ ಎನ್ನುವಂತಹ ಪರಿಸ್ಥಿತಿಗೆ ಸಿಲುಕಿದ್ದರು. ಇದಕ್ಕೆ ಕಾರಣ, ಕೆಳೆದ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಮೊತ್ತೊಂದು ಹೊಸ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದು.

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ನಡೆ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದ ಕ್ಲಾಸಿಕ್ 500 ಪೆಗಾಸಸ್ ಬೈಕ್ ಮಾಲೀಕರು ಹೊಸ ಬೈಕ್ ಸುರಕ್ಷಾ ಸೌಲಭ್ಯ ವಿಚಾರದಲ್ಲಿ ಮೋಸದ ವ್ಯಾಪಾರ ನಡೆದಿದೆ ಅಂತಾ ಪ್ರತಿಭಟನೆ ನಡೆಸಿದ್ದಲ್ಲದೇ ತಮಗಾದ ಮೋಸವನ್ನು ಸರಿಪಡಿಸುವಂತೆ ಪಟ್ಟುಹಿಡಿದ್ದರು.

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ದುಬಾರಿ ಬೆಲೆ ತೆತ್ತು ಹೊಸ ಬೈಕ್ ಖರೀದಿ ಮಾಡಿದ್ರು ಬೈಕಿನಲ್ಲಿರುವ ಸುರಕ್ಷಾ ಸೌಲಭ್ಯಗಳ ವಿಚಾರದಲ್ಲಿ ಆರ್‌ಇ ವರ್ತನೆಯು ಹಲವು ಅನುಮಾನಗಳಿಗೆ ಕಾರಣವಾಗಿದ್ದಲ್ಲದೆ, ಹೊಸ ಬೈಕಿನಲ್ಲಿ ನೀಡಲಾಗುವ ಕೆಲವು ಸುರಕ್ಷಾ ಸೌಲಭ್ಯಗಳನ್ನು ಒದಗಿಸುವಲ್ಲಿ ಅಸಡ್ಡೆ ತೊರಿದೆ ಎನ್ನುವುದು ಗ್ರಾಹಕರು ಅವಲತ್ತುಕೊಂಡಿದ್ದರು.

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ಇದಕ್ಕೆ ಕಾರಣ, ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಬಿಡುಗಡೆ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕಿನಲ್ಲಿ ಎಬಿಎಸ್ ಸೇರಿದಂತೆ ಕೆಲವು ಹೊಸ ಸೌಲಭ್ಯಗಳನ್ನು ನೀಡಿದ್ದು, ಅದೇ ದುಬಾರಿ ಬೆಲೆಯ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳಲ್ಲಿ ಈ ಸೌಲಭ್ಯವನ್ನು ನೀಡಿಲ್ಲ ಎನ್ನವುದೇ ಪೆಗಾಸಸ್ ಮಾಲೀಕರ ಆಕ್ರೋಶವನ್ನು ಹೆಚ್ಚಿಸುವಂತೆ ಮಾಡಿತ್ತು.

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ಇದರಿಂದ ಕೆರಳಿದ ಕೆಲವು ಪೆಗಾಸಸ್ ಬೈಕ್ ಮಾಲೀಕರು ಕ್ಲಾಸಿಕ್ ಸಿಗ್ನಲ್ಸ್ 350 ಬೈಕಿನಲ್ಲಿರುವ ಸೌಲಭ್ಯಗಳು ನಮಗೆ ಯಾಕಿಲ್ಲ ಅಂತಾ ಲಿಖಿತ ದೂರು ನೀಡಿದಲ್ಲದೆ, ಎಬಿಎಸ್ ಸೌಲಭ್ಯವನ್ನು ನೀಡಿ ಇಲ್ಲವಾದ್ರೆ ನಿಮ್ಮ ಹೊಸ ಬೈಕ್ ವಾಪಸ್ ಪಡೆದು ಹಣ ಮರಳಿಸಿ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ಇನ್ನು ಕೆಲವು ಬೈಕ್ ಮಾಲೀಕರು ಹೊಸ ಪೆಗಾಸಸ್ ಬೈಕ್‌ಗಳನ್ನು ಕಸದ ರಾಶಿಗೆ ಹಾಕಿ ಪ್ರತಿಭಟಿಸಿದ್ದಲ್ಲದೆ ಕ್ಲಾಸಿಕ್ 350 ಸಿಗ್ನಲ್ಸ್ ಬೈಕಿನಲ್ಲಿ ನೀಡಲಾಗಿರುವ ಸೌಲಭ್ಯವನ್ನು ನಮಗೂ ನೀಡುವಂತೆ ಪಟ್ಟು ಹಿಡಿದಿದ್ದರು. ಇದಕ್ಕೆ ಮಣಿದಿರುವ ಆರ್‌ಇ ಸಂಸ್ಥೆಯು ಕೊನೆಗೂ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ಹೊಸ ಬೈಕ್ ವಾಪಸ್ ಪಡೆಯಲಿದೆ ಆರ್‌ಇ!

ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಂಡ್ ಇಮೇಜ್ ಹಾಳಾಗುತ್ತಿರುವುದನ್ನು ಕಂಡು ಹೊಸ ಪ್ಲ್ಯಾನ್ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅಸಮಾಧಾನ ಹೊಂದಿರುವ ಪೆಗಾಸಸ್ ಮಾಲೀಕರಿಂದ ಹೊಸ ಬೈಕ್‌ಗಳನ್ನು ವಾಪಸ್ ಪಡೆಯಲು ಮುಂದಾಗಿದೆ.

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ಬೈಕ್ ಸ್ಥಿತಿಗತಿ ಅನುಗುಣವಾಗಿ ಹಣ ವಾಪಸ್ ಮಾಡಲಿದ್ದು, ಅದೇ ಬೈಕ್‌ಗಳನ್ನು ತನ್ನ ನೆಚ್ಚಿನ ಗ್ರಾಹಕರಿಗೆ ಮರು ಮಾರಾಟ ನಿರ್ಧರಿಸಿದೆ. ಇಲ್ಲವಾದ್ರೆ ಅದೇ ಬೈಕಿನಲ್ಲಿ ಎಬಿಎಸ್ ಸೌಲಭ್ಯವನ್ನು ಅಳವಡಿಸಿಕೊಡಲಾಗುವುದು ಎಂಬ ಭರವಸೆ ನೀಡುತ್ತಿದೆ.

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ಈ ಮೂಲಕ ಬ್ರಾಂಡ್ ಇಮೇಜ್‌ಗೆ ಧಕ್ಕೆ ತರುತ್ತಿರುವ ಗ್ರಾಹಕರನ್ನು ಸುಮ್ಮನಾಗಿಸಲು ಯತ್ನಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪೆಗಾಸಸ್ ಬೈಕ್ ಮಾಲೀಕರಿಗೆ ಹೊಸ ಆಫರ್ ನೀಡುತ್ತಿದ್ದು, ಈ ಕೆಲಸವನ್ನು ಮೊದಲೇ ಮಾಡಿದ್ದರೇ ಇಷ್ಟೆೇಲ್ಲಾ ರಗಳೆಯೇ ಆಗುತ್ತಿರಲಿಲ್ಲಾ ಎನ್ನಬಹುದು.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ಈ ಹಿಂದೆಯೇ ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಉತ್ಪನ್ನಗಳ ಗುಣಮಟ್ಟ ಆಧಾರದ ಮೇಲೆ ಬೆಲೆ ನಿಗದಿಪಡಿಸಿ ಸೌಲಭ್ಯವನ್ನು ನೀಡಲಾಗಿದ್ದು, ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆಯಲ್ಲಿ ಅರ್ಥವೇ ಇಲ್ಲ ಎಂದಿತ್ತು. ಆದ್ರೆ ಇದೀಗ ಗ್ರಾಹಕರು ಆಕ್ರೋಶ ಕಂಡು ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪೆಗಾಸಸ್ ಬೈಕ್‌ಗಳಿಗೆ ಅಗತ್ಯ ಸೌಲಭ್ಯದ ಭರವಸೆ ನೀಡುತ್ತಿದೆ.

ಪೆಗಾಸಸ್ ಬೈಕ್ ವಿಚಾರದಲ್ಲಿ ಕೆಟ್ಟ ಮೇಲೆ ಬುದ್ದಿ ಕಲಿತ ರಾಯಲ್ ಎನ್‌ಫೀಲ್ಡ್

ಹೀಗಾಗಿಯೇ ಕ್ಲಾಸಿಕ್ ಮೋಟಾರ್ ಸೈಕಲ್ ಪ್ರೇಮಿಗಳ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಲವು ವಿಶೇಷತೆಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರೂ, ಕೆಲವು ನ್ಯೂನತೆಗಳಿಂದಾಗಿ ಬೈಕ್ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಬಹುದು.

Most Read Articles

ಹೊಸದಾಗಿ ಬಿಡುಗಡೆ ಮಾಡಲಾಗಿರುವ ಕ್ಲಾಸಿಕ್ 350 ಸಿಗ್ನಲ್ಸ್ ಬೈಕ್ ಮಾದದರಿಯ ಎಬಿಎಸ್‌ನೊಂದಿಗೆ ಮಾರಾಟವಾಗುತ್ತಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1.62 ಲಕ್ಷ ಬೆಲೆ ಮಾರಾಟವಾಗುತ್ತಿದೆ. ಬೈಕಿನ ಮತ್ತಷ್ಟು ಚಿತ್ರಗಳನ್ನು ನೀವಿಲ್ಲಿ ನೋಡಬಹುದು.

Kannada
English summary
Royal Enfield Pegasus 500 Models To Be Bought Back Or Exchanged: Dealerships Contact Owners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X