ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದೆ. ಇದೇ ಕಾರಣಕ್ಕೆ ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಪರಿಚಯಿಸಲು ಮುಂದಾಗಿದೆ.

By Praveen

ದೇಶಿಯ ಮಾರುಕಟ್ಟೆಯಲ್ಲಿ ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದೆ. ಇದೇ ಕಾರಣಕ್ಕೆ ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಪರಿಚಯಿಸಲು ಮುಂದಾಗಿದೆ.

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಈ ಬಗ್ಗೆ 2018ರ ಆಟೋ ಎಕ್ಸ್ ಪೋ ಹೊಸ ಸ್ಕೂಟರ್ ಬಗೆಗೆ ಎಕ್ಸ್‌ಕ್ಲೂ‌ಸಿವ್ ಮಾಹಿತಿ ಬಹಿರಂಗಗೊಳಿಸಿರುವ ಸುಜುಕಿ ಸಂಸ್ಥೆಯು ಹೊಸ ಸ್ಕೂಟರ್ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿನ 125 ಸಿಸಿ ಇತರೆ ಸ್ಕೂಟರ್ ಮಾದರಿಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗುವ ಮುನ್ಸೂಚಣೆ ನೀಡಿದೆ.

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಈ ಹಿಂದೆ 150 ಸಿಸಿ ಸಾಮರ್ಥ್ಯದ ಇನ್‌ಟ್ರುಡರ್ 150 ಕ್ರೂಸರ್ ಬೈಕ್ ಪರಿಚಯಿಸಿದ್ದ ಸುಜುಕಿ ಮೋಟಾರ್ ಸೈಕಲ್ ವಿಭಾಗವು ಇದೀಗ ಎಪ್ರಿಲಿಯಾ 125 ಮತ್ತು ವೆಸ್ಪಾ 150 ಮಾದರಿಗಳನ್ನು ಹೋಲುವ ಬರ್ಗಮನ್ ಸ್ಟ್ರೀಟ್ ಎನ್ನುವ ಹೊಸ ನಮೂನೆಯ ಪ್ರಿಮಿಯಂ ಸ್ಕೂಟರ್ ಅನಾವರಣಗೊಳಿಸಿದೆ.

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಆದರೆ ಭಾರತದಲ್ಲಿ ಬಿಡುಗಡೆಗಾಗಿ ಸಿದ್ಧಗೊಳಿಸಲಾಗಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು ಕೇವಲ 125ಸಿಸಿ ಆವೃತ್ತಿಗಳು ಮಾತ್ರ ಲಭ್ಯವಾಗಲಿದ್ದು, ಪ್ರಸ್ತುತ ಆಕ್ಸೆಸ್ 125ಗಿಂತಲೂ ಹೆಚ್ಚಿನ ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ.

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್, ಟೆಲಿ ಸ್ಕೊಪಿಕ್ ಫೋರ್ಕ್, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ದೊಡ್ಡದಾದ ರೈಡರ್ ಸೀಟ್, 12ವಿ ಚಾರ್ಜಿಂಗ್ ಪಾಯಿಂಟ್, ಟ್ಯೂಬ್ ಟೈರ್ಸ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿರಲಿದೆ.

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಹೀಗಾಗಿ ಸುಜುಕಿ ಪರಿಚಯಿಸುತ್ತಿರುವ ಬರ್ಗಮನ್ ಸ್ಟ್ರೀಟ್ ಹೊಸ ಸ್ಕೂಟರ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಸ್ಕೂಟರ್ ಬೆಲೆಗಳು ಕೂಡಾ ಇತರೆ ಸ್ಕೂಟರ್‌ಗಳಿಗೆ ಟಕ್ಕರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಎಂಜಿನ್ ವೈಶಿಷ್ಟ್ಯತೆ

ಮೇಲೆ ಹೇಳಿದಂತೆ ಆಕ್ಸೆಸ್ 125 ಸ್ಕೂಟರ್‌ಗೆ ಸಮನಾಗಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು 124ಸಿಸಿ ಎಂಜಿನ್ ಮೂಲಕ 8.6 ಬಿಎಚ್‌ಪಿ ಮತ್ತು 10.2 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಗುಣಹೊಂದಿದ್ದು, ಸಿವಿಟಿ ಗೇರ್‌ಬಾಕ್ಸ್ ಹೊಂದಿರಲಿವೆ.

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಇದರ ಜೊತೆಗೆ 12 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿರುವ ಹೊಸ ಸುಜುಕಿ ಸ್ಕೂಟರ್‌ಗಳು ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ರಚಿಸಲಾಗಿದ್ದು, ಡಿಸ್ಕ್ ಬ್ರೇಕ್ ಹಾಗೂ ಎಬಿಎಸ್ ಆಯ್ಕೆ ಕೂಡಾ ದೊರೆಯಲಿದೆ.

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಬಿಡುಗಡೆ ಯಾವಾಗ?

ಸುಜುಕಿ ಸಂಸ್ಥೆಯು ಹೊಸ ಸ್ಕೂಟರ್ ಮಾದರಿಗಳನ್ನು ಏಪ್ರಿಲ್ ಅಥವಾ ಮೇ ಅಂತ್ಯಕ್ಕೆ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಪ್ರಿಮಿಯಂ ಸ್ಕೂಟರ್ ಆವೃತ್ತಿಗಳಲ್ಲೇ ಈ ಸ್ಕೂಟರ್ ಮಾದರಿಯು ವಿಶೇಷ ಗುಣಲಕ್ಷಣಗಳನ್ನು ಹೊಂದಿರಲಿದೆ.

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಬೆಲೆ (ಅಂದಾಜು)

ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳ ಬೆಲೆಯು ರೂ.65 ಸಾವಿರದಿಂದ ರೂ.70 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಬಿಡುಗಡೆ ನಂತರವಷ್ಟೇ ನಿಖರ ಮಾಹಿತಿ ದೊರೆಯಲಿದೆ.

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ಇತರೆ ಸ್ಕೂಟರ್‌ಗಳಿಂತ ಹೇಗೆ ಭಿನ್ನ?

ಹೌದು.. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ 125 ಸಿಸಿ ಸಾಮರ್ಥ್ಯದ ಸ್ಕೂಟರ್ ಮಾದರಿಗಳಿದ್ದು, ಬರ್ಗಮನ್ ಸ್ಟ್ರೀಟ್ ಇತರೆ ಮಾದರಿಗಳಿಂತ ಸಾಕಷ್ಟು ವಿಭಿನ್ನವಾಗಿದೆ. ಇದಕ್ಕೆ ಕಾರಣ ಈ ಹಿಂದೆ ಬಿಡುಗಡೆಯಾಗಿದ್ದ ಇನ್‌ಟ್ರುಡರ್ 150 ಮಾದರಿಯಲ್ಲೇ ಕ್ರೂಸರ್ ವೈಶಿಷ್ಟ್ಯತೆಯನ್ನು ಸಹ ಪಡೆದುಕೊಂಡಿದೆ.

Most Read Articles

Kannada
Read more on suzuki scooter review
English summary
Suzuki Burgman Street First Look Review.
Story first published: Tuesday, February 13, 2018, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X