ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

Written By: Rahul TS

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತನ್ನ ಹೊಸ ಆರ್15 ವಿ3.0 ಬೈಕ್ ಅನ್ನು 2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡುಗಡೆಗೊಳಿಸಿದ್ದು, ಮೂರನೇ ತಲೆಮಾರಿನ ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದೆ.

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಆರ್ 15 ವಿ3.0 ಬೈಕ್ ಆರ್ 15 ವಿ2.0 ಬೈಕಿನ ಮುಂದುವರಿದ ಬೈಕ್ ಮಾದರಿಯಾಗಿದ್ದು, ತಾಂತ್ರಿಕಯಾಗಿ ಮತ್ತು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿದೆ. ಈ ಹಿನ್ನೆಲೆ ಈ ಹಿಂದಿನ ಆರ್15 ವಿ2.0 ಬೈಕ್ ಮತ್ತು ಹೊಸ ಆರ್15 ವಿ 3.0 ಬೈಕಿನ ನಡುವಿನ ವ್ಯತ್ಯಾಸದ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಒಟ್ಟಾರೆ ವಿನ್ಯಾಸ

ಯಮಹಾ ಆರ್15 ವಿ3.0 ಶಾರ್ಪ್ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಹೊಂದಿದ್ದು, ಆಧುನಿಕ ವೈಶಿಷ್ಟ್ಯತೆಗಳಾದ ಸ್ಪ್ಲಿಟ್-ಎಲ್ಇಡಿ ಹೆಡ್‍ಲ್ಯಾಂಪ್ ಮತ್ತು ಪುರುತ್ತಾನಗೊಳಿಸಿದ ವಿಂಡ್‍ಸ್ಕ್ರೀನ್ ಅನ್ನು ಪಡೆದಿದೆ. ಸುಗಮಕಾರಕ ವಿನ್ಯಾಸ ಮತ್ತು ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಬೈಕಿನ ರೂಪವನ್ನು ಇನ್ನಷ್ಟು ಹೆಚ್ಚಿಸಿದೆ.

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಬೈಕಿನ ಟೈಲ್ ಸೆಕ್ಷೆನ್ ಹೊಸ ಎಲ್ಇಡಿ ಟೈಲ್‍ಲೈಟ್, ಟಾಪರ್ಡ್ ರಿರ್ ಕೌಲ್, ಸಣ್ಣದಾದ ರಿರ್ ಟೈರ್ ಹಗ್ಗರ್ ಮತ್ತು ಟೈಲ್-ಟೈಡಿ ವಿನ್ಯಾಸವನ್ನು ಹೊಂದಿದ್ದು, ಇದರ ಸೈಡ್ ಪ್ಯಾನಲ್, ಪ್ರೇಮ್ ಮತ್ತು ಹೊಸ ಎಕ್ಸಾಸ್ಟ್ ಮಫ್ಲರ್ ಹೊಂದಿರುವುದು ವಿಶೇಷವಾಗಿದೆ. ಒಟ್ಟಾರೆ ಹೊಸ ಆರ್15 ವಿ 3.0 ಬೈಕ್ ಯುವ ಸಮುದಾಯವನ್ನು ತನ್ನತ್ತ ಸೆಳೆಯುವ ವಿನ್ಯಾಸವನ್ನು ಪಡೆದಿದೆ.

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಯಮಹಾ ಆರ್15 ವಿ2.0 ಬೈಕ್ ಕೂಡಾ ಡ್ಯುಯಲ್ ಹೆಡ್‍ಲ್ಯಾಂಪ್ ಆಧರಿಸಿದ ಶಾರ್ಪ್ ಡಿಸೈನ್ ಪಡೆದಿದ್ದು, ಇದರ ಒಟ್ಟಾರೆ ವಿನ್ಯಾಸವು ಆರ್15 ವಿ3.0 ಮಾದರಿಯ ಹೋಲಿಕೆಯೊಂದಿಗೆ ವಿಶೇಷವಾದ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿದೆ.

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ರಿರ್ ವಿಭಾಗವು ಎಲ್ಇಡಿ ಟೈಲ್‍ಲ್ಯಾಂಪ್, ನಂಬರ್ ಪ್ಲೇಟ್ ಹೋಲ್ಡರ್ ಜಾಗದಲ್ಲಿ ಟೈಲ್-ಟೈಡಿ ಡಿಸೈನ್, ರೀರ್ ಟೈರ್ ಹಗ್ಗರ್ ಮತ್ತು ಪಿಲ್ಲಿಯಾನ್ ಸೀಟ್ ಅನ್ನು ಪಡೆದಿದೆ.

ಒಟ್ಟಾರೆ ವಿನ್ಯಾಸದ ರೇಟಿಂಗ್

ಯಮಹಾ ಆರ್15 ವಿ3.0 : 8/10

ಯಮಹಾ ಆರ್15 ವಿ2.0 : 7/10

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಬೈಕಿನ ವೈಶಿಷ್ಟ್ಯತೆಗಳು

ಹೊಸ ಆರ್15 ವಿ 3.0 ಬೈಕ್ ಎಲ್ಇಡಿ ಹೆಡ್‍ಲೈಟ್ಸ್, ಎಲ್ಇಡಿ ಟೈ‍ಲ್‍ಲೈಟ್, ಹ್ಯಾಂಡಲ್‍ಬಾರ್ ಗಳ ಮೇಲೆ ಕ್ಲಿಪ್-ಆನ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದಿದ್ದು, ಇದರ ಮತ್ತೊಂದು ವಿಶೇಷತೆಯೆಂದರೇ ಸ್ಮೂತ್ ಡೌನ್‍ಶಿಫ್ಟ್ ಗಳಿಗಾಗಿ ಸ್ಲಿಪ್ಪರ್ ಕ್ಲಚ್ ಅನ್ನು ನೀಡಲಾಗಿದೆ. ಇನ್ನು ಇದರಲ್ಲಿ ಮಿಡ್ ರೇಂಜ್‍ನ ಟಾರ್ಕ್ ಉತ್ಪಾದನೆಗಾಗಿ ವೇರಿಯಬಲ್ ವೆಲ್ವ್ ಆಕ್ಚುಯೇಶನ್ ಅನ್ನು ಬಳಸಲಾಗಿದೆ.

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಮುಂಭಾಗದಲ್ಲಿ ಅಪ್‍ಸೈಡ್ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ಮತ್ತು ಹಿಂಭಾಗದಲ್ಲಿ ಮೋನೋಶಾಕ್ ಮತ್ತು ಎರಡೂ ಬದಿಗಳಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ನೀಡಲಾಗಿದೆ.

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಇನ್ನೊಂದು ಕಡೆ ಯಮಹಾ ಆರ್15 ವಿ2.0 ಬೈಕ್ ಮುಂಭಾಗದಲ್ಲಿ ಡ್ಯುಯಲ್ ಹೆಡ್‍ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, ಕ್ಲಿಪ್ ಆನ್ ಹ್ಯಾಂಡಲ್‍ ಬಾರ್ಸ್ ಮತ್ತು ಡಿಜಿಟಲ್ ಅನಲಾಗ್ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದಿದ್ದು, ಮುಂಭಾಗದಲ್ಲಿ ಅಪ್‍ಸೈಡ್ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ಮತ್ತು ಹಿಂಭಾಗದಲ್ಲಿ ಮೋನೋಶಾಕ್ ಮತ್ತು ಎರಡೂ ಬದಿಗಳಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ನೀಡಲಾಗಿದೆ.

ಒಟ್ಟಾರೆ ವೈಶಿಷ್ಟ್ಯತೆಗಳ ರೇಟಿಂಗ್

ಯಮಹಾ ಆರ್15 ವಿ3.0 : 9/10

ಯಮಹಾ ಆರ್15 ವಿ2.0 : 7/10

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಎಂಜಿನ್ ಸಾಮರ್ಥ್ಯ

ಯಮಹಾ ಆರ್15 ವಿ3.0 ಬೈಕ್ 155ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 19.03 ಬಿಹೆಚ್‌ಪಿ ಮತ್ತು 15ಎನ್ಎಮ್ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ.

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಹಾಗೆಯೇ ಆರ್ 15 ವಿ2.0 ಬೈಕ್‌ಗಳು 149ಸಿಸಿ ಎಂಜಿನ್ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಸಹಾಯದಿಂದ 16.7 ಬಿಹೆಚ್‍ಪಿ ಮತ್ತು 15ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದ್ದು, 6 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎಂಜಿನ್ ಸಾಮರ್ಥ್ಯದ ರೇಟಿಂಗ್

ಯಮಹಾ ಆರ್15 ವಿ3.0 : 9/10

ಯಮಹಾ ಆರ್15 ವಿ2.0 : 8/10

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಬೆಲೆಗಳು(ಎಕ್ಸ್ ಶೋರಂ ಪ್ರಕಾರ)

ಯಮಹಾ ಆರ್15 ವಿ3.0 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 1.25 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದು, ಯಮಹಾ ಆರ್15 ವಿ2.0 ರೂ 1.18 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಯಮಹಾ ಆರ್15 ವಿ3.0 v/s ಆರ್15 ವಿ.20...ಇದರಲ್ಲಿ ಯಾವುದು ಬೆಸ್ಟ್.?

ಯಮಹಾ ಆರ್15 ವಿ3.0 ಬೈಕ್, ಆರ್15 ವಿ2.0 ಬೈಕ್ ವಿನ್ಯಾಸದಲ್ಲಿ, ವೈಶಿಷ್ಟ್ಯತೆಗಳಲ್ಲಿ ಮತ್ತು ಎಂಜಿನ್ ಸಾಮರ್ಥ್ಯದಲ್ಲಿ ಉನ್ನತ್ತ ಗುಣಮಟ್ಟ ಹೊಂದಿದ್ದು, ಬೆಲೆಯಲ್ಲಿ ಆರ್15 ವಿ2.0 ಬೈಕ್‍ಗಿಂತ ರೂ.6 ಸಾವಿರ ಹೆಚ್ಟು ದುಬಾರಿಯಾಗಿರಲಿದೆ.

Read more on yamaha r15 comparison
English summary
Yamaha R15 V3.0 Vs. R15 V2.0 Comparison.
Story first published: Wednesday, March 14, 2018, 18:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark